ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರ 16ನೇ ದಿನ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿದೆ. ಚಾರ್ಜಿಂಗ್ ಯಂತ್ರ ತ್ಯಾಗ ಮಾಡದೆ ಸದಸ್ಯರಿಗೆ ಬೆಡ್ ರೂಮ್ ಕೊಡಿಸುವ ಕೆಲಸಕ್ಕೆ ಮುಂದಾಗದ ಅರವಿಂದ್ ಮತ್ತು ದಿವ್ಯಾ ಉರುಡುಗ ವಿರುದ್ಧ ಬಹುತೇಕ ಸದಸ್ಯರು ಅಸಮಾಧಾನಗೊಂಡಿದ್ದಾರೆ. ನಟಿ ಶುಭಾ ಪೂಂಜಾ ಗಳಗಳನೆ ಅತ್ತ ಘಟನೆಯೂ ನಡೆದಿದೆ.

ಆಗಿದ್ದಿಷ್ಟು.. ಯುಗಳ ಗೀತೆ ಟಾಸ್ಕ್ ಗೆದ್ದ ಅರವಿಂದ್ ಮತ್ತು ದಿವ್ಯಾ ಉರುಡುಗ ಜೋಡಿಗೆ ಬಿಗ್ ಬಾಸ್ ಒಂದು ವಿಶಿಷ್ಟ ಚಾರ್ಜಿಂಗ್ ಯಂತ್ರ ನೀಡಿದ್ದರು. ಇದು ತುಂಬಾ ವಿಶಿಷ್ಟವಾದದ್ದು. ಇದನ್ನು ಮತ್ತೆ ನನಗೆ ಹಿಂದಿರುಗಿಸಿದರೆ ಬಿಗ್ ಬಾಸ್ ಮನೆ ಸದಸ್ಯರಿಗೆ ಬೆಡ್ ರೂಮ್ ಹಿಂದಿರುಗಿಸುವುದಾಗಿ ಬಿಗ್ ಬಾಸ್ ಆಯ್ಕೆ ನೀಡಿದರು. ಆದರೆ, ಈ ಬಗ್ಗೆ ಬಹಳ ಸಮಯ ಚರ್ಚಿಸಿದ ದಿವ್ಯಾ ಮತ್ತು ಅರವಿಂದ್, ವಾಪಸ್ ಕೊಡೋದು ಬೇಡ ಎಂಬ ನಿರ್ಧಾರಕ್ಕೆ ಬಂದರು.

ದಾನ ಮಾಡಿ ಸಾಕಾಗಿದೆ: 10 ನಿಮಿಷ ಈ ಬಗ್ಗೆ ಪ್ರೈವೇಟ್ ಆಗಿ ಚರ್ಚೆ ನಡೆಸಿದ ದಿವ್ಯಾ ಉರುಡುಗ– ಅರವಿಂದ್ ತಂಡದ ಸದಸ್ಯರ ಮೇಲೆ ತಮಗಿದ್ದ ಕೋಪ ಹೊರ ಹಾಕಿದರು. ನನಗೆ ದಾನ ಮಾಡಿ ಸಾಕಾಗಿದೆ. ಅವತ್ತು ಶಮಂತ್ನನ್ನು ಉಳಿಸಿದೆವು. ಈಗ ಇದನ್ನು ಬಿಟ್ಟು ಬೆಡ್ ರೂಮ್ ಕೊಡಿಸಿದರೆ ಎಲ್ಲರೂ ಥ್ಯಾಂಕ್ಸ್ ಹೇಳಿ ಮತ್ತೆ ನಾಮಿನೇಟ್ ಮಾಡುತ್ತಾರೆ. ಈಗಾಗಲೇ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದೀವಿ. ನಾವು ಗಳಿಸಿದ್ದನ್ನು ಯಾಕೆ ಕೊಡಬೇಕು ಎಂದು ಅರವಿಂದ್ ಅಭಿಪ್ರಾಯಪಟ್ಟರು. ಇದಕ್ಕೂ ಮುನ್ನ, ದಿವ್ಯಾ ಸಹ ನಾವು ಗಳಿಸಿದ್ದನ್ನು ಕೊಟ್ಟರೂ ಏನೂ ವ್ಯತ್ಯಾಸ ಆಗೋದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು.

ಜೋಡಿ ಆಯ್ಕೆ ಬಳಿಕ ನಡೆದ ನಾಮಿನೇಶನ್ ಪ್ರಕ್ರಿಯೆ ವೇಳೆ ತಮ್ಮಿಬ್ಬರನ್ನೂ ಮನೆಯಿಂದ ಹೊರ ಕಳುಹಿಸಲು ಮನೆಯ ಸದಸ್ಯರು ನಾಮಿನೇಟ್ ಮಾಡಿದ ಬಗ್ಗೆ ಇಬ್ಬರೂ ಅಸಮಾಧಾನಗೊಂಡಿರುವುದು ಈ ವೇಳೆ ಬಯಲಾಯ್ತು.

ಗಳಗಳನೆ ಅತ್ತ ಶುಭಾ ಪೂಂಜಾ: ಚಾರ್ಜಿಂಗ್ ಯಂತ್ರ ಮತ್ತು ಬೆಡ್ ರೂಮ್ ಆಯ್ಕೆ ಕೊಡುವುದಕ್ಕೂ ಮುನ್ನ, ಬೆಡ್ ರೂಮ್ ತ್ಯಾಗದ ನಿರ್ಧಾರ ಹಿಂಪಡೆಯಲು ಮನೆಯ ಎಲ್ಲ ಮಹಿಳಾ ಸ್ಪರ್ಧಿಗಳು ಬಿಗ್ ಬಾಸ್ ಮುಂದೆ ಮನವಿ ಮಡಿಕೊಂಡರು. ನಿದ್ದೆ ಬರುತ್ತಿಲ್ಲ ದಯವಿಟ್ಟು ಬೆಡ್ ರೂಮ್ ಹಿಂದಿರುಗಿಸಿ ಬೇರೆ ಶಿಕ್ಷೆ ಕೊಡಿ ಎಂದು ಮನವಿ ಮಾಡಿದ್ದರು. ಆ ಗುಂಪಿನಲ್ಲಿ ದಿವ್ಯಾ ಉರುಡುಗ ಸಹ ಇದ್ದರು.

