ಬೆಂಗಳೂರು: ನಿರೀಕ್ಷೆಯಂತೆ ಚಕ್ರವರ್ತಿ ಚಂದ್ರಚೂಡ್ ಅವರನ್ನು ಮನೆಯ ಸ್ಪರ್ಧಿಗಳು 7ನೇ ವಾರದ ಕಳಪೆ ಸ್ಪರ್ಧಿ ಎಂದು ಒಮ್ಮತದಿಂದ ನಿರ್ಧರಿಸಿದ್ದಾರೆ. ಅದೇ ರೀತಿ ಅತ್ಯುತ್ತಮ ಸ್ಪರ್ಧಿ ಎಂದು ನಿಧಿ ಸುಬ್ಬಯ್ಯ ಅವರನ್ನು ವಿಶೇಷ ಅಧಿಕಾರ ಬಳಸಿ ನಾಯಕ ಪ್ರಶಾಂತ್ ಸಂಬರಗಿ ಆಯ್ಕೆ ಮಾಡಿದ್ದಾರೆ.

ಆತಂಕ ತಂದಿದ್ದ ಚಂದ್ರಚೂಡ್ ಜೈಲಿಗೆ: ಮನೆಗೆ ಎಂಟ್ರಿಯಾದ ದಿನದಿಂದ ಮನೆಯ ಸದಸ್ಯರಿಗೆ ಆತಂಕ ತಂದಿದ್ದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕಳಪೆ ಪಟ್ಟ ನೀಡಿರುವ ಮನೆಯ ಸ್ಪರ್ಧಿಗಳು, ಜೈಲಿಗೆ ಕಳುಹಿಸಿದ್ದಾರೆ. ನಿಯಮದಂತೆ ಅವರು ಇನ್ಮುಂದೆ ಮನೆಯ ಯಾವುದೇ ಸೌಲಭ್ಯ ಬಳಸದೆ ಗಂಜಿ ಕುಡಿದು, ಬಿಗ್ ಬಾಸ್ ಅವರ ಆದೇಶಕ್ಕಾಗಿ ಕಾಯಬೇಕು.

ಮನೆಗೆ ಬಂದ ದಿನದಿಂದ ತುಂಬಾ ಒರಟಾಗಿ ನಡೆದುಕೊಂಡಿದ್ದಾರೆ. ಮನೆಯ ಒಗ್ಗಟ್ಟನ್ನು ಒಡೆದು ಹಾಕಿದ್ದಾರೆ, ಸರ್ವಾಧಿಕಾರಿ ರೀತಿ ಆಡುತ್ತಾರೆ ಎಂಬ ಸಾಲು ಸಾಲು ಆರೋಪಗಳನ್ನು ಚಕ್ರವರ್ತಿ ವಿರುದ್ಧ ಮಾಡಲಾಯಿತು. ತಮ್ಮ ನಡವಳಿಕೆ ಬಗ್ಗೆ ಮಾತನಾಡಿದ ಚಂದ್ರಚೂಡ್‌ಗೆ ದಿವ್ಯಾ ಸುರೇಶ್ ಸ್ವಲ್ಪ ಜೋರಾಗಿಯೇ ಕಳಪೆ ಎಂದು ಘೋಷಿಸಿದರು. ಹೊಸ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಸಹ ಚಂದ್ರಚೂಡ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಕಂಡು ಬಂತು. ಮನೆಗೆ ಪ್ರವೇಶಿಸುವುದಕ್ಕೂ ಮುನ್ನವೇ ಇವರ ಜೊತೆಗೆ ಹೊಂದಿಕೊಳ್ಳುವುದು ಕಷ್ಟ ಎಂಬ ಭಾವನೆ ಮೂಡಿತ್ತು ಎಂದು ಹೇಳಿದ್ದಾರೆ.

ಬೆಸ್ಟ್ ಪರ್ಫಾಮರ್ ನಿಧಿ: ಈ ವಾರದ ಅತ್ಯುತ್ತಮ ಸ್ಪರ್ಧಿಯಾಗಿ ನಿಧಿ ಸುಬ್ಬಯ್ಯ ಅಚ್ಚರಿಕರ ರೀತಿಯಲ್ಲಿ ಹೊರ ಹೊಮ್ಮಿದ್ದಾರೆ. ಅರವಿಂದ್, ರಘು ಮತ್ತು ನಿಧಿ ಸುಬ್ಬಯ್ಯಗೂ ತಲಾ ಮೂರು ಮತ ಬಿದ್ದಿದ್ದವು. ಆದರೆ, ಪ್ರಶಾಂತ್ ಸಂಬರಗಿ ತಮ್ಮ ವಿಶೇಷ ಅಧಿಕಾರ ಬಳಸಿ ನಿಧಿಗೆ ಬೆಸ್ಟ್ ಪರ್ಫಾಮರ್ ಪಟ್ಟ ಕೊಟ್ಟರು.

ಇದನ್ನೂ ಓದಿ..Big Boss 8: ದಿವ್ಯಾ ಸುರೇಶ್ ಬಗ್ಗೆ ಪ್ರಶಾಂತ್ ಸಂಬರಗಿ ವಿವಾದಾತ್ಮಕ ಕಾಮೆಂಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.