ಗ್ಲ್ಯಾಮರಸ್, ಬಬ್ಲಿ ಬಬ್ಲಿ ಪಾತ್ರಗಳಿಂದಷ್ಟೇ ಗುರುತಿಸಿಕೊಂಡಿದ್ದ ನಟಿ ಶುಭಾ ಪೂಂಜಾ, ಬಿಗ್ಬಾಸ್ ಪಯಣದ ಬಳಿಕ ಬದಲಾಗಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಎಡವಿದ್ದೇನೆ ಎನ್ನುವ ಶುಭಾ, ಮುಂದಿನ ಸಿನಿಮಾ ಪಯಣದಲ್ಲಿ ಹೆಚ್ಚು ಕೌಟುಂಬಿಕ ಚಿತ್ರಗಳಲ್ಲಿ ಹಾಗೂ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತೇನೆ ಎಂದಿದ್ದಾರೆ. ತೆರೆ ಮೇಲೆ ಬರಲು ಸಜ್ಜಾಗಿರುವ ಅವರ ಮುಂದಿನ ಚಿತ್ರ ‘ತ್ರಿದೇವಿ’ಗಾಗಿ ಕಳರಿಪಯಟ್ಟು ಕಲಿತ ಅನುಭವವನ್ನು ‘ಸಿನಿಮಾ ಪುರವಣಿ’ ಜೊತೆಗೆ ಹಂಚಿಕೊಂಡಿದ್ದಾರೆ.

ಬಿಗ್ಬಾಸ್ ಗುಂಗಿನಿಂದ ಹೊರಬಂದಿದ್ದೀರಾ? ಹೇಗಿತ್ತು ಆ ಪಯಣ?

ಆ ಗುಂಗಿನಿಂದ ಹೊರಬರಲು ಸಾಧ್ಯವೇ ಇಲ್ಲ. ಅದೊಂದು ಅದ್ಭುತವಾದ ಪಯಣ. ಮನೆ ಒಳಗೆ ಪ್ರವೇಶಿಸುವ ಮೊದಲು ಭಯವಿತ್ತು. ಅದೆಲ್ಲ ಮಾಯವಾಗಿ, 72 ದಿನ ಕಳೆದ ಬಗೆ ಅವಿಸ್ಮರಣೀಯ. ನನ್ನ ಇಲ್ಲಿಯವರೆಗಿನ ಸಿನಿಮಾ ಪಯಣ, ವೈಯಕ್ತಿಕ ಜೀವನದಲ್ಲಿ ಇಂತಹ ಅನುಭವ ಬೇಕಾಗಿತ್ತು. ಮನೆಯೊಳಗೆ ಸಂತೋಷವಾಗಿದ್ದುಕೊಂಡು ಹಲವು ವಿಷಯಗಳನ್ನು ಕಲಿತೆ. ಎಲ್ಲರ ಜೊತೆಯೂ ಹೊಂದಾಣಿಕೆ ಇತ್ತು, ಯಾರೊಂದಿಗೂ ಭಿನ್ನಾಭಿಪ್ರಾಯ ಇರಲಿಲ್ಲ. ಇನ್ನೇನು ಮೂರೇ ವಾರ ಇರುವಾಗ ಈ ಪಯಣ ನಿಂತದಕ್ಕೆ ಬೇಸರವಾಯಿತು. ಆದರೆ, ಮನೆಯಿಂದ ಹೊರಬಂದ ಬಳಿಕ ಹೊರಗಿನ ಪರಿಸ್ಥಿತಿಯನ್ನು ನೋಡಿ, ಖಂಡಿತವಾಗಿಯೂ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದೆನಿಸಿತು. ನಾವೆಲ್ಲರೂ ವಿಜೇತರಾಗಿ ಹೊರಬಂದೆವು. ನಾನು ಈ ಪಯಣವನ್ನು ಸಕಾರಾತ್ಮಕವಾಗಿಯೇ ತೆಗೆದುಕೊಂಡಿದ್ದೇನೆ.

