ಬೆಂಗಳೂರು: ಮಾರ್ವೆಲ್ ಸಂಸ್ಥೆಯ ಪ್ರಸಿದ್ದ ಸೂಪರ್ ಹೀರೋ ‘ಸ್ಪೈಡರ್ ಮ್ಯಾನ್‘ ಸಿನಿಮಾ ಸರಣಿಅಬಾಲ ವೃದ್ಧರಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ಕಾಮಿಕ್ಸ್ ಸಿನಿಮಾಗಳು.

ಇದೀಗ ಸ್ಪೈಡರ್ ಮ್ಯಾನ್ ಸರಣಿಯ ಹಾಲಿವುಡ್‌ನ 9 ನೇ ಚಿತ್ರ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್'(SPIDER-MAN: NO WAY HOME) ತೆರೆಗೆ ಅಪ್ಪಳಿಸುತ್ತಿದ್ದು ಇಂದು ಯೂಟ್ಯೂಬ್‌ನಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 50 ಲಕ್ಷಕ್ಕೂಅಧಿಕ ವೀಕ್ಷಣೆ ಕಂಡಿದೆ.

ಈ ಚಿತ್ರವನ್ನು ಕೊಲಂಬಿಯಾ ಪಿಕ್ಚರ್ಸ್ ಹಾಗೂ ಮಾರ್ವೆಲ್ ಸ್ಟುಡಿಯೊ ಜಂಟಿಯಾಗಿ ನಿರ್ಮಿಸಿದ್ದು ಕ್ರಿಸ್‌ಮಸ್ ವೇಳೆಗೆ ಅಂದರೆ ಡಿಸೆಂಬರ್ 17 ಕ್ಕೆ ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಸೋನಿ ಪಿಕ್ಚರ್ಸ್ ವಿತರಣೆ ಮಾಡುತ್ತಿದೆ.

ಈ ಹಿಂದೆ ಸ್ಪೈಡರ್ ಮ್ಯಾನ್ ಸರಣಿಯ ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್,ಸ್ಪೈಡರ್ ಮ್ಯಾನ್ ಫಾರ್ ಫ್ರಮ್ ಹೋಮ್ ನಿರ್ದೇಶಿಸಿದ್ದ ಜಾನ್ ವಾಟ್ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರಳಯಾಂತಕ ಖಳನಾಯಕನನ್ನು ಮಟ್ಟ ಹಾಕುವ ಸೂಪರ್ ಹೀರೋ ಪೀಟರ್ ಪಾರ್ಕರ್ ಆಗಿ ಟಾಮ್ ಹೋಲಾಂಡ್ ಮತ್ತೆ ಇಲ್ಲಿ ಮೋಡಿ ಮಾಡಿದ್ದಾರೆ. ಉಳಿದಂತೆ ವಿಲಿಯಂ ಡಾಪೋ, ಬೆಂಡಿಕ್ಟ್ಕಂಬರ್‌ಬ್ಯಾಚ್ ಹಾಗೂ ಜಂದಿಯಾ ಅವರು ಪ್ರಮುಖ ತಾರಾಗಣದಲ್ಲಿದ್ದಾರೆ.

2002 ರಲ್ಲಿ ಸ್ಪೈಡರ್ ಮ್ಯಾನ್, 2004 ರಲ್ಲಿಸ್ಪೈಡರ್ ಮ್ಯಾನ್ 2, 2007 ರಲ್ಲಿಸ್ಪೈಡರ್ ಮ್ಯಾನ್ 3, 2012 ರಲ್ಲಿ ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್, 2014 ರಲ್ಲಿ ದಿ ಅಮೇಜಿಂಗ್ ಸ್ಪೈಡರ್ ಮ್ಯಾನ್ 2 ತೆರೆ ಕಂಡಿದ್ದವು. 2017 ರಲ್ಲಿ ತೆರೆಗೆ ಬಂದಿದ್ದಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್ ಸಾಕಷ್ಟು ಸದ್ದು ಮಾಡಿತ್ತು. 2019 ರಲ್ಲಿಸ್ಪೈಡರ್ ಮ್ಯಾನ್ ಫಾರ್ ಫ್ರಮ್ ಹೋಮ್ ಬಿಡುಗಡೆಯಾಗಿತ್ತು.

1965 ರಲ್ಲಿ ಖ್ಯಾತ ಲೇಖಕರಾದ ಸ್ಟ್ಯಾನ್ ಲೀ, ಸ್ಟಿಫನ್ ಡಿಟ್‌ಕೋ ಅವರು ಮಾರ್ವೆಲ್ ಕಾಮಿಕ್ಸ್‌ಗಾಗಿ ‘ಸ್ಪೈಡರ್ ಮ್ಯಾನ್‘ ಎಂಬ ಸೂಪರ್ ಹೀರೋ ಕಾಲ್ಪನಿಕ ಪಾತ್ರವನ್ನು ರಚಿಸಿದ್ದರು. ಅದು 2002 ರ ನಂತರ ಸಿನಿಮಾ ಸರಣಿಗಳಾಗಿ ಜನಮನ ರಂಜಿಸುತ್ತಿದೆ.

ಇದನ್ನೂ ಓದಿ:ಜೈ ಭೀಮ್ ಹಾಗೂ ವನ್ನಿಯಾರ್ ವಿವಾದ: ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.