ಲೇಡಿ ಸೂಪರ್ಸ್ಟಾರ್, ಲೇಡಿ ಅಮಿತಾಬ್ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಭಾರತದ ನಟಿ ವಿಜಯಶಾಂತಿ ಒಂದು ಕಾಲದಲ್ಲಿ ರೇಬಲ್ ನಾಯಕಿ. ಕನ್ನಡ, ತೆಲುಗು, ತಮಿಳು, ಮಲೆಯಾಳ, ಹಿಂದಿ ಹೀಗೆ ಪಂಚಭಾಷೆಗಳಲ್ಲಿ ನಟಿಸಿರುವ ಈ ನಟಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ, ಫಿಲ್ಮಫೇರ್ ಜೀವಮಾನದ ಸಾಧನೆ ಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿರುವ ಈ ನಟಿ 1990ರ ದಶಕದಲ್ಲಿ ತೆಲುಗಿನ ‘ಕರ್ತವ್ಯಂ’ ಸಿನಿಮಾಗೆ ಒಂದು ಕೋಟಿ ಸಂಭಾವನೆ ಪಡೆಯುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದು ಖ್ಯಾತಿ ಪಡೆದಿದ್ದರು. 2006ರ ತೆಲುಗಿನ ‘ನಾಯುದಮ್ಮ’ ಸಿನಿಮಾದ ಮೂಲಕ ವೃತ್ತಿ ಜೀವನಕ್ಕೆ ವಿರಾಮ ಘೋಷಿಸಿದ್ದ ಇವರು ಮತ್ತೆ 13 ವರ್ಷಗಳ ನಂತರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹೇಶ್ ಬಾಬು ಅಭಿನಯದ ‘ಸರಿಲೇರು ನೀಕೆವರು’ ಸಿನಿಮಾದಲ್ಲಿ ಮುಖ್ಯಪಾತ್ರವೊಂದಕ್ಕೆ ಬಣ್ಣ ಹಚ್ಚಲಿರುವ ವಿಜಯಶಾಂತಿ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚಲಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ವಿಜಯಶಾಂತಿ ಅವರ ಸಿನಿಮಾದ ಫಸ್ಟ್ಲುಕ್ನ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ರೆಬಲ್ ನಟಿ ಕ್ಲಾಸ್, ಪವರ್ಪುಲ್ ಹಾಗೂ ಪರ್ಫೆಕ್ಟ್ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಸಿನಿಮಾದಲ್ಲಿ ಭಾರತಿ ಎಂಬ ಪಾತ್ರವನ್ನು ನಿರ್ವಹಿಸುತ್ತಿರುವ ಇವರನ್ನು ಸಿನಿಮಾದುದ್ದಕ್ಕೂ ನೋಡಬಹುದು.

‘ಸರಿಲೇರು ನೀಕೆವರು’ ಸಿನಿಮಾದ ಶೂಟಿಂಗ್ ಹೈದರಾಬಾದ್ ಸುತ್ತಮುತ್ತ ಭರದಿಂದ ಸಾಗುತ್ತಿದೆ. ಅನಿಲ್ ರವಿಪುಡಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಆರ್ಮಿ ಮೇಜರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಈ ಚಿತ್ರವು 2020ರ ಜನವರಿ 12ಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಕೂಡ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.