ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್‌ಬಾಸ್ 10ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಬಿಗ್‌ಬಾಸ್ ಪ್ರಿಯರು ಕುತೂಹಲದಿಂದ ಕಾಯುತ್ತಿರುವ ಈ ಶೋ ಅ.8 ರಂದು ಸಂಜೆ 6 ಗಂಟೆಗೆ ಅದ್ದೂರಿಯಾಗಿ ಆರಂಭಗೊಳ್ಳಲಿದೆ.

ದೈನಂದಿನ ಸಂಚಿಕೆಗಳು ಕಲರ್ಸ್ ಕನ್ನಡ ಟಿವಿಯಲ್ಲಿ ಪ್ರತಿದಿನ ರಾತ್ರಿ 9–30ರವರೆಗೆ ಪ್ರಸಾರವಾಗುತ್ತವೆ.

ಇನ್ನು, ಈ ಸಾರಿಯ ವಿಶೇಷವೆಂದರೆ, ಬಿಗ್‌ಬಾಸ್ 10ನೇ ಸೀಸನ್ ಅನ್ನು, ವಯಕಾಮ್18 ಒಡೆತನದ ಒಟಿಟಿ ಫ್ಲ್ಯಾಟ್‌ಫಾರಂ ‘ಜಿಯೊ ಸಿನಿಮಾ’ದಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗಿದೆ.

100 ದಿನಗಳ ಈ ಕಾರ್ಯಕ್ರಮದ ಪ್ರತಿ ಕ್ಷಣಗಳನ್ನು ಆಸ್ವಾದಿಸಲು ಜಿಯೊ ಸಿನಿಮಾ 24x7 ಲೈವ್ ಅವಕಾಶ ಮಾಡಿಕೊಡುತ್ತಿದೆ. ಹಾಗಾದರೆ ಬಿಬ್‌ಬಾಸ್ ಕನ್ನಡ ವೀಕ್ಷಿಸಲು ಜಿಯೊ ಸಿನಿಮಾ ಹೊತ್ತು ತಂದಿರುವ ವಿಶೇಷಗಳೇನು? ಎಂಬುದನ್ನು ಇಲ್ಲಿ ನೋಡೋಣ..

1. ಬಿಗ್ ನ್ಯೂಸ್

ಜಿಯೊ ಸಿನಿಮಾ ಬಿಗ್‌ಬಾಸ್ ಮನೆಯೊಳಗೆ ನಡೆದ ಘಟನಾವಳಿಗಳು, ಟಾಸ್ಕ್‌ಗಳ ವಿವರಗಳನ್ನು ‘ಬಿಗ್ ನ್ಯೂಸ್’ ಎಂಬ ನ್ಯೂಸ್ ಬುಲೆಟಿನ್ ರೂಪದಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತದೆ. ದೊಡ್ಡಮನೆಯೊಳಗಿನ ರೋಚಕ ಘಟನೆಗಳ ವರದಿಯನ್ನು ಇಲ್ಲಿ ಆಸ್ವಾದಿಸಬಹುದು.

2. ಕಾಣದ ಕಥೆಗಳು

ಬಿಗ್‌ಬಾಸ್ ಮನೆಯೆಂದರೆ ಹಲವು ಕಥೆಗಳ ಗುಚ್ಛ. ಪ್ರತಿದಿನವೂ ಹತ್ತು ಹಲವು ರೋಚಕ ಕಥೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಕೆಲವಷ್ಟನ್ನೇ ದೈನಂದಿನ ಎಪಿಸೋಡ್‌ಗಳಲ್ಲಿ ನೋಡಲು ಸಾಧ್ಯ. ಎಪಿಸೋಡ್‌ಗಳಲ್ಲಿ ಇಲ್ಲದ, ತೆರೆಯ ಹಿಂದಿನ ಕಥೆಗಳನ್ನು ನೀವು ಜಿಯೊ ಸಿನಿಮಾದ ಲೈವ್‌ನಲ್ಲಿ ಉಚಿತವಾಗಿ ನೋಡಬಹುದು.

