ಬೆಂಗಳೂರು: ಊರ್ಮನೆ ಪ್ರೊಡಕ್ಷನ್ಸ್ ವತಿಯಿಂದ ‘ಊರ್ಮನೆ ಹಬ್ಬ’ ಕಿರುಚಿತ್ರ ಉತ್ಸವ ಡಿ. 19ರಂದು ಸಂಜೆ 4ಕ್ಕೆ ನಗರದ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಲಿದೆ.

‘ಸಣ್ಣ ಪಟ್ಟಣಗಳಲ್ಲಿ ಸಿನಿಮಾಸಕ್ತ ಯುವಕರ ತಂಡ ಸೇರಿ ನಿರ್ಮಿಸಿದ ಕಿರುಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಮಹಾನಗರ ಹೊರತಾದ ಊರುಗಳಲ್ಲಿರುವ ಪ್ರತಿಭೆಗಳು ಪುಟ್ಟ ಬಜೆಟ್ನಲ್ಲಿ, ಗುಣಮಟ್ಟದಲ್ಲಿ ರಾಜೀಯಾಗದೇ ನಿರ್ಮಿಸಿದ ಚಿತ್ರಗಳನ್ನು ರಾಜಧಾನಿಯಲ್ಲಿ ಪ್ರದರ್ಶಿಸುವುದು ತಮ್ಮ ಉದ್ದೇಶ’ ಎಂದುಊರ್ಮನೆ ಪ್ರೊಡಕ್ಷನ್ಸ್ನ ಮುಖ್ಯಸ್ಥ ಅನೀಶ್ ಶರ್ಮಾ ತಿಳಿಸಿದ್ದಾರೆ.

ಅನೀಶ್ ಶರ್ಮಾ ನಿರ್ದೇಶನದ ‘ಶಬರಿ’, ‘ಅಪ್ಪನ್ ಡೈರೆಕ್ಷನ್’ (ದೀಪಕ್ ರಾಮ್ ನಿರ್ದೇಶನ), ‘ಡೋನಟ್’ (ಶ್ರೀಕರ ಭಟ್), ‘ಕಲರ್ ಕನ್ನಡಕ’ (ಅಶ್ವತ್ಥ್ ಕೆ.ಆರ್.), ‘ಕಾಯಿಸರ’ (ಶರತ್ ರೈಸದ್), ‘ಹಬ್ಬ ಹರಿದಿನ ಸುದ್ದಿ ಶಿವರಾತ್ರಿ’ (ನವೀನ್ ತೇಜಸ್ವಿ) ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಪ್ರಯೋಗ್ ಸ್ಟುಡಿಯೋ ಪ್ರಾಯೋಜಕತ್ವದಲ್ಲಿ ಈ ಉತ್ಸವ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.