ಬೆಂಗಳೂರು: ಬ್ಲಾಕ್ ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ದ ಕ್ರೇಜ್ ಜನರಲ್ಲಿ ಇನ್ನೂ ಕಡಿಮೆ ಆಗಿಲ್ಲ. ಚಿತ್ರದ ಹಾಡುಗಳಂತೂ ಸೂಪರ್ ಹಿಟ್ ಎನಿಸಿಕೊಂಡು ಮನೆ ಮನದಲ್ಲೂ ಗುನುಗುತ್ತಿವೆ.

ಅದರಲ್ಲೂ ಶ್ರೀವಲ್ಲಿ ಹಾಡಂತೂ ದೇಶ ವಿದೇಶದಲ್ಲಿ ಪ್ರಖ್ಯಾತಿ ಪಡೆದುಕೊಂಡು ಜನ ಮೆಚ್ಚುವಂತಾಗಿದೆ. ತೆಲುಗು, ಕನ್ನಡ, ತಮಿಳು, ಮಲಿಯಾಳಿ ಹಾಗೂ ಹಿಂದಿಯಲ್ಲಿ ಈ ಹಾಡು ಹಿಟ್ ಎನಿಸಿಕೊಂಡಿತ್ತು.

ಈಗ ಇದೇ ಹಾಡು ಬಂಗಾಳಿಯಲ್ಲೂ ಬಂದಿದ್ದು, ಖ್ಯಾತ ಗಾಯಕಿ ಉಷಾ ಉತುಪ್ಅವರ ಧ್ವನಿಯಲ್ಲಿ ಮೂಡಿ ಬಂದಿದೆ. ‘ತುಮಿ ತುಮಾರ್ ತೊಲೊನಾ’ ಎಂದು ಉಷಾ ಉತ್ತುಪ್ ಅವರು ಹಾಡಿರುವ ಈ ಹಾಡು ಕೂಡ ಮೂಲ ಹಾಡಿನಂತೆ ಅದ್ಭುತವಾಗಿ ಮೂಡಿ ಬಂದಿದೆ ಎಂದು ನೆಟ್ಟಿಗರು ಹೇಳಿದ್ದಾರೆ.

ತಮ್ಮ ವಿಶಿಷ್ಠ ಕಂಠದಿಂದ ಗಾಯನ ಲೋಕದಲ್ಲಿ ಛಾಪು ಮೂಡಿಸಿರುವ ಉಷಾ ಅವರು ಹಾಡಿರುವ ಈ ಹಾಡನ್ನು ಆದಿತ್ಯ ಮ್ಯೂಸಿಕ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಕಂಡು ಬಂದು, ಸಾಕಷ್ಟು ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ.

ಉಷಾ ಹಾಡಿರುವ ಬೆಂಗಾಳಿ ವರ್ಷನ್ ಹಾಡಿಗೆ ರಾಜೀವ್ ದತ್ತ ಅವರು ಸಾಹಿತ್ಯ ರಚಿಸಿದ್ದಾರೆ.ಶ್ರೀವಲ್ಲಿ ಹಾಡನ್ನು ತೆಲುಗಿನಲ್ಲಿ ಸಿದ್ ಶ್ರೀರಾಮ್ ಅವರು ಹಾಡಿದ್ದರು. ಹಿಂದಿಯಲ್ಲಿ ಜಾವೆದ್ ಅಲಿ ಹಾಡಿದ್ದರು.

ಕಳೆದ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾಗಿದ್ದ ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿದ್ದ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿದೆ.

‘ನಾನು ಪ್ಯಾನ್ ಇಂಡಿಯಾ ನಟಿ ಆಗಬೇಕು’ ಎಂದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.