ಆದರೆ, ಚಾರ್ಜಿಂಗ್ ಯಂತ್ರ ಕೊಟ್ಟು.ಮನೆಯ ಸದಸ್ಯರಿಗೆ ಬೆಡ್ ರೂಮ್ ಪಡೆದುಕೊಳ್ಳುವಂತೆ ಬಿಗ್ ಬಾಸ್ ಹೇಳಿದಾಗ ಅರವಿಂದ್ ಜೊತೆ ಚರ್ಚಿಸಿದ ದಿವ್ಯಾ ಉರುಡುಗ ಚಾರ್ಜಿಂಗ್ ಯಂತ್ರ ಹಿಂದಿರುಗಿಸದ ನಿರ್ಧಾರಕ್ಕೆ ಬಂದ ಬಗ್ಗೆ ಶುಭಾ ಪೂಂಜಾ ಕಿಡಿಕಾರಿದರು.

ನಾವೆಲ್ಲರೂ ಒದ್ದಾಡುತ್ತಿರುವುದು ಅವಳಿಗೆ ಗೊತ್ತೆ ಇದೆ. ಆದರೂ, ಇಂತಹ ನಿರ್ಧಾರ ಕೈಗೊಂಡಿದ್ದಾರೆ. ನಾನಾಗಿದ್ದರೆ ಯೋಚಿಸುತ್ತಲೇ ಇರಲಿಲ್ಲ. ಕೂಡಲೆ ಚಾರ್ಜಿಂಗ್ ಯಂತ್ರ ಕೊಟ್ಟು ಸದಸ್ಯರ ಪರ ನಿಲ್ಲುತ್ತಿದ್ದೆ ಎಂದು ಗಳಗಳನೆ ಅತ್ತರು. ಇನ್ನುಮುಂದೆ ಅವರಿಬ್ಬರ ಮುಖ ನೋಡುವುದೂ ಇಲ್ಲ, ಮಾತಾಡುವುದೂ ಇಲ್ಲ ಎಂದು ಗೋಳಾಡಿದರು.

ಇದನ್ನೂ ಓದಿ.. Big Boss 8.. ಶುರುವಾಯ್ತು ಹೊಸ ಪ್ರೇಮ ಕಥೆ? ಸುದೀಪ್, ಸ್ಪರ್ಧಿಗಳಿಗೂ ಇದೇ ಅನುಮಾನ

ಎಲ್ಲಿ ಹೋಗ್ತಾರೆ, ಇಲ್ಲೇ ಇರಬೇಕಲ್ಲ: ಅರವಿಂದ್, ದಿವ್ಯಾ ಉರುಡುಗ ನಿರ್ಧಾರದ ಬಗ್ಗೆ ನಿಧಿ ಸುಬ್ಬಯ್ಯ, ಮಂಜು, ಪ್ರಶಾಂತ್ ಹೀಗೆ ಬಹುತೇಕರು ಕೋಪ ವ್ಯಕ್ತಪಡಿಸಿದರು. ಈ ಮನೆಯಲ್ಲಿ ಮುಂದುವರಿಯಬೇಕಾದರೆ ಬರೀಟಾಸ್ಕ್ ಗೆಲ್ಲುವುದಲ್ಲ. ಸದಸ್ಯರ ಜೊತೆ ಚೆನ್ನಾಗಿರಬೇಕು. ಅವರು ತಪ್ಪು ಮಾಡಿದರು ಎಂದು ಗೀತಾ ಹೇಳಿಕೊಂಡರು.

ಶಮಂತ್ ಮೇಲೆ ತಿರುಗಿದ ಕೋಪ: ಎರಡನೇ ವಾರದ ಅಂತ್ಯದಲ್ಲಿ ಶಮಂತ್ ನೇರ ನಾಮಿನೇಟ್ ಆಗುವುದನ್ನು ತಪ್ಪಿಸಲು ತಂಡದ ಸದಸ್ಯರು ಬೆಡ್ ರೂಮ್ ತ್ಯಾಗ ಮಾಡಿದ್ದರು. ಇದೀಗ, ಬೆಡ್ ರೂಮ್ ಹಿಂಪಡೆಯಲು ದಿವ್ಯಾ–ಅರವಿಂದ್ ತ್ಯಾಗ ಮಾಡಿಲ್ಲವಾದ್ದರಿಂದ ಸದಸ್ಯರ ಕೋಪ ಶಮಂತ್ ಮೇಲೆ ತಿರುಗಿತ್ತು.

ನೀನು ಅವರಂತೆಯೇ, ತಂಡದ ಸದಸ್ಯರು ಬೆಡ್ ರೂಮ್ ತ್ಯಾಗ ಮಾಡುವುದು ಬೇಡ. ನಾನು ನೇರ ನಾಮಿನೇಟ್ ಆಗ್ತೀನಿ ಅಂತಾ ನೀನು ಹೇಳಬಹುದಿತ್ತು ಎಂದು ಚಂದ್ರಕಲಾ ಅವರು ಶಮಂತ್ ಮೇಲೆ ಕಿರುಚಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.