ಹೋಷ್‌ವಾಲೋಂಕೊ ಖಬರ್ ಕ್ಯಾ ಬೇಖುದಿ ಕ್ಯಾ ಚೀಸ್ ಹೈ... ಇಷ್ಕ್ ಕೀಜಿಯೆ ಫಿರ್ ಸಮಝಿಯೆ.. ಜಿಂದಗಿ ಕ್ಯಾ ಚೀಸ್ ಹೈ...

ಈ ಹಾಡು ನೆನಪಾದರೆ ಸಾಕು, ರೇಷ್ಮೆಕೂದಲಿನ, ನೀಳಕಾಯದ, ಮೃಗನಯನಿ ಸೋನಾಲಿ ಬೇಂದ್ರೆ ನೆನಪಾಗುವುದು ಖಚಿತ. ಆ ಸುಂದರಿಯ ರೇಷ್ಮೆಕೂದಲೀಗ ಅದೆಲ್ಲಿವೆಯೋ, ನುಣ್ಣನೆಯ ತಲೆಯನ್ನಿಟ್ಟುಕೊಂಡೂ ಅದೇ ಮಿಂಚಿನ ನಗೆ ಬೀರುತ್ತಾಳೆ ಸೋನಾಲಿ

‘ಇನ್ನೇನು ಬೇಕು. ಎಲ್ಲವೂ ನಿರಾಳ. ಹೀಗೊಂದು ಭಾವ ಮೂಡುವ ವೇಳೆಗೆ ಬದುಕು ನಮ್ಮನ್ನು ಮನಸೋಇಚ್ಛೆ ಎಸೆದು ಬಿಡುತ್ತೆ. ನನಗೆ ಕ್ಯಾನ್ಸರ್ ಬಂದಿದೆ ಎಂಬುದು ಗೊತ್ತಿರಲಿಲ್ಲ. ಯಾತನಾದಾಯಕ ಪರೀಕ್ಷೆಗೆ ಒಳಗಾಗಿ, ವೈದ್ಯರು ದೃಢಪಡಿಸಿದ ನಂತರವಷ್ಟೇ ನಾನು ಭಯಾನಕ ಕಾಯಿಲೆಯ ಸುಳಿಯೊಳಗೆ ಸಿಲುಕಿದ್ದು ಅರಿವಿಗೆ ಬಂತು. ಆದರೆ ಈಗಲೂ ನನ್ನ ಧೈರ್ಯ ಕುಂದಿಲ್ಲ. ಆಪ್ತರು ಮತ್ತು ಸ್ನೇಹಿತರು ಜೊತೆಗಿದ್ದಾರೆ. ಅವರ ಹಾರೈಕೆ ನನ್ನೊಂದಿಗೆ ಇದೆ’.

ಚಿಕಿತ್ಸೆಗಾಗಿ ಅಮೆರಿಕದ ನ್ಯೂಯಾರ್ಕ್‌ಗೆ ಪಯಣಿಸುವ ಮುನ್ನ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಬೆಹ್ಲ್ ಹೀಗೊಂದು ಸಂದೇಶ ಇನ್‌ಸ್ಟ್ರಾಗ್ರಾಂನಲ್ಲಿ ಪ್ರಕಟಿಸಿದಾಗ, ಸಂಚಲನ ಮೂಡಿತ್ತು. ಯಾವ ಮತ್ತು ಯಾರ ತಂಟೆಗೂ ಹೋಗದೇ ಬದುಕು ಕಟ್ಟಿಕೊಂಡು, ಕುಟುಂಬದೊಂದಿಗೆ ನೆಮ್ಮದಿಯಿಂದ ಇರುವ ಈ ಚೆಲುವೆ ಮೇಲೆ ಯಾರ ವಕ್ರ ಕಣ್ಣು ಬಿತ್ತೋ ಎಂಬ ಬೇಸರ, ದುಃಖ ಬಹುತೇಕ ಮಂದಿಗೆ ಕಾಡಿದ್ದು ನಿಜ.

