ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಮನೆ ಮುಂದೆ ನರ್ಸ್ ಒಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿರುವ ನರ್ಸ್ ಅವರನ್ನು ಫರ್ಜಾನಾ ಎಂದು ಗುರುತಿಸಲಾಗಿದ್ದು ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೆನ್ನೈನಲ್ಲಿರುವ ಅಜಿತ್ ಮನೆಯಮುಂದೆ ಬಂದಿದ್ದ ಫರ್ಜಾನಾ, ಏಕಾಏಕಿ ತಮ್ಮ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲಿದ್ದ ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರೆ.

ಖಾಸಗಿ ಆಸ್ಪತ್ರೆಯೊಂದರಲ್ಲಿಫರ್ಜಾನಾ ಕೆಲಸ ಮಾಡುತ್ತಿದ್ದರು. ಕೆಲವು ತಿಂಗಳುಗಳ ಹಿಂದೆ ಈಆಸ್ಪತ್ರೆಗೆ ಅಜಿತ್ ಹಾಗೂ ಅವರ ಪತ್ನಿ ಶಾಲಿನಿ ಭೇಟಿ ನೀಡಿದ್ದರು. ಇದನ್ನು ಫರ್ಜಾನಾ ತಮ್ಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಫರ್ಜಾನಾ, ವಿಡಿಯೊ ಮಾಡಿಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರಿಂದ ಅಜಿತ್ ಕುಟುಂಬದ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಅವರನ್ನು ಕೆಲಸದಿಂದ ವಜಾ ಮಾಡಿತ್ತು.

ಕೆಲಸ ಕಳೆದುಕೊಂಡಿದ್ದ ಫರ್ಜಾನಾ, ಅಜಿತ್ ಬಳಿ ಸಹಾಯಕ್ಕಾಗಿ ಹಲವು ಸಲ ಮನವಿ ಮಾಡಿದ್ದರು. ಸಹಾಯ ಮಾಡಲು ಅಜಿತ್ ನಿರಾಕರಿಸಿದ್ದರು. ಇದರಿಂದಾಗಿ ನೊಂದಿದ್ದ ಫರ್ಜಾನಾ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಭಿಮಾನಿಗಳ ಜೊತೆ ಅಜಿತ್ ಫೋಟೊ ಅಥವಾ ವಿಡಿಯೊ ತೆಗೆದುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಅವರು ಖಾಸಗಿಯಾಗಿ ಇರಲು ಹೆಚ್ಚು ಬಯಸುತ್ತಾರೆ.

ಅಜಿತ್ ನಟನೆಯ 'ವಾಲಿಮೈ' ಸಿನಿಮಾ ಬರುವ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.