ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Video‌ | ಚಿನ್ನದ ಉಡುಗೆಯಲ್ಲಿ ನಟಿ ಊರ್ವಶಿ ರ್‍ಯಾಂಪ್ ವಾಕ್: ಬೆರಗಾದ ಅಭಿಮಾನಿಗಳು

Published : 18 ಸೆಪ್ಟೆಂಬರ್ 2024, 6:45 IST
Last Updated : 18 ಸೆಪ್ಟೆಂಬರ್ 2024, 6:45 IST
ಫಾಲೋ ಮಾಡಿ
Comments

ಬೆಂಗಳೂರು: ಗ್ಲೋಬಲ್ ಫ್ಯಾಶನ್ ಫೆಸ್ಟಿವಲ್ 2024 ರಲ್ಲಿ ನಟಿ ಊರ್ವಶಿ ರೌಟೇಲಾ 24 ಕ್ಯಾರೆಟ್‌ ಚಿನ್ನದ ದಾರದಲ್ಲಿ ವಿನ್ಯಾಸಗೊಳಿಸಿದ ಮಣಿಪುರಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ.

ಈ ಉಡುಪನ್ನು ಮಣಿಪುರಿ ಡಿಸೈನರ್ ರಾಬರ್ಟ್‌ ನೊರೆಮ್‌ ವಿನ್ಯಾಸಗೊಳಿಸಿದ್ದಾರೆ.

ಮೈತೇಯಿ ಜನಾಂಗದ ವಧು ಧರಿಸುವ ಸಾಂಪ್ರದಾಯಿಕ ಶೈಲಿಯ ಉಡುಗೆ ಇದಾಗಿದೆ.

ಬಾಲಿವುಡ್ ಸೆಲೆಬ್ರಿಟಿಯೊಬ್ಬರು ಮಣಿಪುರಿ ವಧುವಿನ ಉಡುಪನ್ನು ಧರಿಸಿ ಅಂತರರಾಷ್ಟ್ರೀಯ ಮಟ್ಟದ ಫ್ಯಾಶನ್‌ ಶೋದಲ್ಲಿ ರ್‍ಯಾಂಪ್‌ ಮಾಡಿರುವುದು ಇದೇ ಮೊದಲು. 

ಈ ಉಡುಗೆಯ ವಿಶೇಷತೆಗಳೆಂದರೆ..

ಭಾರತದ ಇತರ ರಾಜ್ಯಗಳ ವಧುವಿನ ಉಡುಗೆಗಿಂತ ಮಣಿಪುರ ವಧುವಿನ ಧಿರಿಸು ತುಸು ವಿಭಿನ್ನವಾಗಿರುತ್ತದೆ. ಸಿಲಿಂಡರ್‌ ಆಕಾರದ ಸ್ಕರ್ಟ್‌ ಒಳಗೊಂಡಿರುವ ಸಾಂಪ್ರದಾಯಿಕ ಉಡುಪನ್ನು ದಪ್ಪವಾದ ಫೈಬರ್‌ ಮತ್ತು ಬಿದಿರಿನಿಂದ ತಯಾರಿಸಲಾಗುತ್ತದೆ. ಇದನ್ನು ‘ಪೊಟ್ಲೋಯ್‌’ ಎಂದು ಕರೆಯಲಾಗುತ್ತದೆ. ಅದರ ಮೇಲೆ ಸ್ಯಾಟಿನ್‌ ಬಟ್ಟೆಯನ್ನು ಅಳವಡಿಸಿ ಅದಕ್ಕೆ ಕಸೂತಿಯಂತಹ ಅಲಂಕಾರ ಮಾಡಲಾಗುತ್ತದೆ. ಊರ್ವಶಿ ಧರಿಸಿರುವ ಈ ಉಡುಪನ್ನು ಚಿನ್ನದ ದಾರದಲ್ಲಿ ತಯಾರಿಸಲಾಗಿದೆ. 

ಮಣಿಪುರಿ ನಟಿ ಮತ್ತು ರಣದೀಪ್‌ ಹೂಡಾ ಪತ್ನಿ ಲಿನ್‌ ಲೈಶ್ರಾಮ್‌ ಮದುವೆಯಲ್ಲಿ ಇದೇ ರೀತಿಯ ಮಣಿಪುರಿ ಶೈಲಿಯ ಕಡು ಹಸಿರು ಬಣ್ಣದ ಕುಪ್ಪಸದೊಂದಿಗೆ ಉಡುಗೆಯನ್ನು ಧರಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT