ನವದೆಹಲಿ: ಉಗ್ರರು ನಡೆಸಿದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾರತದ ಮುಸ್ಲಿಂ ಯುವಕ ಶಂಕಿತ ಆರೋಪಿ.ಆ ಯುವಕನ ಮನೆಯವರನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಾರೆ.ಹಾದಿ ತಪ್ಪಿದ ಮಗನಿಗೆ ಬುದ್ಧಿಹೇಳುತ್ತಿರುವ ಅಪ್ಪ.ಆದರೆ ನಾನಿನ್ನು ವಾಪಸ್ ಬರಲಾರೆ, ನಮ್ಮ ಧರ್ಮದ ಯುದ್ಧಕ್ಕಾಗಿ ಹೊರಟಿದ್ದೇನೆ ಎಂದು ಹೇಳುತ್ತಿರುವ ಮಗ.ಓರ್ವ ಯುವಕನ ತಪ್ಪಿನಿಂದಾಗಿ ಆ ಮುಸ್ಲಿಂ ಕುಟುಂಬ ಯಾವ ರೀತಿಯಲ್ಲಿ ಸಂಕಷ್ಟ ಅನುಭವಿಸುತ್ತದೆ. ಮುಸ್ಲಿಂ ಎಂಬ ಕಾರಣದಿಂದಾಗಿ ತಾರತಮ್ಯಕ್ಕೊಳಗಾಗಿ ಅಸಹಾಯಕರಾದ ಆ ಕುಟುಂಬತಮ್ಮ ದೇಶದ ಮೇಲಿನ ಪ್ರೀತಿ ಮತ್ತು ನಿಷ್ಠೆಯನ್ನು ಸಾಬೀತು ಪಡಿಸಲುಯಾವ ರೀತಿ ಹೆಣಗಾಡುತ್ತದೆ ಎಂಬುದನ್ನು ತೋರಿಸುವ ಮುಲ್ಕ್ ಚಿತ್ರದ ಟ್ರೇಲರ್ ನಾಲ್ಕುದಿನಗಳ ಹಿಂದೆ ಬಿಡುಗಡೆಯಾಗಿದೆ.

ಮುಲ್ಕ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಿಷಿ ಕಪೂರ್, ತಾಪ್ಸಿ ಪನ್ನು ಮತ್ತು ಪ್ರತೀಕ್ ಬಬ್ಬರ್ ನಟಿಸಿದ್ದಾರೆ.

ಮುಲ್ಕ್ ಟ್ರೇಲರ್ ಬಿಡುಗಡೆಯಾದ ನಂತರ ಸಿನಿಮಾದ ಕಥಾವಸ್ತು ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.ಸೋಮವಾರ ಟ್ರೇಲರ್ ಬಿಡುಗಡೆಯಾದಾಗ ಅದನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ ತಾಪ್ಸಿ Here it is…… Kya yeh Mulk aapka Mulk hai??? (ಈ ಸಮುದಾಯ ನಿಮ್ಮ ಸಮುದಾಯವೇ?) ಎಂದು ಪ್ರಶ್ನಿಸಿದ್ದರು.

ತಾಪ್ಸಿ ಈ ಚಿತ್ರವನ್ನು ಒಪ್ಪಿಕೊಂಡದ್ದೇಕೆ?
ಪಿಂಕ್ ಚಿತ್ರದಲ್ಲಿ ಮನೋಜ್ಞ ಅಭಿನಯದಿಂದ ಮೆಚ್ಚುಗೆ ಗಳಿಸಿದ್ದ ತಾಪ್ಸಿ ಕೈಯಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳಿವೆ.ಜೂನ್ 13ರಂದು ಈಕೆ ನಟಿಸಿದ ಸೂರ್ಮ ಚಿತ್ರ ತೆರೆಕಂಡಿದೆ.ಅಂದಹಾಗೆ ಮುಲ್ಕ್ ಸಿನಿಮಾ 'ವಿವಾದಾತ್ಮಕ' ವಿಷಯ ಆಗುವ ಸೂಚನೆಗಳು ಕಾಣಿಸುತ್ತಿವೆ.ಬೇಬಿ, ನಾಮ್ ಶಬಾನಾ ಮೊದಲಾದ ಚಿತ್ರಗಳಲ್ಲಿ ಮಿಂಚಿದ್ದ ತಾಪ್ಸಿ, ಮುಲ್ಕ್ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬುದಕ್ಕೆ ಉತ್ತರಿಸಿದ್ದು ಹೀಗೆ.

'ಒಂದು ಧರ್ಮವನ್ನು ಎಲ್ಲದಕ್ಕೂ ಗುರಿಯಾಗಿಸುವುದನ್ನು ನೋಡಲು ಸಂಕಟವಾಗುತ್ತಿದೆ,.ಆ ಧರ್ಮಕ್ಕೆ ಸೇರಿದ ಯಾವನೋ ಒಬ್ಬ ದುಷ್ಕೃತ್ಯ ಮಾಡಿದರೆ, ಆ ಧರ್ಮವನ್ನೇ ದೂರಲಾಗುತ್ತಿದೆ. ಇದನ್ನೆಲ್ಲಾ ನೋಡಿದರೆ ನನಗೆ ಬೇಸರವೂ ಕೋಪವೂ ಬರುತ್ತದೆ.ನನ್ನ ವೃತ್ತಿ ಜೀವನದಲ್ಲಿ ನನಗೆ ಸದಾ ಸಹಾಯ ಮಾಡಿದವರು ಮತ್ತು ನನ್ನೊಂದಿಗೆ ಕೆಲಸ ಮಾಡುತ್ತಿರುವವರು ನನ್ನ ಮ್ಯಾನೇಜರ್, ನನ್ನ ಡ್ರೈವರ್, ನನ್ನ ಪಿಆರ್ ಎಲ್ಲರೂ ಮುಸ್ಲಿಮರೇ.ಯಾರೊಬ್ಬರೂ ಇಂಥಾ ವಿಷಯದ ಬಗ್ಗೆ ಜಾಣ ಕುರುಡು ತೋರಬಾರದು,ಮುಸ್ಲಿಂ ಸಮುದಾಯದವರ ಮೇಲೆ ಮಾಡುವ ತಾರತಮ್ಯವೇ ನಾನು ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಎಂದು ತಾಪ್ಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.