ಚುಟುಕು ಸಾಹಿತಿ ಎಚ್.ಡುಂಡಿರಾಜ್ ಅವರ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕವು ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡದಿಂದ ಜುಲೈ 14ರಂದು ಭಾನುವಾರ 85ನೇ ಪ್ರದರ್ಶನ ಕಾಣುತ್ತಿದೆ.

ನಾಟಕದ ಕುರಿತು: ಡುಂಡಿರಾಜರ ಹಾಸ್ಯಪ್ರಜ್ಞೆಯ ಎರಕದಲ್ಲಿ ಮೂಡಿಬಂದಿರುವ ಈ ನಾಟಕವು ಟಿ.ವಿಗಳಲ್ಲಿ ವಿಜೃಂಭಿಸುವ ಜ್ಯೋತಿಷಿಗಳ ಹಾವಳಿಯನ್ನು, ಅವರ ನಿಜಬಣ್ಣ, ಅವಾಂತರಗಳನ್ನು ಹಾಸ್ಯದ ಮೂಲಕ ನಾಟಕದಲ್ಲಿ ತೋರಿಸಲಾಗಿದೆ. ಕೈಯಲ್ಲಿ ಲ್ಯಾಪ್ಟ್ಯಾಪ್ ಹಿಡಿದು ರಂಗದ ಮೇಲೆ ಬಂದು ಕೂರುವ ಲ್ಯಾಪಾನಂದ ಟ್ಯಾಪಾನಂದ ಶಾಸ್ತ್ರಿ ರಾಜ್ಯದ ವಿವಿಧ ಊರುಗಳಿಂದ ತಮ್ಮ ಚಿತ್ರ ವಿಚಿತ್ರ ಸಮಸ್ಯೆಗಳಿಗೆ ಪರಿಹಾರ ಕೇಳಲು ಕರೆ ಮಾಡುವ ಜನರಿಗೆ ಕೊಡುವ ಉಚಿತ ಸಲಹೆಗಳಿಗೆ ರಂಗ ಚೌಕಟ್ಟು ಸಿಕ್ಕಿದೆ.

ನಾಟಕದ ನಡುವೆ ಬರುವ ಡುಂಡಿರಾಜರ ಹಾಸ್ಯ ಚುಟುಕುಗಳು ಪ್ರೇಕ್ಷಕರನ್ನು ನಗುವಂತೆ ಮಾಡುತ್ತವೆ.

ಸ್ಥಳ: ವಾಡಿಯಾ ಸಭಾಂಗಣ, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್. ಬಸವನಗುಡಿ. ಸಂಜೆ 7 ಗಂಟೆಗೆ. ವಿವರಗಳಿಗೆ: 99459 77184

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.