ಬೆಂಗಳೂರು: ನಟ ಸಿಹಿಕಹಿ ಚಂದ್ರು ಮತ್ತೆ ಸೌಟು ಹಿಡಿಯಲಿದ್ದಾರೆ. ಜನಪ್ರಿಯ ಟಿವಿ ಕಾರ್ಯಕ್ರಮ ‘ಬೊಂಬಾಟ್ ಭೋಜನ’ದ ಮೂರನೇ ಆವೃತ್ತಿ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರು, ‘ಸ್ಟಾರ್ ಸುವರ್ಣ ವಾಹಿನಿಯಲ್ಲಿ 2019ರಲ್ಲಿ ಈ ಕಾರ್ಯಕ್ರಮದ ಮೊದಲ ಆವೃತ್ತಿ ಶುರು ಮಾಡಿದ್ದೆ. ಈಗ ಎರಡನೇ ಆವೃತ್ತಿ ಕೂಡ ಮುಕ್ತಾಯವಾಗಿ, ಮೂರನೇ ಆವೃತ್ತಿ ಆರಂಭವಾಗಿದೆ. ಈ ಬಾರಿ ‘ಬಯಲೂಟ’,
‘ಸವಿಯೂಟ’, ‘ಮನೆಊಟ’, ‘ಅಂದ ಚಂದ’, ‘ಅಂಗೈಯಲ್ಲಿ ಆರೋಗ್ಯ’ , ‘ಟಿಪ್ ಟಿಪ್ ಟಿಪ್’ ಹಾಗೂ ‘ಅತಿಥಿ ದೇವೋಭವ’ ಎಂಬ ಏಳು ಬಗೆಯ ವಿಶೇಷತೆಗಳಿದೆ. ಅದಕ್ಕೆ ಸಂಬಂಧಿಸಿದಂತೆ ಪರಿಣತರು ಮಾಹಿತಿ ನೀಡುತ್ತಾರೆ. ಇನ್ನೂ ವಿಶೇಷವೆಂದರೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ.ಗೌರಿ ಸುಬ್ರಹ್ಮಣ್ಯ ಹೇಳಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಡುಂಡಿರಾಜ್ ಅವರ ಹನಿಗವನ ಒಂದನ್ನು ಹೇಳುತ್ತೇನೆ’ ಎಂದರು.

‘ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿವೆ’ ಎಂದು ಈ ತಂಡದ ಸದಸ್ಯೆ ಡಾ.ಗೌರಿ ಸುಬ್ರಹ್ಮಣ್ಯ ಹೇಳಿದರು.

ಸಾಹಿತಿ ಡುಂಡಿರಾಜ್, ಸಿಹಿಕಹಿ ಗೀತಾ, ಖುಷಿ, ಶ್ರೀಪಾದ, ಪರಿ ಈ ತಂಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.