ಬಾಲಿವುಡ್‌ನ ‘ಮದ್ರಾಸ್ ಕೆಫೆ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದ ಬೆಡಗಿ ರಾಶಿಖನ್ನಾ. ದೆಹಲಿ ಮೂಲದ ಈ ಚೆಲುವೆ ಸಿನಿರಂಗಕ್ಕೆ ಬರುವ ಮೊದಲು ಮಾಡೆಲಿಂಗ್‌ನಲ್ಲಿ ಮಿಂಚಿದವರು. ಹಾಡುಗಾರ್ತಿ ಕೂಡ ಆಗಿರುವ ಈಕೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರು ಗಳಿಸಿದವರು.

‘ನಾವು ಫಿಟ್ ಆಗಿರುವುದಷ್ಟೇ ಮುಖ್ಯವಲ್ಲ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಮತೋಲನದ ಆಹಾರ ಕೂಡ ಅಷ್ಟೇ ಮುಖ್ಯ’ ಎನ್ನುವ ಈ ಚೆಲುವೆ ಡಯೆಟ್ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿಲ್ಲ.

ಮನೆಯ ಅಡುಗೆಯನ್ನೇ ಇಷ್ಟಪಡುವ ಇವರು ‘ಅಮ್ಮ ಮಾಡಿದ ಆಹಾರ ಬಾಯಿಗೂ ರುಚಿ, ದೇಹಕ್ಕೂ ಹಿತಕರ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಯೋಗ, ಧ್ಯಾನ ಪ್ರಿಯೆ

ಫಿಟ್‌ನೆಸ್ ಎನ್ನುವುದು ಬರೀ ದೇಹಕ್ಕಲ್ಲ ಮನಸ್ಸಿಗೂ ಬೇಕು. ಯೋಗ ಹಾಗೂ ಧ್ಯಾನದಿಂದ ದೇಹ ಹಾಗೂ ಮನಸ್ಸು ಎರಡನ್ನೂ ಫಿಟ್ ಆಗಿಸಿಕೊಳ್ಳಬಹುದು ಎನ್ನುವ ಅನುಭವದ ಮಾತನ್ನು ಹಂಚಿಕೊಳ್ಳಲು ಮರೆಯುವುದಿಲ್ಲ.ಪ್ರತಿದಿನ ಒಂದು ಗಂಟೆ ಯೋಗ ಹಾಗೂ ಅರ್ಧ ಗಂಟೆ ಧ್ಯಾನ ಅವರ ದಿನಚರಿಯ ಭಾಗವಾಗಿದೆ.

ಬಾಯಿಗೆ ಕಡಿವಾಣ ಹಾಕಬೇಡಿ

ಪ್ರತಿದಿನ ಆರು ಬಾರಿ ತಿನ್ನುವ ರಾಶಿ ಖನ್ನಾ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲೇ ಆಹಾರ ಸೇವಿಸುತ್ತಾರೆ. ರಾತ್ರಿ ಊಟಕ್ಕೆ ಚಪಾತಿ, ತರಕಾರಿ ಸಲಾಡ್‌ನಂತಹ ಪದಾರ್ಥಗಳನ್ನು ತಿನ್ನುವ ಇವರು, ‘ತಿನ್ನುವುದಕ್ಕೆ ಕಡಿವಾಣ ಹಾಕಬಾರದು. ತಿನ್ನುವ ಅವಕಾಶ ಸಿಕ್ಕಾಗ ತಿಂದುಬಿಡಬೇಕು. ಆದರೆ ಅದಕ್ಕೆ ತಕ್ಕ ಹಾಗೆ ವರ್ಕೌಟ್ ಮಾಡುವುದು ಸಹ ತುಂಬಾ ಮುಖ್ಯ’ ಎನ್ನುತ್ತಾರೆ.

ವರ್ಕೌಟ್ ಮಾಡುವುದು ಕೇವಲ ದೇಹಸಿರಿ ಕಾಪಾಡಿಕೊಳ್ಳುವ ಸಲುವಾಗಿ ಮಾತ್ರವಲ್ಲ. ಪ್ರತಿದಿನ ವರ್ಕೌಟ್ ಮಾಡುವುದರಿಂದ ಮನಸ್ಸಿಗೂ ಖುಷಿ ಸಿಗುತ್ತದೆ. ಜೊತೆಗೆ ದೇಹವೂ ಹಗುರ ಎನ್ನಿಸುತ್ತದೆ’ ಎನ್ನುತ್ತಾರೆ ಈ ಬೆಡಗಿ.

ಹೀಗಿದೆ ವರ್ಕೌಟ್

ಪ್ರತಿದಿನ ಎರಡೂವರೆ ಗಂಟೆಗಳ ಕಾಲ ಜಿಮ್‌ನಲ್ಲಿ ಬೆವರಿಳಿಸುವ ಇವರು ‘ವರ್ಕೌಟ್ ಮಾಡುವುದು ನನ್ನ ದಿನಚರಿಯ ಮುಖ್ಯ ಭಾಗ. ಹೊರದೇಶಗಳಲ್ಲಿ ಶೂಟಿಂಗ್ ಇದ್ದರೂ ನಾನು ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ. ಶೂಟಿಂಗ್ ಸಮಯದಲ್ಲಿ ಬೇರೆ ಕಡೆ ಹೋದಾಗ ನನ್ನ ಜಿಮ್ ಟ್ರೈನರ್ ಬಳಿ ಸಲಹೆ ಕೇಳಿ ಅವರು ಹೇಳಿದ ಹಾಗೆ ಮಾಡುತ್ತೇನೆ’ ಎನ್ನುತ್ತಾರೆ ರಾಶಿ.

ರಾಶಿ ಫಿಟ್‌ನೆಸ್ ಗುಟ್ಟು

ಪ್ರತಿದಿನ ಎದ್ದ ಕೂಡಲೇ 1 ಲೋಟ ಬಿಸಿನೀರು ಜೊತೆಗೆ 6 ಬಾದಾಮಿ ತಿನ್ನುತ್ತಾರೆ.

ಬೆಳಗ್ಗಿನ ತಿಂಡಿಗೆ ಮೊಟ್ಟೆಯ ಬಿಳಿ ಭಾಗ ಜೊತೆಗೆ ಉಪ್ಪಿಟ್ಟು ಅಥವಾ ಅವಲಕ್ಕಿ ಸೇವಿಸುತ್ತಾರೆ.

ಪ್ರತಿದಿನದ ತಿಂಡಿಯೊಂದಿಗೆ ಒಂದು ಚಮಚ ತುಪ್ಪ ತಿನ್ನುವುದು ರಾಶಿಗೆ ಅಭ್ಯಾಸ.

ಪ್ರತಿದಿನದ ಮಧ್ಯಾಹ್ನದ ಊಟಕ್ಕೆ ಮೊದಲು ಒಂದು ಲೋಟ ಮಜ್ಜಿಗೆ ಕುಡಿಯುತ್ತಾರೆ.

ಚಿಕನ್, ಫಿಶ್, ಕಡಲೆಯಂತ ಪ್ರೋಟಿನ್ ಇರುವ ಆಹಾರವನ್ನೇ ಮಧ್ಯಾಹ್ನದ ಊಟದ ಸಮಯದಲ್ಲಿ ತಿನ್ನುತ್ತಾರೆ.

ಸಂಜೆಯ ಸಮಯದಲ್ಲಿ ಫ್ರೂಟ್ ಬೌಲ್ ತಪ್ಪದೇ ತಿನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.