ಬೆಂಗಳೂರು: ಹುಟ್ಟುಹಬ್ಬದ ಸಂದರ್ಭ ಮುಂಬೈಯ ಪನ್ವೇಲ್‌ನ ಫಾರ್ಮ್‌ಹೌಸ್‌ನಲ್ಲಿದ್ದ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಡಿದಿದ್ದು ಸುದ್ದಿಯಾಗಿತ್ತು.

ಅದಾದ ಬಳಿಕ ಚೇತರಿಸಿಕೊಂಡ ಅವರು, ರಾಯಘಡ್ ಜಿಲ್ಲೆಯಲ್ಲಿ ರಾತ್ರಿ ಆಟೋ ಓಡಿಸಿ ಸುದ್ದಿಯಾಗಿದ್ದರು. ಸಲ್ಮಾನ್ ಆಟೋ ಓಡಿಸುತ್ತಿರುವ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

ಅದರ ಬೆನ್ನಲ್ಲೇ, ಸಲ್ಮಾನ್ ತಮ್ಮ ಫಾರ್ಮ್‌ಹೌಸ್‌ನಲ್ಲಿ ಟ್ರ್ಯಾಕ್ಟರ್ ಓಡಿಸುತ್ತಾ ಗದ್ದೆಯಲ್ಲಿ ಉಳುಮೆ ಮಾಡಿರುವ ವಿಡಿಯೊ ವೈರಲ್ ಆಗಿದೆ.ಹಳೆಯ ವಿಡಿಯೊ ಇದಾಗಿದ್ದು, ಆಟೋ ಸವಾರಿ ಸುದ್ದಿಯಾದ ಬೆನ್ನಲ್ಲೇ, ಟ್ರ್ಯಾಕ್ಟರ್ ಸವಾರಿ ವಿಡಿಯೊ ಕೂಡ ಟ್ರೆಂಡ್ ಆಗಿದೆ.

ಡಿಸೆಂಬರ್ 27ರಂದು ಸಲ್ಮಾನ್ ಅವರು ಫಾರ್ಮ್‌ಹೌಸ್‌ನಲ್ಲಿ ಗೆಳೆಯರ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ವಿಡಿಯೊ: ಆಟೋ ಓಡಿಸುವುದರಲ್ಲೂ ಸೈ ಎಂದ ಸಲ್ಮಾನ್ ಖಾನ್

ಹುಟ್ಟುಹಬ್ಬದ ನಂತರ ಫಾರ್ಮ್‌ಹೌಸ್‌ನಲ್ಲಿಯೇ ಉಳಿದುಕೊಂಡಿರುವ ಅವರು, ಸಿನಿಮಾದಿಂದ ಬಿಡುವು ಮಾಡಿಕೊಂಡು ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾವನ್ನು ನಾನೇ ಕೈಯಲ್ಲಿ ಹಿಡಿದುಕೊಂಡಿದ್ದೆ, ಮೂರು ಬಾರಿ ಕಚ್ಚಿದೆ: ಸಲ್ಮಾನ್ ಖಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.