ಇದೆಲ್ಲವೂ ನಡೆದು ನಾಲ್ಕು ತಿಂಗಳಾಗಿವೆ. ಆಸ್ಪತ್ರೆಯಲ್ಲಿ ಸೋನಾಲಿಗೆ ಚಿಕಿತ್ಸೆ ಮುಂದುವರೆದಿದೆ. ನೋವು, ಯಾತನೆ, ಆತಂಕ, ಕಳವಳ ಮಧ್ಯೆಯೂ ಆಕೆ ಖಿನ್ನತೆಗೆ ಒಳಗಾಗಿಲ್ಲ. ಕ್ಯಾನ್ಸರ್ ತನ್ನ ಹಿಡಿತ ಬಿಗಿಗೊಳಿಸಿದಷ್ಟು ಆಕೆಯಲ್ಲಿ ಬದುಕುವ ತೀವ್ರತೆ ಹೆಚ್ಚುತ್ತಲೇ ಇದೆ. ಈ ಕಾರಣದಿಂದಲೇ ಕಾಯಿಲೆ ಮತ್ತು ತನ್ನೊಳಗೆ ಆಗುತ್ತಿರುವ ಬದಲಾವಣೆಗಳ ಕುರಿತು ಬಿಡುವು ಸಿಕ್ಕಾಗಲೆಲ್ಲ ಮಾಹಿತಿ ನೀಡುತ್ತಲೇ ಇದ್ದಾರೆ. ಇನ್‌ಸ್ಟ್ರಾಗ್ರಾಂನಲ್ಲಿ ಜುಲೈ 4ರಿಂದ ಈಗಿನವರೆಗೆ ಪ್ರಕಟವಾಗುತ್ತಿರುವ ಸಂದೇಶಗಳು ಅದಕ್ಕೆ ಸಮರ್ಪಿತ.

ಉದ್ದನೆಯ ಕೂದಲನ್ನು ಅನಿವಾರ್ಯವಾಗಿ ಕತ್ತರಿಸಿಕೊಂಡು ನೋವನ್ನು ನುಂಗುತ್ತ ಸೋನಾಲಿ ಕನ್ನಡಿ ಮುಂದೆ ನಿಂತಿದ್ದು, ಚಿತ್ರರಂಗದ ಸ್ನೇಹಿತರು ಮತ್ತು ಆಪ್ತರು ಆಸ್ಪತ್ರೆಗೆ ಬಂದು ಶುಭ ಹಾರೈಸಿದ ಕ್ಷಣಗಳು, ಪತಿ ಗೋಲ್ಡಿ ಬೆಹ್ಲ್‌ನನ್ನು ಅಪ್ಪಿಕೊಂಡು ಸಂತಸ ಹಂಚಿಕೊಂಡಿದ್ದು....ಹೀಗೆ ಚಿತ್ರ ಸಹಿತ ಮಾಹಿತಿ ನೀಡುವ ಸೋನಾಲಿ ಕಿಂಚಿತ್ತೂ ಸಪ್ಪೆ ಮೊರೆ ಹಾಕಿಕೊಂಡಿಲ್ಲ. ಹಾಕಿಕೊಳ್ಳಲು ಇಷ್ಟಪಡುವುದೂ ಇಲ್ಲ.

‘ಕಳೆದೆರಡು ತಿಂಗಳುಗಳಿಂದ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ನೋಡಿರುವೆ, ಅನುಭವಿಸಿರುವೆ. ಬೆರಳನ್ನು ಸ್ವಲ್ಪ ಮೇಲೆತ್ತಲೂ ಆಗದಂತಹ ನೋವಿನಿಂದ ನರಳಿದ್ದೇನೆ. ದೈಹಿಕ ಅಲ್ಲದೇ ಮಾನಸಿಕವಾಗಿಯೂ ಸಂಕಟ ಅನುಭವಿಸಿದ್ದೇನೆ. ಕಿಮೊಥೆರಪಿ, ಶಸ್ತ್ರಚಿಕಿತ್ಸೆ, ಪರೀಕ್ಷೆ ಮುಗಿಸಿಕೊಂಡು ಮರಳಿ ಹಾಸಿಗೆ ಮೇಲೆ ಒರಗಿ ಕಿರುನಗೆ ಬೀರಲು ಸಹ ಆಗುವುದಿಲ್ಲ. ನಗುವನ್ನು ನೋವು ಕಸಿದುಕೊಳ್ಳುತ್ತದೆ’ ಎನ್ನುವ ಸೋನಾಲಿ ಬದುಕಿನ ಕಟುಸತ್ಯಗಳನ್ನು ಹಂಚಿಕೊಳ್ಳಲು ಮರೆಯುವುದಿಲ್ಲ.

