ಬೆಂಗಳೂರು: ಬಿಗ್‌ಬಾಸ್ ಮನೆಗೆ ಹೋದಾಗಿನಿಂದ ಡ್ರೋನ್ ಪ್ರತಾಪ್ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಆರಂಭದಲ್ಲಿ ಮೌನವಾಗಿದ್ದ ಪ್ರತಾಪ್ ಮೊದಲ ವಾರದ ಕಿಚ್ಚನ ಪಂಚಾಯತಿ ಬಳಿಕ ಇತರ ಸ್ಪರ್ಧಿಗಳ ಜತೆಗೆ ಸೇರಿಕೊಳ್ಳುತ್ತಿದ್ದಾರೆ.

ವಾರ ಕಳೆದಂತೆ ಪ್ರತಾಪ್ ಟಾಸ್ಕ್‌ಗಳಲ್ಲಿ ತೊಡಗಿಸಿಕೊಂಡು, ಎಲ್ಲರೊಂದಿಗೆ ಬೆರೆತರೂ ‘ಹೊರಗಿನ ಪ್ರಪಂಚಕ್ಕೆ ಸಾಚಾ ಎಂದು ತೋರಿಸಿಕೊಳ್ಳುವ ಪ್ರಯತ್ನ ಬೇಡ’ ಎನ್ನುವ ಹೀಯಾಳಿಕೆಯ ಮಾತುಗಳನ್ನು ಕೇಳುತ್ತಲೇ ಇದ್ದರು.

ಈ ನಡುವೆ ದಸರಾ ಹಬ್ಬದ ಅಂಗವಾಗಿ ಚಂದನವನದ ನಟಿ ತಾರಾ ಅನುರಾಧ ಅವರು ಬಿಗ್ ಬಾಸ್ ಮನೆಗೆ ತೆರಳಿ ಸ್ಪರ್ಧಿಗಳೊಂದಿಗೆ ಹಬ್ಬ ಆಚರಿಸಿದ್ದಾರೆ. ಅಲ್ಲದೆ ಪ್ರತಿಯೊಬ್ಬರೊಂದಿಗೂ ಪ್ರತ್ಯೇಕವಾಗಿ ಕುಳಿತು ಮಾತನಾಡಿದ್ದಾರೆ.

ಆದರೆ ಹೆಚ್ಚು ಹೊತ್ತು ಪ್ರತಾಪ್ ಜತೆಗೆ ತಾರಾ ಮಾತನಾಡಿದ್ದಾರೆ. ತಾರಾ ಅವರು ಮಾತು ಆರಂಭಿಸುತ್ತಿದ್ದಂತೆ ಅಳಲು ಪ್ರಾರಂಭಿಸಿದ ಪ್ರತಾಪ್ ಕುಟುಂಬದವರಿಂದ ದೂರವಿರುವ ಬಗೆಗಿನ ನೋವು ತೋಡಿಕೊಂಡಿದ್ದಾರೆ.

‘ಅಪ್ಪ–ಅಮ್ಮ ಎಲ್ಲರ ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದೇನೆ, ಎಲ್ಲರಿಂದಲೂ ದೂರ ಇದ್ದೇನೆ. ಅಪ್ಪ ಅಮ್ಮನನ್ನು ನೋಡಬೇಕು ಎನ್ನಿಸುತ್ತಿದೆ, ಅವರನ್ನು ಭೇಟಿ ಮಾಡಬೇಕು’ ಎಂದು ತಾರಾ ಎದುರು ಪ್ರತಾಪ್ ಕಣ್ಣೀರು ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.