ಮಾದಕ ಸುಂದರಿ ಸನ್ನಿ ಲಿಯೋನ್ ಜೀವನದ ವಾಸ್ತವಗಳನ್ನು ತೆರೆದಿಡುವ ವೆಬ್ ಸೀರಿಸ್‌ನ ಮೂರನೇ ಸೀಸನ್ ತೆರೆಗೆ ಬರಲು ಸಿದ್ಧವಾಗಿದೆ. ವಯಸ್ಕರ ಚಿತ್ರ ಮತ್ತು ಲೈಂಗಿಕ ಸರಕುಗಳ ಜಾಹೀರಾತುಗಳ ಮೂಲಕ ‘ನೀಲಿ ಚಿತ್ರಗಳ ಬೆಡಗಿ’ ಎಂದೇ ಕರೆಸಿಕೊಳ್ಳುವ ಸನ್ನಿಯ ಬದುಕಿನ ಅನೂಹ್ಯ ಸಂಗತಿಗಳನ್ನು ಹೊಸ ಆವೃತ್ತಿ ಅನಾವರಣ ಮಾಡಲಿದೆ.

ಜೀ 5 ನಿರ್ಮಿಸುತ್ತಿರುವ ‘ಕರಣ್‌ಜೀತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್’ ಎಂಬ ಈ ವೆಬ್ ಸರಣಿಯ ಮೊದಲ ಕಂತಿಗೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ ಸಿಕ್ಕಿತ್ತು.

‘ನಮ್ಮ ಭೂತಕಾಲ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂಬುದು ಸನ್ನಿ ಅನುಭವದ ನುಡಿ. ಮೂರನೇ ಸೀಸನ್‌ನ ಮೊದಲ ಸಂಚಿಕೆಯಲ್ಲಿ ಸನ್ನಿಯ ಈ ಮಾತು ಹಿನ್ನೆಲೆಯಲ್ಲಿ ಮೂಡಿಬರುತ್ತದೆ. ಮೊದಲ ಸೀಸನ್‌ನಲ್ಲಿ ಈಕೆಯ ಪೂರ್ವಾಶ್ರಮದ ಖಾಸಗಿ ಮತ್ತು ವೃತ್ತಿಕ್ಷೇತ್ರದ ವಿವರಗಳಿದ್ದವು. ಎರಡನೇ ಸೀಸನ್‌ನಲ್ಲಿ ಭೂತ ಮತ್ತು ಭವಿಷ್ಯದ ಮಧ್ಯೆ ವರ್ತಮಾನದ ಕತೆಗಳನ್ನೂ ನೋಡಬಹುದು ಎಂದು ನಿರ್ಮಾಣ ಸಂಸ್ಥೆ ಹೇಳಿದೆ.

ಮೂರನೇ ಸೀಸನ್‌ನೊಂದಿಗೆ ಈ ಸರಣಿ ಮುಗಿಯಲಿದೆ. ಅದರ ಟ್ರೇಲರ್ ನೋಡಿದವರು ಮೊದಲೆರಡು ಸೀಸನ್‌ನಂತೆ ಇದ ಭರ್ಜರಿ ಯಶಸ್ಸು ಕಾಣುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಡೇನಿಯಲ್ ವೆಬರ್ ಜೊತೆಗಿನ ಮದುವೆ, ವೈವಾಹಿಕ ಬದುಕು, ನಟನೆಯೊಂದಿಗೆ ಉದ್ಯಮಕ್ಕೆ ಕಾಲಿಟ್ಟ ಕ್ಷಣ ಹೀಗೆ ಸನ್ನಿ ಹೇಳಿಕೊಳ್ಳುವ ಹಾಗೆ, ಬದುಕಿನ ಪ್ರಬುದ್ಧ ಹಂತವನ್ನು ಇದರಲ್ಲಿ ನೋಡಬಹುದು. ತಮ್ಮ ತಂದೆಗೆ ಕ್ಯಾನ್ಸರ್ ಪತ್ತೆಯಾದ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ವಿಚಲಿತರಾಗಿದ್ದುದಾಗಿ ಸನ್ನಿ ಹಿಂದೊಮ್ಮೆ ಹೇಳಿಕೊಂಡಿದ್ದರು. ಆ ಸನ್ನಿವೇಶಗಳು ಹಾಗೂ ಸನ್ನಿಯ ವರ್ತನೆಯಿಂದಾಗಿ ಅತ್ಯಂತ ವಿವಾದಾತ್ಮಕವಾಗಿ ಹೊರಹೊಮ್ಮಿದ ರಿಯಾಲಿಟಿ ಶೋ ‘ಬಿಗ್‌ಬಾಸ್’ ಕೂಡಾ ವೆಬ್ ಸರಣಿಯಲ್ಲಿ ಒಳಗೊಂಡಿದೆ. ಡೇನಿಯಲ್ ಪಾತ್ರದಲ್ಲಿ ದಕ್ಷಿಣ ಆಫ್ರಿಕಾದ ರೂಪದರ್ಶಿ ಮಾರ್ಕ್ ಬೂಕ್ನರ್ ನಟಿಸಿದ್ದಾರೆ.

‘ಆಶಿಖ್ ಬನಾಯಾ ಅಪ್ನೇ’ ಖ್ಯಾತಿಯ ಆದಿತ್ಯ ದತ್ತಾ ನಿರ್ದೇಶನದಲ್ಲಿ ಮೂಡಿಬಂದಿರುವ ಈ ವೆಬ್ ಸರಣಿ ಏಪ್ರಿಲ್ ಐದರಿಂದ ಜೀ 5ನಲ್ಲಿ ಪ್ರಸಾರವಾಗಲಿದೆ.

‘ಬದುಕಿನ ಕ್ಲಿಷ್ಟ ಸನ್ನಿವೇಶದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಆದರೆ ಅದರಿಂದ ಹೊರಬಂದು ಅನೇಕ ವರ್ಷಗಳೇ ಕಳೆದರೂ ಜಗತ್ತು ನನ್ನನ್ನು ನೀಲಿ ಚಿತ್ರಗಳ ಸುಂದರಿ ಎಂದೇ ಗುರುತಿಸುತ್ತದೆ. ಈಗ ಅದೆಲ್ಲ ಹಿಂಸೆ, ಖೇದವೆನಿಸುತ್ತದೆ. ಯಾಕಾದರೂ ಆ ಕ್ಷೇತ್ರಕ್ಕೆ ಹೋದೆನೋ ಎಂದು ಪಶ್ಚಾತ್ತಾಪಪಡುತ್ತೇನೆ. ಯಾಕೆಂದರೆ ನಾನು ಬದಲಾದರೂ ಜಗತ್ತು ಅದನ್ನು ಸ್ವೀಕರಿಸುತ್ತಿಲ್ಲ’ ಎಂದು ಸನ್ನಿ ಅನೇಕ ಸಲ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅವರ ಈ ಸಮಜಾಯಿಷಿಗಳಿಗೆ ಉತ್ತರವಾಗಿ ಈ ಸೀನ್ ಮೂಡಿಬರಲಿದೆ ಎಂದು ಆಕೆಯ ಸಮೀಪವರ್ತಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.