‘ಒಳ್ಳೆಯ ದಿನಗಳು ಸದಾ ಜೊತೆಗಿರಲಿ ಎಂದು ಯಾಕೆ ನಿರೀಕ್ಷಿಸಬೇಕು? ನಗುಮೊಗ, ಉತ್ಸಾಹವನ್ನು ಬಲವಂತವಾಗಿ ಯಾಕೆ ಹೇರಿ
ಕೊಳ್ಳಬೇಕು. ಕೆಟ್ಟ ದಿನಗಳಿಗೆ ನಾವು ಮಾನಸಿಕವಾಗಿ ಸಿದ್ಧರಾಗಬೇಕು. ಬದುಕಿನಲ್ಲಿ ಎಲ್ಲವೂ ಸಿಹಿ ಇರಲಿ, ಕಹಿ ಬೇಡ ಎನ್ನಲಾಗದು. ಅಳು ಬಂದ್ರೆ ಅಳಬೇಕು, ಆಘಾತಕ್ಕೆ ಒಳಗಾಗಬೇಕು, ನಕಾರಾತ್ಮಕ ಭಾವನೆಗಳಿದ್ದರೆ ಅವುಗಳನ್ನು ತಡೆಯಬಾರದು. ಅವು ಯಾವುದೂ ಕೂಡ ತಪ್ಪಲ್ಲ. ಆದರೆ, ಒಂದು ಹಂತ ದಾಟಿದ ಬಳಿಕ ಅವುಗಳನ್ನು ಗುರುತಿಸಿ, ಬದುಕಿನ ಮೇಲೆ ಹಿಡಿತ ಕಾಯ್ದುಕೊಳ್ಳದಂತೆ ಎಚ್ಚರವಹಿಸಬೇಕು' ಎಂದು ಅವರು ಹೇಳುತ್ತಾರೆ.

‘ಚಿಕಿತ್ಸೆ ಮುಂದುವರೆದಿದೆ. ಧೈರ್ಯ, ವಿಶ್ವಾಸ ಮತ್ತು ನಂಬಿಕೆ ಜೊತೆಗಿದೆ. ಇರುವುದು ಒಂದೇ ಗುರಿ. ಬೇಗನೇ ಗುಣ ಹೊಂದಿ, ಮನೆ ಸೇರಬೇಕು. ಅಲ್ಲಿಯವರೆಗೆ ನಾನು ಬದುಕಿನ ವಿದ್ಯಾರ್ಥಿ ಮತ್ತು ಪ್ರತಿಯೊಂದು ಕಲಿಕೆಯ ಶಿಬಿರಾರ್ಥಿ’ ಎಂಬುದು ಆಕೆಯ ಸದ್ಯದ ಮಾತು.

ಖುಲ್ತಿ ಜುಲ್ಫೋನೆ ಸಿಖಾಯಿ ಮೌಸಮೋಂಕೊ ಶಾಯರಿ... ಎನ್ನುವುದೂ ಆ ಹಾಡಿನ ಇನ್ನೊಂದು ಸಾಲು. ಇಳಿಬಿಟ್ಟ ಕೇಶರಾಶಿ ಋತುಗಳಿಗೆ ಕಾವ್ಯ ಕಲಿಸಿಕೊಟ್ಟಿತಂತೆ ಎಂಬರ್ಥ ಬರುವ ಈ ಸಾಲು, ಸೋನಾಲಿಗೆ ಪಾಠಗಳೆಲ್ಲವೂ ಕಾವ್ಯವಾಗುವಂತೆ ಮಾಡುವ ಶಕ್ತಿಯನ್ನೇ ನೀಡಿವೆ.

ಮೆಟಾಸ್ಟಾಸಿಸ್ ಅಂದ್ರೆ..

ಸೋನಾಲಿ ಬೇಂದ್ರೆ ಮೆಟಾಸ್ಟಾಸಿಸ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ವೈದ್ಯರ ಪ್ರಕಾರ, ಈ ಕ್ಯಾನ್ಸರ್‌ನ ಜೀವಕೋಶಗಳು ದೇಹ ಪೂರ್ತಿ ಆವರಿಸಿಕೊಳ್ಳುತ್ತವೆ. ಆದರೆ, ಅದರ ಮೂಲ ಪತ್ತೆ ಮಾಡುವುದು ಮತ್ತು ನಿಯಂತ್ರಿಸುವುದು ತುಂಬಾ ಕಷ್ಟ. ಅದು ನಿಧಾನವಾಗಿ ಪಸರಿಸುತ್ತದೆ. ಕ್ಯಾನ್ಸರ್ ಯಾವ ಹಂತ ಮತ್ತು ಯಾವ ಸ್ವರೂಪದಲ್ಲಿದೆ ಎಂಬುದರ ಆಧಾರದ ಮೇಲೆ ವೈದ್ಯರು ಔಷಧಿ ಸೇವನೆ, ಇಂಜೆಕ್ಷನ್, ಕಿಮೊಥೆರಪಿ, ರೇಡಿಯೊಥೆರಪಿ ಮುಂತಾದ ಮಾದರಿಯಲ್ಲಿ ಚಿಕಿತ್ಸೆ ನೀಡುತ್ತಾರೆ.

