ಭಾರತೀಯ ಸಮಾಜವನ್ನು ಚಿಕಿತ್ಸಕ ಕಣ್ಣಲ್ಲಿ ನೋಡಿದವರು ಸತ್ಯಜಿತ್ ರೇ. ಕಲೆ ಮತ್ತು ಸಾಹಿತ್ಯದ ಅಭಿರುಚಿ ಇದ್ದ ಬಂಗಾಳಿ ಕುಟುಂಬದಲ್ಲಿ ಜನಿಸಿದ ಸತ್ಯಜಿತ್ ರೇ ತಮ್ಮ ಸಿನಿಮಾಗಳ ಮೂಲಕ ಮನುಷ್ಯ ಸಂಬಂಧಗಳ ಹೊಸ ಶೋಧಕ್ಕೆ ಕಣ್ಣಾದವರು. ಅವರ 'ಪಥೇರ್ ಪಾಂಚಾಲಿ’ಯಂತೂ ವಿಶ್ವ ಸಿನಿಮಾ ರಂಗದಲ್ಲಿ ಮೈಲಿಗಲ್ಲು ಎನ್ನಿಸಿಕೊಂಡ ಸಿನಿಮಾ. ಸತ್ಯಜಿತ್ ರೇ ಇವತ್ತು ಬದುಕಿದ್ದಿದ್ದರೆ 100 ತುಂಬುತ್ತಿತ್ತು. (ಜನನ ಮೇ 2, 1921) ಅವರು ನಮ್ಮನ್ನು ಅಗಲಿ 28 ವರ್ಷಗಳು ಕಳೆದಿದ್ದರೂ ಅವರ ಸಿನಿಮಾಗಳ ಕುರಿತ ಚರ್ಚೆ ಈಗಲೂ ಮುಂದುವರಿದಿದೆ. ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಈ ವರ್ಷ ಇನ್ನಷ್ಟು ಚರ್ಚೆಗಳು ನಡೆಯಬಹುದು.

ಕಮರ್ಷಿಯಲ್ ಆರ್ಟಿಸ್ಟ್ ಆಗಿ ಬಣ್ಣಗಳ ಜೊತೆಗೆ ಬದುಕಬೇಕಿದ್ದ ರೇ, ಸಿನಿಮಾ ನಿರ್ಮಾತೃ ಆಗಲು ಕಾರಣಗಳು ಎರಡು. ಮೊದಲನೆಯದ್ದು ಫ್ರೆಂಚ್ ಫಿಲಂ ಮೇಕರ್ ಜೀನ್ ರೆನಾಯರ್ ಜೊತೆಗಿನ ಭೇಟಿ; ಎರಡನೆಯದ್ದು ಲಂಡನ್ನಿಗೆ ಭೇಟಿ ನೀಡಿದ್ದಾಗ ವಿಟ್ಟೋರಿಯೊ ಡಿ ಸಿಕಾ ನ ‘ಬೈಸಿಕಲ್ ಥೀವ್ಸ್’ ಸಿನಿಮಾ ನೋಡಿದ್ದು. ಮೂಕಿ ಯುಗದಲ್ಲೇ 40ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದ ಜೀನ್ ರೆನಾಯರ್, ರೇ ಅವರ ಸಿನಿಮಾಗಳ ಮೇಲೆ ವಿಶೇಷ ಪ್ರಭಾವ ಬೀರಿದ್ದಾರೆ.

ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಸಂಗೀತ ಸಂಯೋಜಕ, ಗ್ರಾಫಿಕ್ ಆರ್ಟಿಸ್ಟ್, ಚಿತ್ರಸಾಹಿತಿ ಮತ್ತು ಲೇಖಕರೂ ಆಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ್ದ ರೇ, ಅಪರಾಜಿತೊ, ದಿ ವರ್ಲ್ಡ್ ಆಫ್ ಅಪೂ, ದೇವಿ, ತೀನ್ ಕನ್ಯಾ, ಚಾರುಲತಾ, ದಿ ಮಿಡ್ಲ್ಮನ್, ಘರೇ ಬೈರೆ ಮುಂತಾಗಿ ಹಲವು ಮುತ್ತುಗಳನ್ನು ಬಿಟ್ಟುಹೋಗಿದ್ದಾರೆ. ಭಾರತ ರತ್ನ, ಅಕಾಡೆಮಿ (ಆಸ್ಕರ್) ಗೌರವ, ಫಾಲ್ಕೆ ಮುಂತಾದ ಪ್ರಶಸ್ತಿಗಳು ಅವರು ನಡೆದ ದಾರಿಯಲ್ಲಿ ಸಹಜವಾಗಿಯೇ ಹೆಗಲೇರಿವೆ. ಅವರು ಬರೆದ ಹಲವಾರು ಪುಸ್ತಕಗಳು ಈಗಲೂ ಚಿತ್ರಾಸಕ್ತರ ಕೈಪಿಡಿಗಳಾಗಿವೆ. ಹ್ಯಾಪಿ ಬರ್ತ್ಡೇ ಮಾಣಿಕ್ ದಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.