ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9ನೇ ಆವೃತ್ತಿಯು 3ನೇ ವಾರಕ್ಕೆ ಕಾಲಿಟ್ಟಿದೆ. ಜಗಳ, ಗಲಾಟೆ ನಡುವೆ ಮನೆಯಲ್ಲಿ ಸ್ವಾರಸ್ಯಕರ ಸಂಗತಿಗಳು ಚರ್ಚೆಗೆ ಬರುತ್ತಿವೆ.

ಈ ನಡುವೆ ಮನೆಯ ಹಿರಿಯ ಸದಸ್ಯ ಅರುಣ್ ಸಾಗರ್ ತಮ್ಮ ಮೊದಲ ರಾತ್ರಿಯ ಪ್ರಸಂಗವನ್ನು ಮನೆಯ ಮಹಿಳಾ ಸದಸ್ಯರ ಎದುರು ಹಂಚಿಕೊಳ್ಳುವ ಮೂಲಕ ಅವರನ್ನು ನಗೆಗಡಲಲ್ಲಿ ತೇಲಿಸಿದರು. ಅವರ ಮಾತನ್ನು ಬಿಟ್ಟ ಕಣ್ಣು ಬಿಟ್ಟಂತೆ ನಿಬ್ಬೆರಗಾಗಿ ಕೇಳುತ್ತಿದ್ದ ಸದಸ್ಯರು ಬಿದ್ದು ಬಿದ್ದು ನಕ್ಕರು.

‘ಬೆಡ್ ರೂಮ್ ಪಕ್ಕದಲ್ಲಿತ್ತು ಕಾಮನ್ ಟಾಯ್ಲೆಟ್’

ನಾವು ಮದುವೆಯಾಗಿ ಮೊದಲ ರಾತ್ರಿಗೆ ಸಿದ್ಧರಾಗಿದ್ದೆವು. ನಮ್ಮ ಮಾವನ ಮನೆಯ ಹೊರಗಿನ ಕೊಠಡಿಯೊಂದನ್ನು ಹೂಗಳಿಂದ ಸಿಂಗರಿಸಿ ಸಿದ್ಧತೆ ಮಾಡಲಾಗಿತ್ತು. ಆದರೆ, ಅಲ್ಲಿಯೇ ಪಕ್ಕದಲ್ಲಿದ್ದ ಕಾಮನ್ ಟಾಯ್ಲೆಟ್ ನಮಗೆ ಮೊದಲ ರಾತ್ರಿಯನ್ನೇ ಮರೆಸಿತ್ತು ಎಂದು ಅರುಣ್ ಸಾಗರ್ ಹೇಳಿದರು.

ಮನೆ ತುಂಬಾ ನೆರೆದಿದ್ದ ನೆಂಟರಿಷ್ಟರು ಪದೇ ಪದೇ ಟಾಯ್ಲೆಟ್‌ಗೆ ಹೋಗುತ್ತಿದ್ದರು. ಅದರ ಶಬ್ದ ನಮ್ಮನ್ನು ವಿಚಲಿತಗೊಳಿಸುತ್ತಿತ್ತು. ಕೆಲವರು ನಾರಾಯಣ, ಕೃಷ್ಣ ಎಂದೆಲ್ಲ ಕೂಗುತ್ತಿದ್ದರು. ಅವರ ಬಾಧೆ ನಮ್ಮ ಬಾಧೆಯಾಗಿತ್ತು ಎಂದು ಆ ಪ್ರಸಂಗವನ್ನು ಹಂಚಿಕೊಂಡರು.

ಈ ವಾರ ನಾಮಿನೇಟ್ ಆದವರು ಯಾರು?:

3ನೇ ವಾರ ಮನೆಯಿಂದ ಹೊರಹೋಗಲು 9 ಮಂದಿ ನಾಮಿನೇಟ್ ಆಗಿದ್ದಾರೆ.

ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ಮಯೂರಿ, ದರ್ಶ್ ಚಂದ್ರಪ್ಪ, ರೂಪೇಶ್ ಶೆಟ್ಟಿ, ವಿನೋದ್ ಗೊಬ್ಬರಗಾಲ, ದೀಪಿಕಾ ದಾಸ್, ಅಮೂಲ್ಯ ಗೌಡ, ಅನುಪಮಾ ಗೌಡ ನಾಮಿನೇಟ್ ಆಗಿದ್ದಾರೆ.

ರೂಪೇಶ್ ರಾಜಣ್ಣ ಮನೆಯಲ್ಲಿ ಅಷ್ಟಾಗಿ ತೊಡಗಿಸಿಕೊಂಡಿಲ್ಲ ಎಂಬ ಕಾರಣಕ್ಕೆ ಮನೆಯ ಬಹುತೇಕ ಸದಸ್ಯರು ಮತ ಹಾಕಿದರು. ಪ್ರಶಾಂತ್ ಸಂಬರಗಿ ಮಾತು ಬದಲಿಸುತ್ತಾರೆ ಎಂಬ ಕಾರಣಕ್ಕೆ ಹೆಚ್ಚು ಜನರು ನಾಮಿನೇಟ್ ಮಾಡಿದರು. ರೂಪೇಶ್ ಶೆಟ್ಟಿ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆರ್ಯವರ್ಧನ್‌ಗೆ ಸಹಾಯ ಮಾಡಿದ್ದಕ್ಕಾಗಿ ನಾಮಿನೇಟ್ ಮಾಡಲಾಯಿತು. ದರ್ಶ್ ಚಂದ್ರಪ್ಪ ಅವರಿಗೆ ಕ್ರಿಯಾಶೀಲವಾಗಿಲ್ಲ ಎಂಬ ಕಾರಣ ನೀಡಲಾಯಿತು.

ಅನುಪಮಾ ಗೌಡ ಅವರನ್ನು ಕ್ಯಾಪ್ಟನ್ ಆರ್ಯವರ್ಧನ್ ತಮ್ಮ ವಿಶೇಷ ಅಧಿಕಾರ ಬಳಸಿ ನಾಮಿನೇಟ್ ಮಾಡಿದರೆ, ಅಮೂಲ್ಯ ಗೌಡ ಅವರನ್ನು ಕಳೆದ ವಾರ ಮನೆಯಿಂದ ಹೊರಹೋದ ನವಾಜ್, ಬಿಗ್ ಬಾಸ್ ಕೊಟ್ಟ ವಿಶೇಷ ಅಧಿಕಾರ ಬಳಸಿಕೊಂಡು ನಾಮಿನೇಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.