‘ಕೆಜಿಎಫ್’ ಯಾವಾಗ ರಿಲೀಸಾಗ್ತದೆ? ಯಶ್ ಅಭಿಮಾನಿಗಳಲ್ಲಿ ಕಳೆದ ಎರಡು ವರ್ಷಗಳಿಂದ ಎಡಬಿಡದೆ ಕಾಡುತ್ತಿದೆ. ‘ಈ ವರ್ಷ ಬಂದೇ ಬರ್ತೀವಿ’ ಎಂದು ಚಿತ್ರತಂಡ ಭರವಸೆ ಕೊಟ್ಟಿದ್ದೂ ಆಗಿತ್ತು. ಆದರೆ ಅದಕ್ಕಿಂತ ಎಕ್ಸೈಟ್ ಆದ ಇನ್ನೊಂದು ಸುದ್ದಿಯನ್ನು ಅವರು ಅಭಿಮಾನಿಗಳಿಗೆ ನೀಡಿದ್ದಾರೆ. ಈ ಡಿಸೆಂಬರ್‌ನಲ್ಲಿ ‘YGF’ ಎಂದಿದ್ದಾರೆ ಅವರು. ಅರೇ, ಏನಿದು. ಕೆಜಿಎಫ್ ಹೆಸರು ಬದಲಾಯಿಸಿದರಾ? ಅಥವಾ ಸದ್ದುಗದ್ದಲವಿಲ್ಲದೆ ಯಶ್ ಹೊಸ ಸಿನಿಮಾವನ್ನು ಮಾಡಿ ಮುಗಿಸಿದರಾ?

ಹಾ ಹಾ, ಸ್ವಲ್ಪ ತಾಳಿ. ನಿಮ್ಮ ಯಾವ ಊಹೆಯೂ ನಿಜವಲ್ಲ. YGF ಎಂಬುದರ ಪೂರ್ಣಾರ್ಥ ಏನು ಎಂಬುದನ್ನು ತಿಳಿದುಕೊಂಡರೆ ನಿಮ್ಮ ಪ್ರಶ್ನೆಗಳಿಗೆಲ್ಲವೂ ಉತ್ತರ ಸಿಗುತ್ತದೆ. ಯಶ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಸಣ್ಣದೊಂದು ವಿಡಿಯೊ ಮಾಡಿ ಈ ಅಕ್ಷರಗಳ ಪೂರ್ಣಾರ್ಥವನ್ನು ಹೇಳಿದ್ದಾರೆ.YGF ಇದರ ಪೂರ್ಣರೂಪ Yash Going to be a father (ಯಶ್ ತಂದೆಯಾಗಲಿದ್ದಾರೆ).

ತಮ್ಮ ವಿಡಿಯೊದಲ್ಲಿ ‘ನಾನು ನಿಮ್ಮೊಂದಿಗೆ ಒಂದು ವಿಶೇಷವಾದ ಸುದ್ದಿಯನ್ನು ಹಂಚಿಕೊಳ್ಳಬೇಕು. ಯಾಕೆಂದರೆ ನೀವು ನನ್ನ ಪಾಲಿನ ಬಹುದೊಡ್ಡ ವಿಶೇಷ. ಈ ಡಿಸೆಂಬರ್‌ನಲ್ಲಿ ನಾನು ತಂದೆಯಾಗಲಿದ್ದೇನೆ’ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬುಧವಾರ (ಜುಲೈ 25) ಬೆಳಿಗ್ಗೆ ಫೋಸ್ಟ್ ಮಾಡಿದ್ದಾರೆ.

ಇದರ ಪ್ರಕಾರ ರಾಧಿಕಾ ಪಂಡಿತ್ ಅವರಿಗೀಗ ನಾಲ್ಕು ತಿಂಗಳು. ಇತ್ತೀಚೆಗೆ ರಾಧಿಕಾ ಅವರ ತಾಯಿ ರಿಯಾಲಿಟಿ ಷೋ ಒಂದಲ್ಲಿ ‘ನಾನು ಅಜ್ಜಿಯಾಗುವುದು ಯಾವಾಗ?’ ಎಂದು ಪ್ರಶ್ನಿಸಿದ್ದರು. ಆ ಕಾರ್ಯಕ್ರಮ ಪ್ರಸಾರವಾದ ಕೆಲವೇ ದಿನಗಳಲ್ಲಿ ಯಶ್ ಅಭಿಮಾನಿಗಳಿಗೆ ಈ ಸಿಹಿಸುದ್ದಿ ನೀಡಿದ್ದಾರೆ.

ಈ ಫೋಸ್ಟ್ ಪ್ರಕಟವಾದ ಕ್ಷಣದಿಂದಲೇ ಅಭಿಮಾನಿಗಳು ಸಂಭ್ರಮದಿಂದ ಸ್ಪಂದಿಸುತ್ತಿದ್ದಾರೆ. ನೂರಾರು ಜನ ಯಶ್ ಅವರ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದು, ಸಾವಿರಾರು ಲೈಕ್ಸ್, ಕಮೆಂಟ್‌ಗಳು ಬಂದಿವೆ.

ಅಭಿಮಾನಿಯೊಬ್ಬರು ‘ಅಣ್ತಮ್ಮಾ... ರಫ್ ಆ್ಯಂಡ್ ಟಫ್ ಕನ್ನಡದ ಕುವರ ಮತ್ತು ಘಾಟಿ ಕ್ಯೂಟಿ ಸುಂದರ ಕನ್ನಡದ ಕುವರಿಗಾಗಿ ಕಾಯ್ತಿದ್ದೇವೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ‘ಜ್ಯೂನಿಯರ್ ಯಶ್ ಬರ್ತವ್ರೆ, ಅಣ್ಣಾ ಎಣ್ಣೆ ನಮ್ದು ಊಟ ನಿಮ್ದೇ’ ಎಂದೂ ತಮಾಷೆ ಮಾಡಿದ್ದಾರೆ. ‘ಇನ್ಮುಂದೆ ಅಣ್ತಮ್ಮನ ಕೈಯಲ್ಲಿ ಹಾಲಿನ ಬಾಟಲ್ ನೋಡಬಹುದು’ ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.