ನವದೆಹಲಿ: ವಿವಾದಕ್ಕೆ ಒಳಗಾಗಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಸಿದ್ಧಾಂತವನ್ನು ಒಳಗೊಂಡ ಆತ್ಮಕಥಾ ಚಿತ್ರ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ(ಇಫಿ) ಉದ್ಘಾಟನಾ ಚಿತ್ರವಾಗಿರಲಿದೆ.

ನ.20ರಿಂದ ನ.28ರವರೆಗೆ ಗೋವಾದಲ್ಲಿ ಇಫಿ ನಡೆಯಲಿದೆ. ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾವನ್ನು ರಣ್ದೀಪ್ ಹೂಡ ನಿರ್ದೇಶಿಸಿದ್ದು, ಅವರೇ ಮುಖ್ಯಭೂಮಿಕೆಯಲ್ಲಿದ್ದಾರೆ. ನಿರ್ದೇಶಕ, ನಟ ಡಾ.ಚಂದ್ರಪ್ರಕಾಶ್ ದ್ವಿವೇದಿ ನೇತೃತ್ವದ ತೀರ್ಪುಗಾರರ ಮಂಡಳಿ ಈ ಸಿನಿಮಾವನ್ನು ಇಂಡಿಯನ್ ಪನೋರಮಾ ವಿಭಾಗದ ಉದ್ಘಾಟನಾ ಸಿನಿಮಾವಾಗಿ ಆಯ್ಕೆ ಮಾಡಿದೆ.

ಕನ್ನಡದ ಎರಡು ಸಿನಿಮಾಗಳು ಆಯ್ಕೆ: ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾದ 28 ಸಿನಿಮಾಗಳ ಪೈಕಿ ಕನ್ನಡದ ಎರಡು ಚಿತ್ರಗಳು ಇವೆ. ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾ ನಿರ್ದೇಶಿಸಿದ್ದ ಸಾಗರ್ ಪುರಾಣಿಕ್ ನಟಿಸಿ, ನಿರ್ದೇಶಿಸಿರುವ ‘ವೆಂಕ್ಯಾ’ ಹಾಗೂ ರಾಜ್ಗುರು ಬಿ. ನಿರ್ದೇಶನದ ‘ಕೆರೆಬೇಟೆ’ ಆಯ್ಕೆಯಾದ ಸಿನಿಮಾಗಳು.

ಹಿಂದಿಯ ‘ಮಹಾವತಾರ್ ನರಸಿಂಹ’, ‘ಆರ್ಟಿಕಲ್ 370’, ‘12th ಫೈಲ್’, ‘ಶ್ರೀಕಾಂತ್’, ಮಲಯಾಳದ ‘ಆಡುಜೀವಿತಂ’, ‘ಭ್ರಮಯುಗಂ’, ‘ಲೆವೆಲ್ ಕ್ರಾಸಿಂಗ್’, ‘ಮಂಜುಮ್ಮೆಲ್ ಬಾಯ್ಸ್’ ಹಾಗೂ ತೆಲುಗಿನ ‘ಕಲ್ಕಿ 2898 ಎಡಿ’ ಇವು ಫೀಚರ್ ಫಿಲಂ ವಿಭಾಗದಲ್ಲಿ ಆಯ್ಕೆಯಾದ ಕೆಲವು ಸಿನಿಮಾಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.