ಬೆಂಗಳೂರು: ಕನ್ನಡದ ಬಿಗ್ ಬಾಸ್ ಮನೆಯ 59ನೇ ದಿನ ಚಕ್ರವರ್ತಿ ಚಂದ್ರಚೂಡ್ ತಮ್ಮ ಜೀವನದ ರೋಚಕ ಮತ್ತು ದುರಂತ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ವೇಶ್ಯಾಗೃಹದಲ್ಲಿ ವಾಸ: ಹೌದು, ತಮ್ಮ ಜೀವನದಲ್ಲಿ ನಡೆದ ಒಂದು ಕುತೂಹಲಕಾರಿ ಸಂಗತಿಯನ್ನು ಚಕ್ರವರ್ತಿ ಚಂದ್ರಚೂಡ್ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ಹದಿ ಹರೆಯದಲ್ಲಿರುವಾಗ ಯಾವುದೋ ತಪ್ಪನ್ನು ಮಾಡಿ ಬೆಂಗಳೂರು ಬಿಟ್ಟು ಚೆನ್ನೈಗೆ ತೆರಳಿದ್ದೆ. ರೈಲು ನಿಲ್ದಾಣದಲ್ಲಿ ನಿಂತಿದ್ದ ನನ್ನನ್ನು ಕಂಡ ಕೆಲವರು ವೇಶ್ಯಾಗೃಹಕ್ಕೆ ಕೆಲಸಕ್ಕೆ ಸೇರಿದರು. ಅಲ್ಲಿ ಜೀವನದ ಯಾವುದೋ ಕೆಟ್ಟ ಗಳಿಗೆಯಲ್ಲಿ ಈ ವೃತ್ತಿಗೆ ಬಂದ ದೇವತೆಯರ ಕಷ್ಟಗಳ ದರ್ಶನವಾಯಿತು. ಅವರ ಕಷ್ಟಗಳನ್ನು ನೋಡೊದೆ. ವೇಶ್ಯೆಯೊಬ್ಬರ ಜೊತೆ ಪ್ರೇಮಾಂಕುರವಾಗಿತ್ತು. ಅಲ್ಲಿಂದ ಆಕೆ ತನ್ನನ್ನು ರಕ್ಷಿಸುವಂತೆ ಕೇಳಿದಳು. ಆಮೇಲೆ ಕಸದ ಬುಟ್ಟಿಯಲ್ಲಿ ಆಕೆಯನ್ನು ಕೂರಿಸಿಕೊಂಡು ಅಲ್ಲಿಂದ ಹೊರಗೆ ಕರೆತಂದೆ.

ಈ ಊರು ಬಿಟ್ಟು ತೆರಳಿದರೆ ಸಾಕು. ಕರ್ನಾಟಕಕ್ಕೆ ಹೋದ ಮೇಲೆ ಹೇಗೋ ತಪ್ಪಿಸಿಕೊಳ್ಳಬಹುದು ಎಂದು ಯೋಚಿಸಿದ್ದೆ. ಅವಳನ್ನು ಕರೆದುಕೊಂಡು ರೈಲು ಹತ್ತಿದೆ. ಆದರೆ, ರಾಜ್ಯಕ್ಕೆ ತಲುಪಿದ ಬಳಿಕ ಬಂಗಾರಪೇಟೆ ಬಳಿ ಅವರು ನಮ್ಮನ್ನು ಮತ್ತೆ ಹಿಡಿದುಬಿಟ್ಟರು. ವೇಶ್ಯಾಗೃಹದ ರಹಸ್ಯ ಅರಿತಿದ್ದ ನನಗೆ ಚೆನ್ನಾಗಿ ಥಳಿಸಿದರು. ಪಾಪ ಆ ದೇವತೆಯನ್ನು ಅಲ್ಲಿಯೇ ಹೊಡೆದು ಕೊಂದುಬಿಟ್ಟರು. ಅಲ್ಲಿದ್ದ ಪೊಲೀಸ್ ಪೇದೆಯೊಬ್ಬರು ನನ್ನನ್ನು ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಅವಕಾಶ ಕೊಟ್ಟರು ಎಂದು ಚಂದ್ರಚೂಡ್ ಹೇಳಿದರು.

ಇದಾದ ಬಳಿಕ, ಎರಡು ವರ್ಷ ಕೇದಾರನಾಥ, ಬದರಿನಾಥದಲ್ಲಿ ಕಳೆದು ಬೆಂಗಳೂರಿಗೆ ಬಂದು ಪತ್ರಕರ್ತನಾಗಿ ವೃತ್ತಿ ಆರಂಭಿಸಿದೆ. ಸಿನಿಮೀಯ ರೀತಿಯಲ್ಲಿ ನಡೆದ ನನ್ನ ಜೀವನದ ಈ ಕಥೆಯನ್ನು ಲೇಖನದ ರೂಪದಲ್ಲೂ ಬರೆದಿದ್ದೇನೆ ಎಂದು ಚಕ್ರವರ್ತಿ ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.