ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಜಾರಿಗೆ ತರಲಾಗಿರುವ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ನಟ ಉಪೇಂದ್ರ ಸಹಾಯಹಸ್ತ ಚಾಚಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಸಂದರ್ಭದಲ್ಲೇ ಸಾಮಾಜಿಕ ಜಾಲತಾಣಗಳ ಮುಖಾಂತರ ತಮ್ಮನ್ನು ಟೀಕಿಸಿರುವವರಿಗೆ ಬಹಿರಂಗ ಪತ್ರದ ಮುಖೇನ ಉಪೇಂದ್ರ ಉತ್ತರಿಸಿದ್ದಾರೆ.

‘ಎಲ್ಲ ರಾಜಕೀಯ( ವಿವಿಧ ಪಕ್ಷ, ನಾಯಕರು, ಜಾತಿ, ಧರ್ಮ)ಬೆಂಬಲಿಗರಿಗೆ ಬಹಿರಂಗ ಪತ್ರ. ನನ್ನನ್ನು ಬೇರೆಯವರ ಜೊತೆ ಹೋಲಿಸಬೇಡಿ–ಎಂದೆಂದೂ ನಾನು ಉಪೇಂದ್ರ. ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಿದ್ದಾನೆ ಎಂದುಆತಂಕ ಪಡಬೇಡಿ–ನಾನೆಂದೂ ನಾಯಕನಾಗುವುದಿಲ್ಲ. ನಿಮ್ಮ ಪಕ್ಷ, ನಾಯಕನಿಗೆ ಸಿಗುವ ಮತ ವಿಭಜನೆ ಆಗುತ್ತದೆ ಎಂದು ಭಯ ಪಡಬೇಡಿ–ನಾಯಕನಾಗಬೇಕೆಂದು ದೃಢ ಮನಸ್ಸು ಮಾಡಿರುವ ಪ್ರಜಾಪ್ರಭು ಯಾವ ನಾಯಕನಿಗೂ ಇನ್ನು ಮುಂದೆ ಮತ ನೀಡುವುದಿಲ್ಲ. ನಿಮಗೆ ನಿಮ್ಮ ಪಕ್ಷ, ನಾಯಕನಿಂದ ಸಿಗುವ ಮಾನಸಿಕ ನೆಮ್ಮದಿ, ಸಾಮಾಜಿಕ ಘನತೆ, ರಾಜಕೀಯ ಭದ್ರತೆ ಮತ್ತು ಆರ್ಥಿಕ ಆದಾಯ ಬೇರೆ ಯಾರೋ ಕಿತ್ತುಕೊಳ್ಳುತ್ತಾರೆ ಎಂಬ ಆತಂಕ ಬೇಡ–ಅದು ಕಡಿಮೆಯಾಗಬಾರದು ಇಮ್ಮಡಿ ಆಗಬೇಕೆನ್ನುವುದೇ ಪ್ರಜಾಕೀಯದ ಉದ್ದೇಶ. ಶೇ 20 ನಾಯಕತ್ವದ, ಚಾಣಾಕ್ಷ ಜಾಣತನದ, ಹಣ, ತೋಳ್ಬಲದ ಪ್ರಬಲ ಗುಂಪಿನಲ್ಲಿದ್ದೇನೆ ಎಂದು ಹೆಮ್ಮೆ ಪಡಬೇಡಿ– ಶೇ 80 ಸಾಮಾನ್ಯರು, ದೀನ ದಲಿತರು, ಅಮಾಯಕರ ಗುಂಪು ನಿಮ್ಮ ತಾಳಕ್ಕೆ ಕುಣಿಯುತ್ತಲೇ ಇರುವರು ಎಂಬ ಕಾಲ ಮುಗಿದಿದೆ. ನಾನು ಚುನಾವಣೆಯಲ್ಲಿ ನಿಲ್ಲುತ್ತೇನೆ ಎಂದುಕೊಂಡು ಇದೊಂದು ಕುಟುಂಬ ರಾಜಕಾರಣ ಎಂದಿರಿ–ನಾನು ನಿಲ್ಲಲ್ಲ ಎಂದಾಗ ಬೇರೆಯವರನ್ನು ಬಾವಿಗೆ ತಳ್ಳಿ ಆಳ ನೋಡುತ್ತೀರಾ ಎಂದಿರಿ! ಇರಲಿ ಒಂದು ಸತ್ಯ ತಿಳಿಯಿರಿ. ಶೇ 20 ‘ನಾನು’ ಎನ್ನುವವರ ಜೊತೆ ನಿನ್ನನ್ನು ಬಿಟ್ಟು ಯಾರೂ ಇರುವುದಿಲ್ಲ. ನೀನು ಎನ್ನುವ ಶೇ 80 ಜನರ ಜೊತೆಗೆ ಅವನೇ ಇರುತ್ತಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.