ಮಹಿಳೆಯರ ಸಾಹಸದ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ತ್ರಿದೇವಿ’.

ಶುಭಾ ಪೂಂಜಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಅಶ್ವಿನ್ ಎ. ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರೇ ಆದ ಅಶ್ವಿನ್ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಗೀತೆಗಳಿಗೆ ಕಾರ್ತಿಕ್ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಚಿತ್ರಕ್ಕೆ ಫಿಡಲ್ ಅಶೋಕ ಹಾಗೂ ಡಾಸ್ಮೋಡ್ ಐ. ಲುಲಿಬಿ ಅವರು ಸಂಗೀತ ಸಂಯೋಜಿಸಿದ್ದಾರೆ.

ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ನಟಿ ಶುಭಾ ಪೂಂಜಾ ಮಾತನಾಡಿ, ‘ಇದು ನನ್ನ ಕನಸಿನ ಕೂಸು. ಈವರೆಗೆ ಬರೀ ಅಳುಮುಂಜಿ ಹಾಗೂ ಒಂದೇ ರೀತಿಯ ಪಾತ್ರಗಳನ್ನು ಮಾಡಿ ಬೇಸರವಾಗಿತ್ತು. ಏನಾದರೂ ಹೊಸ ಪಾತ್ರ ಮಾಡಬೇಕು ಎಂಬ ತುಡಿತ ಕಾಡುತ್ತಿತ್ತು. ಗೆಳೆಯ ಅಶ್ವಿನ್ ಮ್ಯಾಥ್ಯೂಗೆ ನನಗಾಗಿ ವಿಭಿನ್ನ ಕಥೆ ಬರೆಯಲು ಹೇಳಿದ್ದೆ. ಒಂದಷ್ಟು ದಿನಗಳ ನಂತರ ಈ ಕಥೆ ಮಾಡಿದರು. ಹುಡುಗಿಯರೆಂದರೆ ಅಮಾಯಕರಲ್ಲ, ಅವರು ಸಾಹಸದಲ್ಲಿ ಹಿಂದೆ ಬಿದ್ದಿಲ್ಲ ಎಂದು ತೋರಿಸುವ ಆ್ಯಕ್ಷನ್ ಚಿತ್ರವಿದು. ಈ ತಂಡದಲ್ಲಿ ನಾನು ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿದ್ದು, ಸಿನಿಮಾ ನಿರ್ಮಾಣ ಕೂಡ ಕಲಿತೆ’ ಎಂದು ಹೇಳಿದರು.

ಮತ್ತೊಬ್ಬ ನಾಯಕಿ ಸಂಧ್ಯಾ ಲಕ್ಷ್ಮೀನಾರಾಯಣ ಅವರಿಗೆ ಈ ಚಿತ್ರದಲ್ಲಿ ಆ್ಯಕ್ಷನ್ ಇರುವುದರಿಂದ ಕಥೆ ಇಷ್ಟವಾಯಿತಂತೆ. ತ್ರಿದೇವಿಯರು ಹೇಗಿದ್ದಾರೆ ಎಂಬುದನ್ನು ತೆರೆಯ ಮೇಲೇ ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.