ಬೆಂಗಳೂರು: ‘ಸಖತ್’ ಸಿನಿಮಾ ಯಶಸ್ಸಿನ ಗುಂಗಲ್ಲಿ ‘ಅವತಾರ ಪುರುಷ’ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ನಿರ್ದೇಶಕ ಸಿಂಪಲ್ ಸುನಿ ತಮ್ಮ ಹೊಸ ಪ್ರೊಜೆಕ್ಟ್ ಘೋಷಿಸಿದ್ದಾರೆ.

ಸುನಿ ನಿರ್ದೇಶನದಲ್ಲಿ ದುಷ್ಯಂತ್ ನಟಿಸುತ್ತಿರುವ ‘ಗತವೈಭವ’ ಚಿತ್ರದ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ನಾಯಕನ ಪರಿಚಯವನ್ನು ತಮ್ಮದೇ ಶೈಲಿಯಲ್ಲಿಭಿನ್ನವಾಗಿ ಚಿತ್ರೀಕರಿಸಿದ್ದಾರೆ ಸುನಿ. ಸಿನಿಮಾ ರೀತಿಯೇ 8 ನಿಮಿಷದ ಟೀಸರ್ ನಿರ್ಮಾಣ ಮಾಡಲಾಗಿದೆ. ದುಷ್ಯಂತ್ ಚೊಚ್ಚಲ ಸಿನಿಮಾ ಇದಾಗಿದೆ. ಟೀಸರ್‌ನಲ್ಲೇ ನಟ ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರದ ಪ್ರಚಾರನ್ನೂ ಸುನಿ ಅವರು ಸೇರ್ಪಡಿಸಿದ್ದು, ‘ಸಿಂಪಲ್ ಸುನಿ’ ಝಲಕ್ ನೀಡಿದ್ದಾರೆ.

ಇಂಗ್ಲಿಷ್‌ನ ‘ಆ್ಯರೋ’ ಸರಣಿಯಲ್ಲಿನ ಸೂಪರ್‌ಹೀರೊನಂತೆ ಕೈಯಲ್ಲಿ ಬಿಲ್ಲು, ಬಾಣದೊಂದಿಗೆ ತಲೆಗೆ ಹುಡ್ ಧರಿಸಿ ದುಷ್ಯಂತ್ ತಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕಥೆಯ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಯುವ ನಟ ದುಷ್ಯಂತ್, 2018ರಿಂದ ಚಿತ್ರರಂಗಕ್ಕೆ ಧುಮುಕಲು ತಯಾರಿ ನಡೆಸುತ್ತಿದ್ದರು. ಅವರು ನಾಗತಿಹಳ್ಳಿ ಚಂದ್ರಶೇಖರ್ ನೇತೃತ್ವದ ಟೆಂಟ್ ಸಿನಿಮಾ ಮತ್ತು ಪುಷ್ಕರ್ ಆ್ಯಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಿಂದ ನಟನೆಯ ತರಬೇತಿ ಪಡೆದಿದ್ದಾರೆ. ನೀನಾಸಂ ಧನಂಜಯ್ ಮತ್ತು ರಂಗಭೂಮಿ ಕಲಾವಿದ ಕೃಷ್ಣ ಅವರ ಮಾರ್ಗದರ್ಶನದಲ್ಲಿ ಆಯೋಜಿಸಿದ ನಟನಾ ಕಾರ್ಯಾಗಾರಗಳಲ್ಲಿ ಭಾಗವಹಿಸಿಸುವುದರ ಜೊತೆಗೆ, ಬೆಂಗಳೂರು ಮತ್ತು ಮೈಸೂರಿನಲ್ಲಿ ಹಲವಾರು ಬೀದಿ ನಾಟಕಗಳು ಮತ್ತು ರಂಗಭೂಮಿಯಲ್ಲೂ ದುಷ್ಯಂತ್ ನಟಿಸಿದ್ದಾರೆ. ಶಾಮಕ್ ದವರ್ ಸಂಸ್ಥೆಯಲ್ಲಿ ನೃತ್ಯ ತರಬೇತಿ ಹಾಗೂ ಭೂಷಣ್ ಮತ್ತು ಟಗರು ರಾಜು ಅವರಿಂದ ಮಾರ್ಷಿಯಲ್ ಆರ್ಟ್ಸ್ ಮತ್ತು ಜಿಮ್ನಾಸ್ಟಿಕ್ಸ್‌ನಲ್ಲಿ ತರಬೇತಿಯನ್ನೂ ಸಹ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.