3. ಲೈವ್ ಶಾರ್ಟ್ಸ್

ಬಿಗ್‌ಬಾಸ್ ಮನೆಯೊಳಗೆ ಅಂದು ನಡೆದ ಪ್ರಮುಖ ಘಟನಾವಳಿಗಳನ್ನು ಸಂಕ್ಷಿಪ್ತವಾಗಿ ಜಿಯೊ ಸಿನಿಮಾದಲ್ಲಿ ರಿಕ್ಯಾಪ್ ಮಾಡಿ ತೋರಿಸುವ ಪ್ರಯತ್ನವೇ ‘ಲೈವ್ ಶಾರ್ಟ್ಸ್’. ಲೈವ್‌ನಲ್ಲಿ ಮಿಸ್ ಮಾಡಿಕೊಂಡ ಮುಖ್ಯ ಘಟನೆಗಳನ್ನು ಲೈವ್ ಶಾರ್ಟ್ಸ್ ಮೂಲಕ ಆಸ್ವಾದಿಸಬಹುದು.

4. ಹೈಪ್ ಚಾಟ್

ಇದು ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗೆ ಪ್ರೇಕ್ಷಕರಿಗೆ ಪ್ರತಿಕ್ರಿಯಿಸಲು ಹಾಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ವೇದಿಕೆ. ಜಿಯೊ ಸಿನಿಮಾ ಆ್ಯಪ್‌ನಲ್ಲಿ ಪ್ರೇಕ್ಷಕರು ಚಾಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.

5. ವಿಡಿಯೊ ವಿಚಾರ

ಇದು ಬಿಗ್‌ಬಾಸ್ ಶೋ ಭಾಗವಾಗಲು ಪ್ರೇಕ್ಷಕರಿಗೆ ಇರುವ ಇನ್ನೊಂದು ವಿನೂತನ ಅವಕಾಶ. ‘ವಿಡಿಯೊ ವಿಚಾರ’ದ ಮೂಲಕ ಪ್ರೇಕ್ಷಕರು ಮನೆಯೊಳಗಿನ ಅಭ್ಯರ್ಥಿಗಳ ಬಗ್ಗೆ, ಟಾಸ್ಕ್‌ಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವಿಡಿಯೊ ಮಾಡಿ ಜಿಯೊ ಸಿನಿಮಾದಲ್ಲಿ ಹಾಕಬಹುದು.

6. ಮೀಮ್ ದ ಮೊಮೆಂಟ್

ಬಿಗ್‌ಬಾಸ್ ಮನೆಯೊಳಗೆ ರಸವತ್ತಾದ ಕ್ಷಣಗಳಿಗೇನು ಕೊರತೆಯಿಲ್ಲ. ಅದಕ್ಕೆ ನೀವೇ ಮೀಮ್ಸ್ ಕ್ರಿಯೇಟ್ ಮಾಡುವುದರ ಮೂಲಕ ಸ್ಪಂದಿಸಬಹುದು. ‘ಮೀಮ್ ದ ಮೊಮೆಂಟ್’ ಪ್ರೇಕ್ಷಕರಿಗೆ ಮನೆಯೊಳಗಿನ ಸ್ಪರ್ಧಿಗಳ ನಡವಳಿಕೆಯ ಮೇಲೆ ಮೀಮ್ಸ್ ಕ್ರಿಯೇಟ್ ಮಾಡುವ ಅವಕಾಶವನ್ನು ಜಿಯೊ ಸಿನಿಮಾ ಕಲ್ಪಿಸುತ್ತಿದೆ.

7. ವಾಚ್ ಆಂಡ್ ವಿನ್

ಪ್ರೇಕ್ಷಕರಿಗೆ ಬಿಗ್‌ಬಾಸ್ ಕನ್ನಡವನ್ನು ಉಚಿತವಾಗಿ ನೋಡುವುದರ ಜತೆಗೆ ಬಹುಮಾನವನ್ನೂ ಗೆಲ್ಲುವ ಅವಕಾಶವಿದೆ. ಕಲರ್ಸ್ ಕನ್ನಡದಲ್ಲಿ ಪ್ರತಿದಿನದ ಎಪಿಸೋಡ್ ನೋಡಿ, ಅಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಜಿಯೊ ಸಿನಿಮಾದಲ್ಲಿ ಉತ್ತರ ಕೊಡಬೇಕು. ಪ್ರತಿ ದಿನ ಸರಿ ಉತ್ತರ ನೀಡಿದ ಒಬ್ಬರಿಗೆ ಬಹುಮಾನ ಗೆಲ್ಲುವ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.