ಧನುಷ್ ಹಾಗೂ ಮಂಜು ವಾರಿಯರ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿರುವ ತಮಿಳಿನ ‘ಅಸುರನ್’ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಈಗ ಈ ಸಿನಿಮಾವು ತೆಲುಗಿಗೆ ರಿಮೇಕ್ ಆಗುತ್ತಿದ್ದು, ಧನುಷ್ ನಿರ್ವಹಿಸಿದ ಪಾತ್ರವನ್ನು ವಿಕ್ಟರಿ ವೆಂಕಟೇಶ್ ಮಾಡಲಿದ್ದಾರೆ.

ವೆಟ್ರಿಮಾರನ್ ನಿರ್ದೇಶನದ ಈ ಚಿತ್ರವನ್ನುತೆಲುಗಿಗೆ ರಿಮೇಕ್ ಆಗಲು ಎಲ್ಲಾ ಸಿದ್ಧತೆ ನಡೆದಿದೆ. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಸುರೇಶ್ ಪ್ರೊಡಕ್ಷನ್ ಈ ಸುದ್ದಿಯನ್ನು ಸ್ಪಷ್ಟಪಡಿಸಿದೆ. ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ‘ಅಸುರನ್ ಚಿತ್ರದ ತೆಲುಗು ರಿಮೇಕ್ನಲ್ಲಿ ವೆಂಕಟೇಶ್ ನಟಿಸಲಿದ್ದಾರೆ. ಈ ಚಿತ್ರವನ್ನು ಕಳಯಿಪುಳಿ ಎಸ್. ತನು ಹಾಗೂ ಸುರೇಶ್ ಬಾಬು ಸುರೇಶ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ...'ಅಸುರನ್' ದಮನಿತರ ಪ್ರತಿರೋಧದ ಧ್ವನಿ

ಸಿನಿಮಾ ರಿಮೇಕ್ ಆಗುತ್ತಿರುವ ವಿಚಾರವನ್ನಷ್ಟೇ ಅವರು ಘೋಷಣೆ ಮಾಡಿದ್ದು, ಈ ಚಿತ್ರದ ಉಳಿದ ಪಾತ್ರವರ್ಗದ ಬಗ್ಗೆ ಸದ್ಯದಲ್ಲೇ ತಿಳಿಸಲಿದ್ದಾರೆ.

ಈ ಸಿನಿಮಾ ಘೋಷಣೆಯಿಂದ ವೆಂಕಟೇಶ್ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು, ಅಭಿಮಾನಿಗಳೇ ಪ್ರಕಟಿಸಿರುವ ಚಿತ್ರದ ಕುರಿತಾದ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ವಿಕ್ಟರಿ ವೆಂಕಟೇಶ್, ನಾಗಚೈತನ್ಯ ಜೊತೆ ನಟಿಸಿರುವ ‘ವೆಂಕಿ ಮಾಮ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇನ್ನೊಂದೆಡೆ ಬಾಲಿವುಡ್ನ ಹಿಟ್ ಚಿತ್ರ ‘ದೇ ದೇ ಪ್ಯಾರ್ ದೇ’ ಚಿತ್ರದ ತೆಲುಗು ರಿಮೇಕ್ನಲ್ಲೂ ವೆಂಕಟೇಶ್ ನಟಿಸಲಿದ್ದಾರೆ ಎಂಬ ಸುದ್ದಿ ಇದ್ದು, ಅಧಿಕೃತವಾಗಿ ಘೋಷಣೆಯಾಗಿಲ್ಲ.

‘ಅಸುರನ್’ ಆ್ಯಕ್ಷನ್ ಡ್ರಾಮಾ ಚಿತ್ರದಲ್ಲಿ ಧನುಷ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಜಾತಿ ಪದ್ಧತಿ ಹಾಗೂ ದಲಿತರ ಮೇಲಿನ ದೌರ್ಜನ್ಯಗಳ ಕುರಿತು ಚಿತ್ರದಲ್ಲಿ ಬಿಂಬಿಸಲಾಗಿದೆ. ಧನುಷ್ ಅತಿ ಹೆಚ್ಚು ಯಶಸ್ಸು ತಂದುಕೊಟ್ಟ ಚಿತ್ರಗಳಲ್ಲಿ ಇದೂ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.