ಬೆಂಗಳೂರು: ಶುಭಾ ಪೂಂಜಾ ಬೆನ್ನಲ್ಲೇ ಶಮಂತ್ ಬ್ರೋ ಗೌಡ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಮನೆಯಲ್ಲಿ ವಿಶಿಷ್ಟ ಹಾಡುಗಾರಿಕೆ, ಮಿಮಿಕ್ರಿ ಮೂಲಕ ಗಮನ ಸೆಳೆದಿದ್ದ ಶಮಂತ್ ಫಿನಾಲೆಗೆ ಒಂದು ವಾರ ಇರುವಾಗ ಹೊರಹೋಗಿದ್ದಾರೆ. ಮನೆಯಲ್ಲಿ ಹಲವು ಏರಿಳಿತಗಳನ್ನು ಕಂಡಿರುವ ಶಮಂತ್ 113 ದಿನ ಮನೆಯಲ್ಲಿ ಕಳೆದಿದ್ದೇ ಒಂದು ರೋಚಕ ಕಥೆ.

42ನೇ ದಿನ ಕೈಹಿಡಿದ ಅದೃಷ್ಟ: ಬಿಗ್ ಬಾಸ್ ಮನೆಯಲ್ಲಿ ಹಿಂದೆಂದೂ ನಡೆಯದಂತಹ ಅಚ್ಚರಿ ಶಮಂತ್ ವಿಷಯದಲ್ಲಿ ನಡೆದಿತ್ತು. ಆ ವಾರ ಶಮಂತ್ ಎಲಿಮಿನೇಟ್ ಆಗಿದ್ದರು. ಅದೇ ಸಂದರ್ಭ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ ವೈಜಯಂತಿ ಅಡಿಗ ಅವರು ಮೊದಲ ವಾರವೇ ಮನೆಯಿಂದ ಹೊರಹೋಗುವ ಇಂಗಿತ ವ್ಯಕ್ತಪಡಿಸಿದ್ದರು. ಹಾಗಾಗಿ, ವೈಜಯಂತಿ ಬದಲಿಗೆ ಶಮಂತ್ ಅವರನ್ನು ಮುಂದುವರಿಯಲು ಸುದೀಪ್ ಅವಕಾಶ ಕಲ್ಪಿಸಿದ್ದರು.

ಓದಿ:Bigg Boss 8: ಶುಭಾ ಪೂಂಜಾ ಹೊರಹೋಗಿದ್ದಾಯ್ತು. ಈ ವಾರ ಮತ್ತಿಬ್ಬರು ಹೊರಕ್ಕೆ

ಎರಡು ಬಾರಿ ಕ್ಯಾಪ್ಟನ್: ಮೊದಲ ವಾರವೇ ಮರಳು ತುಂಬುವ ಟಾಸ್ಕ್ ಗೆದ್ದು ಶಮಂತ್ ಮನೆಯ ಕ್ಯಾಪ್ಟನ್ ಆಗಿದ್ದರು. ಬಳಿಕ, ಮನೆಯ ಸದಸ್ಯರೆಲ್ಲ ಸೇರಿ ಅವರನ್ನೇ ಎರಡನೇ ವಾರಕ್ಕೆ ಮುಂದುವರಿಸಿದ್ದರು.ಈ ಎರಡು ಬಾರಿ ನಾಯಕನಾಗಿದ್ದಾಗ ಅಬ್ಬರಿಸಿದ್ದ ಶಮಂತ್ ಆ ಬಳಿಕ ಹೇಳಿಕೊಳ್ಳುವ ಮಟ್ಟಿಗೆ ಲವಲವಿಕೆಯಿಂದ ಇರಲಿಲ್ಲ. ಎರಡನೇ ಇನಿಂಗ್ಸ್ನಲ್ಲಿ ಚುರುಕು ಪಡೆದಿದ್ದರು. ಆದರೆ, ಈ ಬಾರಿ ವೀಕ್ಷಕರ ಮತಗಳು ಅವರ ಪರವಾಗಿರಲಿಲ್ಲ.

ಉಳಿದ 6 ಮಂದಿಗೆ ವಾರದ ಮಧ್ಯಾವಧಿಯಲ್ಲಿ ಅಗ್ನಿಪರೀಕ್ಷೆ: ಸದ್ಯ, ಮನೆಯಲ್ಲಿ ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಅರವಿಂದ್ ಮತ್ತು ವೈಷ್ಣವಿ ಉಳಿದಿದ್ದಾರೆ. ಫಿನಾಲೆಗೆ ಐವರೇ ಇರುವುದರಿಂದ ಒಬ್ಬರು ವಾರದ ಮಧ್ಯಾವಧಿಯಲ್ಲಿ ಹೊರಹೋಗುತ್ತಾರೆ. ಹೀಗಾಗಿ, ಮನೆಯ ಸದಸ್ಯರಿಗೆ ಇಂದಿನಿಂದಲೇ ಟೆನ್ಷನ್ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.