ಬಿಗ್ಬಾಸ್ ಸಿಸನ್ 7 ಇನ್ನೇನು ಎರಡು ವಾರಗಳಲ್ಲಿ ಮುಗಿಯಲಿದೆ ಎಂದು ಬೇಸರಪಟ್ಟುಕೊಳ್ಳುವವರಿಗೆ ಕಲರ್ಸ್ ಕನ್ನಡ ಸಿಹಿ ಸುದ್ದಿಯನ್ನು ನೀಡಿದೆ.

ಎರಡು ವಾರಗಳಲ್ಲಿ ಮುಗಿಯುತ್ತಿದ್ದ ಬಿಗ್ಬಾಸ್ ಶೋ ಅನ್ನು ಇನ್ನೂ ಎರಡು ವಾರ ಮುಂದಕ್ಕೆ ಹಾಕಿ 114 ದಿನಗಳವರೆಗೆ ಆಟ ಮುಂದುವರಿಯಲಿದೆ ಎಂದು ಚಾನಲ್ ತಿಳಿಸಿದೆ.

ಈ ವಾರ ಚಂದನಾ ಅನಂತಕೃಷ್ಣ ಅವರುಮನೆಯಿಂದ ಹೊರಗೆ ಬಂದಿದ್ದು, ಸದ್ಯ ಮನೆಯಲ್ಲಿ 9 ಮಂದಿ ಸ್ಪರ್ಧಿಗಳಿದ್ದಾರೆ. ಹೀಗಿದ್ದೂಎರಡನೇ ವಾರಗಳಲ್ಲಿ ಕಾರ್ಯಕ್ರಮಹೇಗೆ ಮುಗಿಯಲಿದೆ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿತ್ತು. ಅದಕ್ಕೆ ಉತ್ತರವಾಗಿ, ಶನಿವಾರದ ‘ವಾರದ ಜೊತೆ ಕಿಚ್ಚನ ಕಥೆ’ ಸಂಚಿಕೆಯಲ್ಲಿ ಸುದೀಪ್ ಅವರು,‘86 ದಿನಗಳಾಗಿದ್ದು ಇನ್ನು ನಾಲ್ಕು ವಾರಗಳಷ್ಟೇ ಉಳಿದಿದೆ ಎಂದು ಹೇಳುವ ಮೂಲಕ ಬಿಗ್ಬಾಸ್ ಶೋ 98 ದಿನಗಳಲ್ಲ 114 ದಿನಗಳು ನಡೆಯುತ್ತದೆ ಎನ್ನುವ ವಿಚಾರವನ್ನು ತಿಳಿಸಿದ್ದರು.

ಈ ಸೀಸನ್ ಶುರುವಿನಲ್ಲಿಯೇ ಇದನ್ನು ನಿರ್ಧರಿಸಲಾಗಿತ್ತ ಎನ್ನುವ ವಿಚಾರದ ಬಗ್ಗೆ ಚಾನಲ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾತನಾಡಿದ್ದು, ‘ಮೊದಲಿಗೆ 98 ದಿನಗಳೇ ಎಂದು ಯೋಜಿಸಲಾಗಿತ್ತು. ಆದರೆ, ಆಟ ಚೆನ್ನಾಗಿ ಆಗುತ್ತಿರುವುದರಿಂದ ಇದನ್ನು ಮತ್ತೆರಡು ವಾರಗಳಿಗೆ ಹೆಚ್ಚಿಸಲಾಗುತ್ತಿದೆ’ ಎಂದಿದ್ದಾರೆ.

‘ಕಾರ್ಯಕ್ರಮದ ಶುರುವಿನಲ್ಲಿಯೇ ಸುದೀಪ್ ಅವರು ಶೋ ದಿನಗಳನ್ನು ಹೆಚ್ಚಿಸುವ ಬಗ್ಗೆ ಕೇಳಿದ್ದರು. ಆಗ ಇಲ್ಲ ಎಂದೇ ಹೇಳಿದ್ದೆ. ಆದರೆ, ಈಗ ಆ ಬಗ್ಗೆ ಹೇಳಿದಾಗ ಖುಷಿಯಿಂದಲೇ ಒಪ್ಪಿದ್ದಾರೆ. ಅವರ ದಿನಾಂಕಗಳನ್ನು ಶೋಗಾಗಿ ಬದಲಿಸಿಕೊಂಡಿದ್ದಾರೆ’ಎಂದು ಹೇಳಿದರು.

ಇದು ಮೊದಲೇನಲ್ಲ

ಹೀಗೆ ದಿನಗಳನ್ನು ವಿಸ್ತರಿಸುತ್ತಿರುವುದು ಇದೇ ಮೊದಲೇನಲ್ಲ. ಬಿಗ್ಬಾಸ್ ಸೀಸನ್ 4ನಲ್ಲಿಯೂ ದಿನಗಳನ್ನು ಹೆಚ್ಚಿಸಲಾಗಿತ್ತು. 98 ದಿನಗಳವರೆಗಿನ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಿದ್ದೆ, ಉಳಿದ 14 ದಿನಗಳ ಕಾರ್ಯಕ್ರಮ ಕಲರ್ಸ್ ಸೂಪರ್ನಲ್ಲಿ ಪ್ರಸಾರವಾಗಿತ್ತು. ಆ ಸೀಸನ್ನ ವಿನ್ನರ್ ಪಟ್ಟ ಪ್ರಥಮ್ಗೆ ಹಾಗೂ ರನ್ನರ್ ಪಟ್ಟ ಕೀರ್ತಿಗೆ ಸಿಕ್ಕಿತ್ತು.

ಫೆ.1,2ಕ್ಕೆ ಗ್ರಾಂಡ್ ಫಿನಾಲೆ

ವಾಹಿನಿಯ ಯೋಜನೆಯಂತೆಫೆ.1 ಮತ್ತು 2ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಸೀಸನ್ನ ಬಿಗ್ಬಾಸ್ ಪಟ್ಟ ಯಾರಿಗೆ ಸಿಗಲೆ ಎಂದು ತಿಳಿಯಲುಫಿನಾಲೆ ಎಪಿಸೋಡ್ಗಾಗಿಜನ ಕಾತರರಾಗಿದ್ದಾರೆ. ಶೈನ್ ಶೆಟ್ಟಿ, ವಾಸುಕಿ ವೈಭವ್, ಕಿಶನ್ ಬಿಳಗಲಿ, ಕುರಿ ಪ್ರತಾಪ್, ಹರೀಶ್ ರಾಜ್, ಚಂದನ್ ಆಚಾರ್, ಭೂಮಿ ಶೆಟ್ಟಿ, ಪ್ರಿಯಾಂಕಾ, ದೀಪಿಕಾ ಮನೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.