ಮುಂಬೈ: ಬೆಟ್ಟ–ಗುಡ್ಡ, ದಟ್ಟಡವಿ, ನದಿ, ಸಮುದ್ರ, ಸುರಂಗ,...ಹೀಗೆ ನಿಸರ್ಗದ ರುದ್ರರಮಣೀಯ ಸೊಬಗಿನ ನಡುಗೆ ಸಾಹಸಮಯ ಯಾತ್ರೆಯ ಕಾರ್ಯಕ್ರಮಗಳ ಮೂಲಕ ಹೆಸರಾಗಿರುವ ಬೇರ್ ಗ್ರಿಲ್ಸ್, ಈಗ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ.

'ರಣವೀರ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ವಿಶೇಷ ರಿಯಾಲಿಟಿ ಕಾರ್ಯಕ್ರಮಕ್ಕಾಗಿ ನಟ ರಣವೀರ್ ಸರ್ಬಿಯಾದ ಕಾಡುಗಳಲ್ಲಿ ಅಲೆದಾಡಿದ್ದಾರೆ. ತನ್ನ ಪ್ರಿಯತಮೆಗಾಗಿ 'ಅಪರೂಪದ ಹೂ' ಹುಡುಕಿ ಹೊರಡುವುದೇ ಈ ಸಾಹಸಯಾತ್ರೆಯ ಉದ್ದೇಶ. ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಈ ಕಾರ್ಯಕ್ರಮವು ಜುಲೈ 8ರಂದು ಪ್ರಸಾರವಾಗಲಿದೆ.

ಕಾಡು ಹೂವಿನ ಹುಡುಕಾಟದಲ್ಲಿ ರಣವೀರ್ ಕರಡಿಯ ಬಾಯಿಗೆ ಹತ್ತಿರವಾಗುವುದು, ಅದರಿಂದ ತಪ್ಪಿಸಿಕೊಂಡು ಓಡುವುದು, ಬೆಟ್ಟದಿಂದ ಬೆಟ್ಟಕ್ಕೆ ಹಗ್ಗ ಹಿಡಿದು ದಾಟುವುದು,..ಇಂಥ ಹಲವು ದೃಶ್ಯಗಳು ಕಾರ್ಯಕ್ರಮದಲ್ಲಿ ಟೀಸರ್‌ನಲ್ಲಿ ನೋಡಲು ಸಿಗುತ್ತದೆ.

ಸಾಮಾಜಿಕ ಮಾಧ್ಯಮಗಳ ತಮ್ಮ ಖಾತೆಗಳಲ್ಲಿ ರಣವೀರ್ ಮತ್ತು ಗ್ರಿಲ್ಸ್ ಶುಕ್ರವಾರ 'ರಣವೀರ್ ವರ್ಸಸ್ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಟೀಸರ್ ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಬಾನಿಜಯ್ ಏಷ್ಯಾ ಮತ್ತು ದಿ ನ್ಯಾಚುರಲ್ ಸ್ಟುಡಿಯೋಸ್ ನಿರ್ಮಾಣ ಮಾಡಿದೆ.

ಭಾರತದ ಮೊಟ್ಟಮೊದಲ ವಿಶೇಷ ಸಾಹಸಮಯ ಕಾರ್ಯಕ್ರಮವನ್ನು ನೆಟ್‌ಫ್ಲಿಕ್ಸ್ ಹೊರತರುತ್ತಿರುವುದಾಗಿ ನೆಟ್‌ಫ್ಲಿಕ್ಸ್ ಇಂಡಿಯಾದ ಉಪಾಧ್ಯಕ್ಷೆ (ಕಂಟೆಂಟ್) ಮೋನಿಕಾ ಶೆರ್ಗಿಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.