ಬಿಗ್ಬಾಸ್ ಶುಭಾ ಪೂಂಜಾ ಅವರ ಜೀವನ ಬದಲಾಯಿಸಿದ್ಯಾ?

ಖಂಡಿತವಾಗಿಯೂ. ಈ ಹಿಂದಿನ ಎಲ್ಲ ಬಿಗ್ಬಾಸ್ ಆವೃತ್ತಿಗೂ ನನ್ನನ್ನು ಸ್ಪರ್ಧಿಯಾಗಿ ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ನನ್ನ ಮನಃಸ್ಥಿತಿ ಸಿದ್ಧವಾಗಿರಲಿಲ್ಲ. ಮನೆಯೊಳಗೆ ಪ್ರವೇಶಿಸಲು ಸಂಪೂರ್ಣವಾಗಿ ಸಿದ್ಧತೆ ಇರಬೇಕು. ಈ ಬಾರಿ ನಾನು ಸಂಪೂರ್ಣ ತಯಾರಾಗಿದ್ದೆ. ಜೊತೆಗೆ ನನ್ನ ಪತಿಯೂ ನನಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಿದರು. ಒಂದು ಸಿನಿಮಾ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದೆ. ಹೀಗಾಗಿ ಒಪ್ಪಿಕೊಂಡೆ. ಬಿಗ್ಬಾಸ್ ಮನೆ ಏನೆಲ್ಲ ಹೇಳಿಕೊಡುತ್ತದೆ ಎನ್ನುವುದನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಟೂತ್ಬ್ರೆಷ್ನಿಂದ ಹಿಡಿದು ಬೆಡ್ಶೀಟ್ನ ಮೌಲ್ಯವನ್ನೂ ಆ ಮನೆ ಕಲಿಸುತ್ತದೆ. ಜೀವನವನ್ನು ಹೇಗಾದರೂ ನಡೆಸಬಹುದು, ಎಷ್ಟೇ ಅನಾಮಿಕರ ಜೊತೆಗೂ ಬದುಕಬಹುದು ಎನ್ನುವ ವಿಶ್ವಾಸ ಬರುತ್ತದೆ.

‘ತ್ರಿದೇವಿ’ಯಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ... ಕಳರಿಪಯಟ್ಟು ಕಲಿತ ಅನುಭವ ಹೇಗಿತ್ತು?

ನಾನು ಯಾವತ್ತೂ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲವೂ ಗ್ಲ್ಯಾಮರಸ್ ಹಾಗೂ ಬಬ್ಲಿಬಬ್ಲಿಯಾದ ಪಾತ್ರಗಳೇ ಆಗಿದ್ದವು. ಹೀಗಾಗಿ ಕಳರಿಪಯಟ್ಟು ಕಲಿಯುವುದು ಬಹಳ ಸವಾಲಾಗಿತ್ತು. ಸಿನಿಮಾದಲ್ಲಿನ ನನ್ನ ಪಾತ್ರ ಕಳರಿಪಯಟ್ಟು ಕಲಿತ ಹೆಣ್ಣಿನ ಪಾತ್ರವಾಗಿದೆ.ತ್ರಿದೇವಿಯಲ್ಲಿ ನಟಿಯ ಪಾತ್ರ ಮಾಡುತ್ತಿದ್ದೇನೆ. ಈ ನಟಿಯ ಮುಂದಿನ ಸಿನಿಮಾ ಆ್ಯಕ್ಷನ್ ಸಿನಿಮಾ ಆಗಿರುತ್ತದೆ. ಹೀಗಾಗಿ ಕಳರಿಪಯಟ್ಟು ಕಲಿಯುತ್ತಾಳೆ. ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ನನ್ನ ಸಾಹಸ ನೈಜವಾಗಿ ಕಾಣಬೇಕಿತ್ತು. ಹೀಗಾಗಿ ಚಿತ್ರೀಕರಣ ಆರಂಭವಾಗುವ ಮುಂಚೆ ಒಂದು ತಿಂಗಳು ಕಳರಿಪಯಟ್ಟು ತರಬೇತಿ ಪಡೆದಿದ್ದೆ. ಕೇರಳದಿಂದ ಮೋತಿ ಎನ್ನುವ ಕಳರಿಪಯಟ್ಟು ಗುರುಗಳು ಬಂದು ವಯನಾಡ್ ಹಾಗೂ ಮಡಿಕೇರಿಯ ಸೋಮವಾರಪೇಟೆಯಲ್ಲಿ ತರಬೇತಿ ನೀಡಿದ್ದರು.

