ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ 22ನೇ ದಿನದ ಆಟ ಕುತೂಹಲಕಾರಿ ಹಂತಕ್ಕೆ ತಲುಪಿತ್ತು. ಆಟ ಬಿಗಿಯಾಗುತ್ತಿರುವ ಈ ಹಂತದಲ್ಲಿ ಮನೆಯಲ್ಲಿ ಉಳಿಯಬೇಕೆಂದರೆ ಪ್ರತಿ ಸದಸ್ಯ ಉತ್ತಮ ಆಟ ಆಡಲೇಬೇಕು. ಆದ ಕಾರಣ ಮನೆಯ ಕ್ಯಾಪ್ಟನ್ ಅರವಿಂದ್ ಹೊರತುಪಡಿಸಿ ಮನೆಯ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದೀರಿ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ನಿಮ್ಮನ್ನು ನೀವು ಸಾಬೀತುಮಾಡಿಕೊಳ್ಳಲು ನಿಮಗಿದೊಂದು ಅವಕಾಶ ಎಂದು ಹೇಳಿದ್ದಾರೆ.

ಬಿಗ್ ಬಾಸ್ ದಿಢೀರ್ ನಿರ್ಧಾರದಿಂದ ಮನೆಯ ಸದಸ್ಯರಲ್ಲಿ ಆತಂಕ ಶುರುವಾಗಿದೆ. ಮಂಜು ಪಾವಗಡ, ರಾಜೀವ್ ಸೇರಿದಂತೆ ಇಷ್ಟು ದಿನ ನಾಮಿನೇಟ್ ಆಗದೆ ಉಳಿದಿದ್ದ ಕೆಲ ಸದಸ್ಯರಿಗೂ ಈಗ ಢವಢವ ಶುರುವಾಗಿದೆ. ಹೀಗಾಗಿ, ಬಿಗ್ ಬಾಸ್ ಮನೆಯಲ್ಲಿ ಉತ್ತಮ ಪ್ರದರ್ಶನ ನೀಡಿ ವೀಕ್ಷಕರಿಂದ ಮತ ಪಡೆದು ಸೇಫ್ ಆಗಿ ಮನೆಯಲ್ಲಿ ಮುಂದುವರಿಯಬೇಕಿದೆ.

ಕೆಲ ಸದಸ್ಯರು, ಕಂಫರ್ಟ್ ಜೋನ್ನಲ್ಲಿ ಉಳಿದಿದ್ದು, ಅವರನ್ನು ಎಚ್ಚರಿಸಲು ಬಿಗ್ ಬಾಸ್ ಈ ರೀತಿ ಎಲ್ಲರನ್ನೂ ನಾಮಿನೇಟ್ ಮಾಡುವ ಮೂಲಕ ಮೂಲಕ ಎಲಿಮಿನೇಶನ್ ಪರೀಕ್ಷೆ ಇಟ್ಟಿದ್ದಾರೆ. ನಾನೇ ನನ್ನ ಬಿಟ್ಟರೆ ಇಲ್ಲ ಎನ್ನುತ್ತಿದ್ದವರ ಬಗ್ಗೆ ಜನ ಏನ್ ಹೇಳುತ್ತಾರೆ ಕೇಳಿ ಎಂದು ಬಿಗ್ ಬಾಸ್ ಪರೀಕ್ಷೆ ಒಡ್ಡಿದ್ದಾರೆ ಎಂದು ಶಂಕರ್ ಅಶ್ವತ್ಥ್ ಅಭಿಪ್ರಾಯಪಟ್ಟರು.

ಚದುರಂಗದಾಟದಲ್ಲಿ ಸ್ಪರ್ಧಿಗಳ ಸತ್ವ ಪರೀಕ್ಷೆ: ಎಲ್ಲ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ ಬಳಿಕ ಬಿಗ್ ಬಾಸ್ ಚಂದುರಂಗದಾಟದ ಮೂಲಕ ಸ್ಪರ್ಧಿಗಳಿಗೆ ಕ್ಯಾಪ್ಟೆನ್ಸಿ ಕಂಟೆಂಡರ್ ಟಾಸ್ಕ್ ನೀಡಿದ್ದಾರೆ. ಇದಕ್ಕೂ ಮುನ್ನ ತಮಗೆ ಯಾರು ಪ್ರತಿಸ್ಪರ್ಧಿ, ಯಾರು ಪ್ರತಿಸ್ಪರ್ಧಿ ಅಲ್ಲ ಎಂಬ ಬಗ್ಗೆ ಆಯ್ಕೆಯ ಅವಕಾಶ ನೀಡಿದ್ದರು. ಸ್ಪರ್ಧಿಗಳ ಆಯ್ಕೆಯ ಆಧಾರದ ಮೇಲೆ ಬಿಳಿ ಮತ್ತು ಕಪ್ಪು ತಂಡಗಳನ್ನು ರಚಿಸಲಾಗಿದ್ದು, ಆಟ ಶುರುವಾಗಿದೆ.

ಆಟದಿಂದ ಹೊರಬಿದ್ದ ರಘು, ನಿಧಿ: ಮೊದಲ ಆಟದಲ್ಲಿ ಬಿಳಿ ತಂಡದ ರಾಜ ಶಂಕರ್ ಅಶ್ವತ್ಥ್ ಅವರು ರಘು ಅವರನ್ನು ಆಯ್ಕೆ ಮಾಡಿದರು. ಅವರಿಗೆ ಚೆಂಡನ್ನು ಬಲೆಗೆ ಒದೆಯುವ ಟಾಸ್ಕ್ ಇತ್ತು. 8 ಯತ್ನಗಳಲ್ಲಿ ವಿಫಲರಾಗಿ ಎರಡು ಬಾರಿ ಮಾತ್ರ ಗೋಲ್ ಮಾಡುವ ಮೂಲಕ ಕೇವಲ 400 ಪಾಯಿಂಟ್ಸ್ ಗಳಿಸಿ ಆಟದಿಂದ ಹೊರಬಿದ್ದರು. ಗೆಲುವಿಗೆ ಸಾವಿರ ಪಾಯಿಂಟ್ಸ್ ಅಗತ್ಯವಿತ್ತು.

ಬಳಿಕ, ಕಪ್ಪು ತಂಡದ ರಾಜ ಚಂದ್ರಕಲಾ ಅವರು ಬಿಳಿ ತಂಡದ ಸೈನಿಕ ನಿಧಿ ಸುಬ್ಬಯ್ಯ ಅವರಿಗೆ ಸವಾಲು ನೀಡಿದ್ದರು. ಎಲ್ಸಿಡಿ ಸ್ಕ್ರೀನ್ನಲ್ಲಿ ಬರುವ ಬಣ್ಣಗಳನ್ನು ನೆನಪಿನಲ್ಲಿರಿಸಿಕೊಂಡು ಬಿಗ್ ಬಾಸ್ ಹೇಳಿದ ಬಣ್ಣದ ವೈರ್ ಕತ್ತರಿಸುವ ಟಾಸ್ಕ್ ನೀಡಲಾಗಿತ್ತು. ಎರಡು ಯತ್ನದಲ್ಲಿ ಸಫಲರಾದ ನಿಧಿ, ಮೂರು ಯತ್ನದಲ್ಲಿ ವಿಫಲರಾಗಿ ಸೋತು ಆಟದಿಂದ ಹೊರಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.