ಬೆಂಗಳೂರು: ದೇಶದಲ್ಲಿ ನಡೆದ ಕಹಿ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟ್ರೆಂಡ್ ಈಗಾಗಲೇ ಆರಂಭವಾಗಿದೆ. ಇದೀಗ ಗುಜರಾತ್‌ನ ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿ ಸಿನಿಮಾವೊಂದು ತಯಾರಾಗಿದೆ.

ಈ ಚಿತ್ರಕ್ಕೆ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಎಂದು ಹೆಸರಿಡಲಾಗಿದೆ. ಇದರ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮುಖ್ಯ ಪಾತ್ರದಲ್ಲಿ ನಟ ವಿಕ್ರಾಂತ್ ಮಾಸ್ಸಿ ನಟಿಸಿದ್ದಾರೆ. ರಾಶಿ ಖನ್ನಾ, ರಿಧಿ ಡೋಗ್ರಾ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಮೇ 3ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.

ಗೋದ್ರಾ ಹತ್ಯಾಕಾಂಡದ ಕುರಿತು ಸುದ್ದಿ ವಾಚನ ಮಾಡುವ ಪತ್ರಕರ್ತನ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸಿ ಅವರು ಕಾಣಿಸಿಕೊಂಡಿರುವುದನ್ನು ಟೀಸರ್‌ನಲ್ಲಿ ಗಮನಿಸಬಹುದು.

ಸಿನಿಮಾವನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಹಾಗೂ ವಿಕಿರ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಾಣ ಮಾಡಿವೆ. ರಂಜನ್ ಚಂಡೇಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.