ನವದೆಹಲಿ: ತಮಿಳಿನ ಬೇಡಿಕೆಯ ಧನುಷ್ ನಿರ್ದೇಶಿಸಿ ನಟಿಸಿರುವ ‘ಇಡ್ಲಿ ಕಡಾಯಿ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಧನುಷ್, 2025ರ ಏಪ್ರಿಲ್ 10 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಧನುಷ್ ನಿರ್ದೇಶನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ 2017ರಲ್ಲಿ, ‘ಪಾ ಪಾಂಡಿ’ ಇತ್ತೀಚೆಗೆ ಬಿಡುಗಡೆಗೊಂಡ ‘ರಾಯನ್’ ಹಾಗೂ ಮೂರನೇ ಚಿತ್ರ ನಿಲುಕು ಎನ್ ಮೇಲ್ ಎನ್ನಾಡಿ ಕೋಬಂ ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಡಾನ್ ಪಿಕ್ಚರ್ಸ್ನ ಆಕಾಶ್ ಬಾಸ್ಕರನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಸುರನ್, ಸೊರರೈ ಪೊಟ್ರುಗೆ ಸಂಗೀತ ನೀಡಿದ್ದ ಜಿ.ವಿ.ಪ್ರಕಾಶ್ ಕುಮಾರ್ ಅವರು ‘ಇಡ್ಲಿ ಕಡಾಯಿ’ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಂಗೀತ ಮಾಂತ್ರಿಕ ಇಳಯರಾಜ ಅವರ ಜೀವನಾಧಾರಿತ ಕಥೆಯ ಚಿತ್ರ ‘ಕುಬೇರ’ದಲ್ಲಿ ಧನುಷ್ ನಟಿಸಿದ್ದು, ಚಿತ್ರದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.