ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8 ಅನ್ನು ಗೆದ್ದ ಹಳ್ಳಿ ಹುಡುಗ ಮಂಜು ಪಾವಗಡ ಅವರು ಟ್ರೋಫಿ ಜೊತೆಗೆ ₹ 53 ಲಕ್ಷ ಬಹುಮಾನ ಪಡೆದಿದ್ದಾರೆ. ರನ್ನರ್ ಅಪ್ ಅರವಿಂದ್ ಅವರಿಗೂ ₹ 11 ಲಕ್ಷ ಬಹುಮಾನ ಸಿಕ್ಕಿದೆ. ಮಂಜು ಪಾವಗಡ ಅವರಿಗೆ ನೆಕ್ ಟು ನೆಕ್ ಫೈಟ್ ಕೊಟ್ಟ ಕೆ.ಪಿ. ಅರವಿಂದ್ ಅವರಿಗೆ ನಿರೂಪಕ ಸುದೀಪ್ ಒಂದು ಗಿಫ್ಟ್ ಕೊಟ್ಟಿದ್ದಾರೆ.

ಕೊಂಡಾಡಿದ ಕಿಚ್ಚ: ಬೈಕ್ ರೇಸ್ ಫೀಲ್ಡ್ನಿಂದ ಬಂದ ನೀವು ಅಲ್ಲಿ ಕುಳಿತಿರುವ ಎಲ್ಲ ಕಲಾವಿದರನ್ನು ಮೀರಿಸಿ ವೇದಿಕೆಗೆ ಬಂದಿದ್ದೀರಿ. ಇದು ಸಾಮಾನ್ಯ ಸಾಧನೆ ಅಲ್ಲವೇ ಅಲ್ಲ. ನಮ್ಮೆಲ್ಲರಿಗೂ ಕ್ರೀಡಾಳುಗಳ ಬಗ್ಗೆಅತ್ಯಂತ ಗೌರವವಿದೆ. ನೀವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ ಎಂದು ಕೊಂಡಾಡಿದರು. ಅಷ್ಟೇ ಅಲ್ಲ, ನಮ್ಮ ರಂಗಭೂಮಿಗೂ ನಿಮಗೆ ಸ್ವಾಗತ ಎಂದ ಸುದೀಪ್, ಅರವಿಂದ್ ಅವರಿಗೂ ಒಂದು ಟ್ರೋಫಿ ಇದೆ ಎಂದು ಘೋಷಿಸಿದರು. ಬಳಿಕ, ತಾವು ಹಾಕಿದ್ದ ಜಾಕೆಟ್ ಅನ್ನೇ ತೆಗೆದು ಅರವಿಂದ್ ಅವರಿಗೆ ತೊಡಿಸುವ ಮೂಲಕ ರನ್ನರ್ ಅಪ್ ಆದರೂ ವೀಕ್ಷಕರ ಮನ ಗೆದ್ದ ಕೆ.ಪಿ. ಅರವಿಂದ್ ಅವರಿಗೆ ಅತ್ಯುನ್ನತ ಉಡುಗೊರೆ ಕೊಟ್ಟರು.

ಮುಂದೆ ಚಿತ್ರರಂಗದಲ್ಲಿ ನಿಮಗೆ ಅವಕಾಶ ಸಿಕ್ಕರೂ ಸಿಗಬಹುದು. ಅದರಲ್ಲಿ ಮಂಜು ಪಾವಗಡ ಅವರೂ ಇರಲಿ ಎಂದು ಅರವಿಂದ್ ಮತ್ತು ಮಂಜು ಪಾವಗಡ ಅವರ ಸ್ನೇಹ ಮುಂದುವರಿಯಲು ಹಾರೈಸಿದರು.

ಮತ್ತೆ ಬರಬಹುದಾ?: ಇದಕ್ಕೂ ಮುನ್ನ, ಟಾಪ್ 2 ಸ್ಪರ್ಧಿಗಳಿಬ್ಬರನ್ನೂ ವೇದಿಕೆಗೆ ಕರೆತರಲು ಬಿಗ್ ಬಾಸ್ ಮನೆಗೆ ತೆರಳಿದ್ದ ಸುದೀಪ್ ಅವರಿಗೆ ಅರವಿಂದ್,. ಈ ಮನೆಗೆ ಮತ್ತೆ ಬರಬಹುದಾ? ಎಂದು ಕೇಳಿದ್ದರು. ಅದಕ್ಕೆ ಸುದೀಪ್ , ಖಂಡಿತಾ ಇಲ್ಲ. ಇಲ್ಲಿಯವರೆಗಷ್ಟೆ ಈ ಮನೆ ನಿಮ್ಮದು. ಮುಂದೆ ಬೇರೆಯವರದ್ದಾಗಿರುತ್ತೆ. ಅತಿಥಿಯಾಗಿ ಮಾತ್ರ ಬರಬಹುದು ಎಂದರು. ಅರವಿಂದ್ ಅವರ ಈ ಪ್ರಶ್ನೆ ಅವರು ಬಿಗ್ ಬಾಸ್ ಮನೆಯನ್ನು ಎಷ್ಟು ಹಚ್ಚಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿತ್ತು.

ಇವುಗಳನ್ನೂ ಓದಿ..

Bigg Boss Kannada 8: ಗೆದ್ದು ಬೀಗಿದ ಮಂಜು ಪಾವಗಡ

Bigg Boss 8: ರನ್ನರ್ ಅಪ್ ಕೆ.ಪಿ. ಅರವಿಂದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.