ಜಾಹೀರಾತಿನಲ್ಲಿ ಸಿನಿಮಾ ಹಾಡುಗಳನ್ನು ಬಳಸುವುದು ಸಾಮಾನ್ಯ. ಆದರೆ ಇಲ್ಲಿ ಜಾಹೀರಾತುಗಳನ್ನೇ ಸೇರಿಸಿ ಸಿನಿಮಾ ಹಾಡಾಗಿ ಮಾಡಿದ್ದಾರೆ ನಿರ್ದೇಶಕ ‘ಸಿಂಪಲ್’ ಸುನಿ.

ನಟ ಶರಣ್ ಅಭಿನಯದ ‘ಅವತಾರ ಪುರುಷ’ ಡಿ.10ಕ್ಕೆ ತೆರೆ ಕಾಣುತ್ತಿದ್ದು, ಚಿತ್ರದ ಮತ್ತೊಂದು ಹಾಡು ‘ಈ ಲಡ್ಡು ಬಂದು ಬಾಯಿಗ್ ಬಿತ್ತಾ’ ಬಿಡುಗಡೆಯಾಗಿದ್ದು, ವೈರಲ್ ಆಗುತ್ತಿದೆ. ಪ್ರಮುಖ ಜಾಹೀರಾತುಗಳನ್ನೇ ಕೂಡಿಸಿ ಹಾಡು ಹೆಣೆದಿದ್ದಾರೆ ನಿರ್ದೇಶಕ ಸುನಿ. ಇದಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದು, ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತಾವ್ರೊ ಹಾಡಿದ್ದಾರೆ. ಜಾಹೀರಾತು ದೃಶ್ಯಗಳಲ್ಲಿನ ಪಾತ್ರಗಳಂತೇ ಶರಣ್ ಹಾಗೂ ಆಶಿಕಾ ರಂಗನಾಥ್ ನಟಿಸಿದ್ದಾರೆ. ಫೆವಿಕ್ವಿಕ್, ಹ್ಯಾಪಿಡೆಂಟ್, ಸೆಂಟರ್ ಫ್ರೆಶ್ ಹೀಗೆ ಸಾಲು ಸಾಲು ಜಾಹೀರಾತುಗಳೇ ಈ ಹಾಡಿನಲ್ಲಿದೆ.

ಕಳೆದ ಏಪ್ರಿಲ್ನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಟೈಟಲ್ ಟ್ರ್ಯಾಕ್ ‘ಆರ್ಸಿಬಿ ಕಪ್’ ಹಿಟ್ ಆಗಿತ್ತು. ವಾಮಾಚಾರ, ಮಾಟ ಮಂತ್ರದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದ್ದು, ಶರಣ್ ಜ್ಯೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಹತ್ತಕ್ಕೂ ಹೆಚ್ಚು ಗೆಟ್ಅಪ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ನಿರ್ಮಾಣ ಮಾಡಿರುವ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಕಾಣುತ್ತಿದ್ದು, ಮೊದಲನೇ ಭಾಗ ರಿಲೀಸ್ ಆದ 101ನೇ ದಿನಕ್ಕೆ ಎರಡನೇ ಭಾಗವನ್ನು ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.