ಪಾತ್ರಗಳ ಆಯ್ಕೆಯಲ್ಲಿ ಶುಭಾ ಪೂಂಜಾ ಎಡವಿದ್ದರೇ?

ಹೌದು, ಇದನ್ನು ಒಪ್ಪಿಕೊಳ್ಳುತ್ತೇನೆ. ಒಂದೇ ರೀತಿಯ ಪಾತ್ರಗಳನ್ನು ತುಂಬಾ ಮಾಡುತ್ತಾ ಬಂದಿದ್ದೇನೆ. ನನಗೂ ಇದರಿಂದ ಬೇಸರವಾಗಿತ್ತು. ಒಂದು ಗ್ಲ್ಯಾಮರಸ್ ಪಾತ್ರ ಮಾಡಿದ ಬಳಿಕ ಅದೇ ರೀತಿ ಪಾತ್ರಗಳ ಆಫರ್ ಬಂದು ಒಂದು ರೀತಿಯಲ್ಲಿ ನಾನು ಎಡವಿದ್ದೇನೆ. ಈ ಹಿಂದೆ ಇಂತಹ ಪಾತ್ರ ಮಾಡಿದ್ದೇನೆ, ಇದೇ ರೀತಿಯ ಪಾತ್ರ ಮುಂದೆ ಮಾಡುವುದಿಲ್ಲ, ಬೇರೆ ಮಾಡುತ್ತೇನೆ ಎನ್ನಬಹುದಿತ್ತು. ಆದರೆ ನಾನು ಈ ರೀತಿ ಹೇಳದೇ ಇದ್ದಿದ್ದು ತಪ್ಪಾಯಿತು ಎನ್ನಿಸಿದೆ. ಈ ತಪ್ಪನ್ನು ಮುಂದೆ ಮಾಡುವುದಿಲ್ಲ.

ಮುಂದಿನ ಸಿನಿಮಾ ಪಯಣ ಯಾವ ರೀತಿ ಇರಲಿದೆ?

ನನ್ನ ಮುಂದಿನ ಸಿನಿಮಾ ಆಯ್ಕೆಗಳು ವಿಭಿನ್ನವಾಗಿರುತ್ತದೆ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಬೇಕು ಎನ್ನುವ ನಿರ್ಧಾರ ಬಿಗ್ಬಾಸ್ ಮನೆ ಪ್ರವೇಶಿಸುವ ಮೊದಲೇ ಮಾಡಿದ್ದೆ. ಮುಂದಿನ ಸಿನಿಮಾ ಪಯಣದಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತೇನೆ. ಕೌಟುಂಬಿಕ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಆಸೆ ನನಗಿದೆ. ಬಿಗ್ಬಾಸ್ಗೆ ಹೋಗುವ ಮೊದಲೇ ಒಪ್ಪಿಕೊಂಡ ಎರಡು ಸಿನಿಮಾಗಳು ಇವೆ. ‘ಅಂಬುಜಾ’ ಹಾಗೂ ‘ತ್ರಿದೇವಿ’ ತಂಡವೇ ನಿರ್ಮಿಸುತ್ತಿರುವ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದೇನೆ. ಹೊಸ ಆಫರ್ಗಳು ಇನ್ನೂ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.