ಕೊರೊನಾ ಕಾರಣಕ್ಕೆ ಏಳೆಂಟು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಚಿತ್ರೋದ್ಯಮದಲ್ಲಿ ಅನ್ಲಾಕ್ ಅವಧಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅರ್ಧಕ್ಕೆ ನಿಂತಿದ್ದ ಚಿತ್ರಗಳು ಮತ್ತೆ ಟೇಕಾಫ್ ಆಗುತ್ತಿರುವ ಬೆನ್ನಲ್ಲೇ ಹೊಸ ಚಿತ್ರಗಳು ಆರಂಭವಾಗುತ್ತಿವೆ.

ಸ್ಯಾಂಡಲ್ವುಡ್ನ ‘ಅಭಿನಯ ಚತುರ’ ನೀನಾಸಂ ಸತೀಶ್ ಅವರಿಗೆ ಈಗ ತ್ರಿಬಲ್ ಧಮಾಕ. ದಸರಾ ಹಬ್ಬದ ವೇಳೆ ಅವರ ನಟನೆಯ ಮೂರು ಚಿತ್ರಗಳು ಒಟ್ಟೊಟ್ಟಿಗೆ ಬುಧವಾರ ಚಿತ್ರೀಕರಣ ಆರಂಭಿಸಿವೆ. ಇದು ಅವರ ಬದುಕಿನಲ್ಲಿ ಮರೆಯಲಾಗದ ದಿನವಂತೆ.

‘ನನ್ನ ಮೂರು ಚಿತ್ರಗಳ, ಚಿತ್ರೀಕರಣ ಒಂದೇ ದಿನದಲ್ಲಿ ನಡೆಯುತ್ತಿದೆ. "ಮ್ಯಾಟ್ನಿ" ಮತ್ತು "ದಸರಾ" ನಾನಿಲ್ಲದ ದೃಶ್ಯಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸುತ್ತಿದ್ದರೇ, ಮೈಸೂರಿನಲ್ಲಿ "ಪೆಟ್ರೊಮ್ಯಾಕ್ಸ್" ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಸೌಭಾಗ್ಯ ದೊರಕಲು ಇಷ್ಟು ವರ್ಷದ ನಿಮ್ಮ ಪ್ರೀತಿ ಕಾರಣ ಎಂದು ಸತೀಶ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.