ಡ್ರೀಮ್ ಸ್ಟಾರ್ ಮಯೂರ್ ಪಟೇಲ್ ಇದೇ ಮೊದಲ ಬಾರಿಗೆ ನಿರ್ದೇಶನದ ಮೂಲಕ ಸದ್ದು ಮಾಡಲು ‘ತಮಟೆ’ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅದೂ ಅಲ್ಲದೇ ತಮ್ಮ ತಂದೆಯೇ ಬರೆದ ಕಾದಂಬರಿಯನ್ನು ಆಧರಿಸಿದ ‘ತಮಟೆ’ಗೆ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಯೂರ್ ತಂದೆ ಮದನ್ ಪಟೇಲ್ ಈ ಸಿನಿಮಾದನಾಯಕ.

ಕಂಠೀರವ ಸ್ಟುಡಿಯೊದಲ್ಲಿ ಶುಕ್ರವಾರ ಸಿನಿಮಾದ ಮುಹೂರ್ತ ಕೂಡ ನಡೆಯಿತು.ಬೆಂಗಳೂರು, ಕೋಲಾರ ಹಾಗೂ ಬಂಗಾರಪೇಟೆಯಲ್ಲಿ 23 ದಿನಗಳು ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ ಚಿತ್ರ ತಂಡ.

ಈ ಸಿನಿಮಾದ ಕಥೆಗೆ ಹಲವು ಆಯಾಮಗಳಿವೆ. ತಮಟೆ ಎನ್ನುವುದು ಒಂದು ವಾದ್ಯ ಪರಿಕರವಷ್ಟೇ ಅಲ್ಲ, ಸಮಾಜದ ಧ್ವನಿ. ಹಾಗಾಗಿ ಚಿತ್ರದ ಶೀರ್ಷಿಕೆಗೆ‘ಸೌಂಡ್ ಆಫ್ ಸೊಸೈಟಿ’ ಅಡಿ ಬರಹ ನೀಡಲಾಗಿದೆ.ತಮಟೆ ಬಾರಿಸುವ ಜನಾಂಗದವರ ಮೇಲೆ ನಡೆಯುವ ಶೋಷಣೆಯನ್ನು ಎಳೆಎಳೆಯಾಗಿ ತೆರೆದಿಡುವ ಕಾದಂಬರಿಯನ್ನು ಸಿನಿಮಾ ಭಾಷೆಗೆ ಒಗ್ಗಿಸಲಾಗಿದೆ ಎಂದರು ಕಥೆ, ಚಿತ್ರಕಥೆ ಹಾಗೂ ಸಂಗೀತದ ಹೊಣೆ ಹೊತ್ತಿರುವ ಚಿತ್ರದ ನಾಯಕ ಮದನ್ ಪಟೇಲ್.

ಸಿನಿಮಾದ ಕಥಾ ನಾಯಕ ಮುನಿಯ ತಮಟೆ ಬಾರಿಸಿಕೊಂಡು, ಬಡತನದಲ್ಲೇ ಜೀವನ ಸಾಗಿಸುತ್ತಾನೆ. ತಮಟೆ ಬಾರಿಸುವವರನ್ನು ರಾಜಕೀಯ ವ್ಯಕ್ತಿಗಳು ಹೇಗೆಲ್ಲ ಬಳಸಿಕೊಂಡು, ಶೋಷಿಸುತ್ತಾರೆ ಹಾಗೂ ಶೋಷಣೆಯ ವಿರುದ್ಧ ಮುನಿಯ ಹೇಗೆ ಸಿಡಿದೇಳುತ್ತಾನೆ, ತನ್ನ ಜನಾಂಗಕ್ಕೆ ನ್ಯಾಯ ಕೊಡಿಸಲು ಹೇಗೆ ಹೋರಾಡುತ್ತಾನೆ ಎನ್ನುವುದು ಈ ಸಿನಿಮಾದ ಕಥಾಹಂದರ.

‘ಅಪ್ಪ ಬರೆದಿದ್ದ ಕಾದಂಬರಿ ಓದಿದ್ದೆ. ತುಂಬಾ ಇಷ್ಟವಾಗಿತ್ತು. ಇದನ್ನೇ ಸಿನಿಮಾ ಮಾಡಬಹುದು ಎನಿಸಿ, ಅಭಿನಯಿಸುವಂತೆ ಅಪ್ಪನನ್ನು ಕೇಳಿದಾಗ ಅವರು ಒಪ್ಪಿದರು. ಅಪ್ಪನಿಗೆ ಸಂಗೀತದ ಅರಿವು ಇದ್ದು, ತಮಟೆ ವಾದ್ಯ ಬಾರಿಸುವುದು ಗೊತ್ತು. ಚಿತ್ರದ ಕಥೆಗೆ ಖಂಡಿತ ನ್ಯಾಯ ಒದಗಿಸಬಹುದು’ ಎನ್ನುತ್ತಾರೆ ನಿರ್ದೇಶಕ ಮಯೂರ್ ಪಟೇಲ್.

ಶೋಷಣೆಗೆ ಒಳಗಾಗುವ ಯುವನಕ ಪಾತ್ರದಲ್ಲಿ ಟೆನಿಸ್ ಕೃಷ್ಣ,ನ್ಯಾಯಾಧೀಶೆ ಪಾತ್ರದಲ್ಲಿವಿನಯ್ ಪ್ರಸಾದ್ ಹಾಗೂವಕೀಲರ ಪಾತ್ರದಲ್ಲಿಲಕ್ಷ್ಮಣ್ ಕಾಣಿಸಿಕೊಳ್ಳಲಿದ್ದಾರೆ. ವಿದ್ಯಾವಂತೆಯ ಯುವತಿ ಪಾತ್ರದಲ್ಲಿ ಐಶ್ವರ್ಯ, ಈಕೆಯ ಪ್ರೇಮಿಯಾಗಿ, ಮುನಿಯನ ಮಗನ ಪಾತ್ರದಲ್ಲಿಚಂದ್ರೇಗೌಡ ನಟಿಸುತ್ತಿದ್ದಾರೆ. ಈಇಬ್ಬರು ಕಿರುತೆರೆಯ ಕಲಾವಿದರು. ಇವರಷ್ಟೇ ಅಲ್ಲದೆ, ಸುಮಾರು 50 ಮಂದಿ ಕಲಾವಿದರು ‘ತಮಟೆ’ಗಾಗಿ ಬಣ್ಣ ಹಚ್ಚಿದ್ದಾರೆ.ತಾರಾಗಣದಲ್ಲಿ ರಮೇಶ್ ಪಂಡಿತ್, ರಮೇಶ್ ಭಟ್, ಮೋಹನ್ ಜುನೇಜ ಇದ್ದಾರೆ.

ಎಂ. ವಂದನಾ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ವೆಸ್ಲೀ ಬ್ರೌನ್, ಸಂಭಾಷಣೆ ವೀರೇಶ್ ದೊಡ್ಡಬಳ್ಳಾಪುರ, ಸಂಕಲನ ಗುರುರಾಜ್ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.