ಭೂಗತ ಲೋಕದ ಕಥೆ ಹೊಂದಿ ಸಾಕಷ್ಟು ಚಿತ್ರಗಳು ಕನ್ನಡದಲ್ಲಿ ತೆರೆ ಕಂಡಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಡಾನ್ ಕುಮಾರ’. ಎನ್.ನಾಗೇಶ್ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಡಿ.ಎಂ.ನರಸೇಗೌಡ ನಿರ್ಮಾಣದ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ.

‘ಭೂಗತ ಲೋಕದ ಡಾನ್ ಒಬ್ಬನ ನೈಜ ಕಥೆ ಹೊಂದಿರುವ ಚಿತ್ರವಿದು. ಹೀಗಾಗಿ ಚಿತ್ರದ ನಿರೂಪಣೆ ಭಿನ್ನವಾಗಿದೆ. 15 ಸಾಹಸ ದೃಶ್ಯಗಳಿವೆ. ಈ ಎಲ್ಲ ಸಾಹಸ ದೃಶ್ಯಗಳನ್ನು ನೈಜವಾಗಿ ಚಿತ್ರೀಕರಿಸಲಾಗಿದೆ. ಸಾಮಾನ್ಯ ಮನುಷ್ಯ ಜಗಳವಾಡಿದರೆ ಹೇಗಿರುತ್ತೋ ಅದೇ ರೀತಿಯಲ್ಲಿವೆ. ಭೂಗತಲೋಕದ ಸನ್ನಿವೇಶಗಳು ಇದ್ದರೂ, ಲವ್, ರೊಮ್ಯಾನ್ಸ್, ತಂದೆ ತಾಯಿ ಸೆಂಟಿಮೆಂಟ್ ಎಲ್ಲವೂ ಇರಲಿದೆ. 1990-2000 ಅವಧಿಯಲ್ಲಿ ನಡೆದ ಕೆಲವಷ್ಟು ನೈಜ ಘಟನೆಗಳಿವೆ. ಆದರೆ ಯಾವುದೇ ವ್ಯಕ್ತಿ ಉದ್ದೇಶಿತವಾಗಿಲ್ಲ’ ಎಂದರು ಎನ್.ನಾಗೇಶ್ಕುಮಾರ್.

ಚಂದ್ರಶೇಖರ್ ಈ ಚಿತ್ರದ ನಾಯಕ. ಸಹನಾ ಮತ್ತು ಪ್ರಕೃತಿ ನಾಯಕಿಯರು. ಆರವ್ ಋಷಿಕ್ ಸಂಗೀತ, ಆನಂದ್ ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನವಿದೆ. ಬೆಂಗಳೂರು,ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.