ಮನಮೋಹಕ ನಟನೆಯ ಮೂಲಕವೇ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಿರುವ ದಿವಂಗತ ನಟಿ ಪರ್ವೀನ್ ಬಾಬಿ ಅವರ ಜೀವನಾಧಾರಿತ ಚಿತ್ರದಲ್ಲಿ ಊರ್ವಶಿ ರೌಟೆಲಾ ನಟಿಸಲಿದ್ದಾರೆ.

ಈ ಬಗ್ಗೆ ನಟಿ ಊರ್ವಶಿ ರೌಟೆಲಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ‘ನಿಮ್ಮ ವಿಷಯದಲ್ಲಿ ಬಾಲಿವುಡ್ ವಿಫಲವಾಗಿದೆ. ಆದರೆ, ನೀವು ಹೆಮ್ಮೆ ಪಡುವಂತೆ ನಾನು ಮಾಡುತ್ತೇನೆ. #PB ~ UR ಹೊಸ ಆರಂಭದ ಬಗ್ಗೆ ನಂಬಿಕೆಯಿದೆ‘ ಎಂದು ಬರೆದುಕೊಂಡಿದ್ದಾರೆ.

1970–80ರ ದಶಕದಲ್ಲಿ ಜನಪ್ರಿಯತೆ ಗಳಿಸಿರುವ ಪರ್ವಿನ್ ಬಾಬಿ ಬಾಲಿವುಡ್ ಅಂಗಳದಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದರು. ಚರಿತ್ರಾ ಎಂಬ ಚಿತ್ರದ ಮೂಲಕ ನಟನಾ ವೃತ್ತಿಗೆ ಪಾದಾರ್ಪಣೆ ಮಾಡಿದ್ದ ಪರ್ವಿನ್ ತದನಂತರ ಅನೇಕ ಹಿಟ್ ಚಿತ್ರದಲ್ಲಿ ನಟಿಸಿದ್ದರು. ಟೈಮ್ಸ್ ನಿಯತಕಾಲಿಕ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಬಾಲಿವುಡ್ ನಟಿ ಎಂಬ ಖ್ಯಾತಿಗೂ ಕಾರಣರಾಗಿದ್ದರು.

2005ರಲ್ಲಿ ಮುಂಬೈನ ತಮ್ಮ ನಿವಾಸದಲ್ಲಿ ಪರ್ವಿನ್ ಬಾಬಿ ಶವವಾಗಿ ಪತ್ತೆಯಾಗಿದ್ದಾರೆ. ಹಲವು ವರುಷಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಇದೇ ಅವರ ಸಾವಿಗೆ ಕಾರಣವಾಗಿತ್ತು ಎಂದು ಹೇಳಲಾಗಿತ್ತು. ನಟಿಯ ಅಂತ್ಯ ಮಾತ್ರ ದುರಂತದಲ್ಲಿ ಕೊನೆಗೊಂಡಿತು ಎಂಬುವುದು ಚಿತ್ರರಂಗದ ವಾದವಾಗಿದೆ. 'ಐರಾದ' ಪರ್ವಿನ್ ನಟಿಸಿದ ಕೊನೆಯ ಚಿತ್ರವಾಗಿದೆ.

ಧೀರಜ್ ಮಿಶ್ರಾ ಬಯೋಪಿಕ್ ಬರೆದಿದ್ದು, ವಾಸಿಂ ಎಸ್. ಖಾನ್ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.