ಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪತ್ನಿ, ನಿರ್ಮಾಪಕಿ ಗೌರಿ ಖಾನ್ ಅವರ ಬಗ್ಗೆ ತಿಳಿದಿಲ್ಲದ ಶಾರೂಖ್ ಅಭಿಮಾನಿ ಇರಲಿಕ್ಕಿಲ್ಲ. ಗೌರಿ ಈಗ ತಮ್ಮ ಪತಿಯ ನಾಲ್ಕು ಮಹಡಿಗಳ ಕಚೇರಿಯನ್ನು ಕೋವಿಡ್ 19 ಕಾಯಿಲೆ ಪೀಡಿತರಿಗೆಂದು ಕ್ವಾರೆಂಟೀನ್ ಕೇಂದ್ರವಾಗಿ ಪರಿವರ್ತಿಸಿದ್ದಾರೆ. ಇದರ ಫೋಟೊಗಳನ್ನು ಅವರು ಹಂಚಿಕೊಂಡಿದ್ದಾರೆ.

ಶಾರೂಖ್ ಅವರ ಕಚೇರಿಯು ಈಗ 22 ಹಾಸಿಗೆಗಳು ಇರುವ ಕ್ವಾರೆಂಟೀನ್ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕೋವಿಡ್ 19 ಕಾಯಿಲೆಗೆ ತುತ್ತಾಗಿರುವವರಿಗೆ ಚಿಕಿತ್ಸೆ ಕೊಡಲು ತಮ್ಮ ಕಚೇರಿಯನ್ನು ಬಳಸಿಕೊಳ್ಳಬಹುದು ಎಂದು ಶಾರೂಖ್ ಅವರೇ ಕಳೆದ ತಿಂಗಳು ಪ್ರಕಟಿಸಿದ್ದರು.

ಗೌರಿ ಅವರು ಒಳಾಂಗಣ ವಿನ್ಯಾಸಗಾರ್ತಿಯೂ ಹೌದು. ಶಾರೂಖ್ ಕಚೇರಿಯನ್ನು ಕ್ವಾರೆಂಟೀನ್ ಕೇಂದ್ರವನ್ನಾಗಿ ಪರಿವರ್ತಿಸಿದ್ದು ಗೌರಿ ಅವರ ಒಳಾಂಗಣ ವಿನ್ಯಾಸ ಕಂಪನಿ. ‘ಅಗತ್ಯವಸ್ತುಗಳನ್ನು ಹಾಗೂ ಸೇವೆಗಳನ್ನು ಒದಗಿಸುವ ಕ್ವಾರೆಂಟೀನ್ ಸ್ಥಳ ಇದು. ಕೋವಿಡ್ 19ರ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಒಟ್ಟಾಗಿ ಇರಬೇಕು. ನಾವೆಲ್ಲ ಗಟ್ಟಿಯಾಗಿ ನಿಲ್ಲಬೇಕು’ ಎಂದು ಆಕೆ ಹೇಳಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಿಗೆ ಅನುಸಾರವಾಗಿ ಈ ಕ್ವಾರೆಂಟೀನ್ ಕೇಂದ್ರ ಶುರು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.