‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ #K47 ಚಿತ್ರದಲ್ಲಿ ಕಿಚ್ಚ ಸುದೀಪ್ಗೆ ಜೋಡಿಯಾಗಲಿದ್ದಾರೆ. ತಮಿಳಿನ ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಪಿಕ್ಚರ್ಸ್ ಈ ಚಿತ್ರ ನಿರ್ಮಿಸುತ್ತಿದ್ದು, ಈ ಹಿಂದೆ ತಮಿಳಿನಲ್ಲಿ ‘ಆಟೋಗ್ರಾಫ್’ ಚಿತ್ರ ನಿರ್ದೇಶಿಸಿದ್ದ ಚೇರನ್ #K47ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಕನ್ನಡ, ತಮಿಳು ಸೇರಿ ಹಲವು ಭಾಷೆಗಳಲ್ಲಿ ತೆರೆ ಕಾಣಲಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.

ಸುದೀಪ್, ಕನ್ನಡಕ್ಕೆ ‘ಮೈ ಆಟೋಗ್ರಾಫ್’ ಹೆಸರಲ್ಲಿ ಚೇರನ್ ಅವರ ಚಿತ್ರವನ್ನು ರಿಮೇಕ್ ಮಾಡಿದ್ದರು. ಕೆಜಿಎಫ್ನಲ್ಲಿ ರಾಕಿಬಾಯ್ಗೆ ರೀನಾ ಆಗಿದ್ದ ಶ್ರೀನಿಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆಗೊಳಿಸಿದೆ. ಸದ್ಯ ಸುದೀಪ್ ಮ್ಯಾಕ್ಸ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ #K47 ಪ್ರಾಜೆಕ್ ಪ್ರಾರಂಭವಾಗಲಿದೆ.

ಶ್ರೀನಿಧಿ, ‘ಕೆಜಿಎಫ್ ಚಾಪ್ಟರ್-2’ ಬಳಿಕ ತಮಿಳಿನ ‘ಕೋಬ್ರಾ’ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಮೇಲೆ ಬೇರಾವ ಸಿನಿಮಾ ಒಪ್ಪಿಕೊಳ್ಳದ ಶ್ರೀನಿಧಿ, ಇತ್ತೀಚೆಗಷ್ಟೇ ‘ತೆಲುಸು ಕದಾ’
ಹೆಸರಿನ ತೆಲುಗು ಚಿತ್ರಕ್ಕೂ ಆಯ್ಕೆ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.