‘ಕಿರಿಕ್ ಪಾರ್ಟಿ’ಯ ಬೆಡಗಿರಶ್ಮಿಕಾ ಮಂದಣ್ಣ ಮತ್ತು ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ನಟಿಸಿರುವ ತೆಲುಗು ಸಿನಿಮಾ ‘ಗೀತಗೋವಿಂದಂ’ನ ಕೆಲ ದೃಶ್ಯಗಳುಆನ್ಲೈನ್ನಲ್ಲಿ ಹರಿದಾಡುತ್ತಿವೆ.

ಚಿತ್ರದ ಕೆಲವು ಸೀನ್ಗಳು ಲೀಕ್ ಆಗಿರುವುದರಿಂದ ಚಿತ್ರತಂಡ ತಲೆ ಕೆಡಿಸಿಕೊಂಡಿದೆ. ಇದರಲ್ಲಿ ಹಸಿ–ಬಿಸಿ ದೃಶ್ಯಗಳು ಇರುವುದರಿಂದ ನಟ–ನಟಿಯರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ವಿಜಯ್ ದೇವರಕೊಂಡ ‘ಒಂದು ಸಲಕೋಪ ಬರುತ್ತೆ, ಮತ್ತೊಮ್ಮೆ ಅಳು ಬರುತ್ತೆ , ತುಂಬಾ ಬೇಸರವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಚಿತ್ರದ ದೃಶ್ಯ ಸೋರಿಕೆಯ ಆರೋಪದ ಮೇಲೆ ಸಂಕಲನಕಾರನೊಬ್ಬನನ್ನು ಮತ್ತು ಅದನ್ನು ಜಾಲತಾಣದಲ್ಲಿ ಹರಿಬಿಟ್ಟ 17 ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಸೈಬರ್ ಅಪರಾಧ ಕಾನೂನಿನಡಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆಯಂತೆ.

ಈ ಘಟನೆಯಿಂದ ಬೇಸರಗೊಂಡಿರುವನಾಯಕ ವಿಜಯ್ರನ್ನು ಸಂತೈಸುವ ಪ್ರಯತ್ನವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿದ್ದಾರೆ.

‘ವಿಡಿಯೊಗಳು ಲೀಕ್ ಆದರೂ ಪರವಾಗಿಲ್ಲ. ನಾವು ನಿಮ್ಮ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡುತ್ತೇವೆ. ನೀವು ಎದೆಗುಂದದಿರಿ. ನಟ ಮಹೇಶ್ ಬಾಬು ಮತ್ತು ಪವನ್ ಕಲ್ಯಾಣರ ಸಿನಿಮಾಗಳ ಬಿಡುಗಡೆ ಮುನ್ನಈ ಹಿಂದೆ ಹೀಗೆಯೇ ಆಗಿತ್ತು’ ಎಂದು ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಭರವಸೆ ನೀಡುತ್ತಿದ್ದಾರೆ.

ಪರಸುರಾಮ್ ನಿರ್ದೇಶನ ಮಾಡಿರುವ ‘ಗೀತಗೋವಿಂದಂ’ ಆಗಸ್ಟ್ 15ಕ್ಕೆ ಸಿನಿ ಮಂದಿರಗಳಿಗೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.