ಪುತ್ರ ರಣವೀರ್‌ನ ಆರೈಕೆ

‘ಬದುಕಿನ ಅನಿಶ್ಚಿತತೆಯ ಈ ಕಾಲಘಟ್ಟದಲ್ಲಿ ಮಗ ರಣವೀರ್‌ನಿಂದ ಏನನ್ನೂ ಮುಚ್ಚಿಡಲು ನಾನು ಮತ್ತು ಗೋಲ್ಡಿ ಬೆಹ್ಲ್ ಬಯಸಲಿಲ್ಲ. 12 ವರ್ಷದ ರಣವೀರ್ ಎಲ್ಲವನ್ನೂ ಅರ್ಥ ಮಾಡಿಕೊಂಡು ನನಗೆ ಧೈರ್ಯ ತುಂಬುತ್ತಿದ್ದಾನೆ. ಎಷ್ಟೋ ಸಲ, ಆತನೇ ತಾಯಿ ಸ್ಥಾನದಲ್ಲಿ ನಿಂತು ನನ್ನ ಆರೈಕೆ ಮಾಡಿದ್ದು ಇದೆ. ಬದುಕಿನ ನೋವು ನಲಿವು ಆತನ ಅರಿವಿಗೆ ಬರತೊಡಗಿದೆ. ಆತ ಜೊತೆಗಿದಷ್ಟು ಖುಷಿ ನನಗೆ" ಎಂದು ಸೋನಾಲಿ ಹೇಳುತ್ತಾರೆ.

ವಿಗ್ ಹಾಕಿದ್ದಾರೆ ಸೋನಾಲಿ

ಕ್ಯಾನ್ಸರ್ ಚಿಕಿತ್ಸೆಗಾಗಿ ತಲೆ ಬೋಳಿಸಿಕೊಂಡಿದ್ದ ನಟಿ ಸೊನಾಲಿ ಬೇಂದ್ರೆ ತಲೆ ತುಂಬಾ ಪೊಗದಸ್ತಾದ ಕೂದಲು ಮಿರಮಿರ ಮಿಂಚುತ್ತಿದೆ. ಹೌದು, ಸೊನಾಲಿ ಕೃತಕ ಕೂದಲು (ವಿಗ್) ಧರಿಸಿ ನಗೆಬೀರಿದ್ದಾರೆ.

ಕ್ಯಾನ್ಸರ್ ಪತ್ತೆಯಾದಾಗಿನಿಂದಲೂ ಯಾವುದೇ ಸಮಾಚಾರವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾ ಬಂದಿರುವ ಸೊನಾಲಿ, ಕೇಶ ವಿನ್ಯಾಸಕಿಯ ಫೋಟೊದೊಂದಿಗೆ ಆಕೆ ತಮ್ಮ ತಲೆಗೆ ವಿಗ್ ಅಂಟಿಸುತ್ತಿರುವ ಫೋಟೊವನ್ನೂಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ಕೆಟ್ಟ ಸನ್ನಿವೇಶಗಳಲ್ಲೇ ನಮಗೆ ಕೆಲವು ಉತ್ತಮ ವ್ಯಕ್ತಿಗಳ ಪರಿಚಯವಾಗುತ್ತದೆ. ಅಂತಹ ಕೆಲವರು ಆಪ್ತರಾಗುತ್ತಾರೆ. ನನ್ನ ಹೊಸ ಗೆಳತಿ, ಹೇರ್ ಸ್ಟೈಲಿಸ್ಟ್ ಬೊ ಕೀ ಕೂಡಾ ಹಾಗೇ. ವಿಗ್ ಸಿದ್ಧಪಡಿಸಿ ಅದನ್ನು ಕೂರಿಸುವ ಕ್ಷಣದವರೆಗೂ ಅದೆಷ್ಟು ಬಾರಿ ಭೇಟಿಯಾದೆವೋ ಅಷ್ಟೂ ಹತ್ತಿರವಾದರು’ ಎಂದು ಸೊನಾಲಿ ಶ್ಲಾಘಿಸಿದ್ದಾರೆ.

ಅಂದ ಹಾಗೆ, ಹೇರ್‌ಸ್ಟೈಲಿಸ್ಟ್ ಬೊ ಕೀ ಅವರನ್ನು ಸೊನಾಲಿಗೆ ಪರಿಚಯಿಸಿದ್ದು ಪ್ರಿಯಾಂಕಾ ಚೋಪ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.