ಲೂಸ್ ಮಾದ ಪಾತ್ರದಿಂದಲೇ ಖ್ಯಾತಿ ಪಡೆದ ಯೋಗಿ ಅವರ ನಿರೂಪಣೆಯ ಕಾರ್ಯಕ್ರಮ ‘ಗಾನ ಬಜಾನ’ ಶನಿವಾರದಿಂದ ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ.

ಇದು ಪ್ರತಿಭಾನ್ವೇಷಣೆಯ ಉದ್ದೇಶದ ಹಾಡಿನ ಕಾರ್ಯಕ್ರಮ ಅಲ್ಲ. ಇದು ವೀಕ್ಷಕರಿಗೆ ಪರಿಪೂರ್ಣ ಮನರಂಜನೆಯನ್ನು ನೀಡುವ ಉದ್ದೇಶದ್ದು ಎಂದು ಹೇಳಿದೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಿರುವ ‘ಸ್ಟಾರ್ ಸುವರ್ಣ’ ವಾಹಿನಿ.

‘ಚಂದನವನ’ದ ಸೆಲೆಬ್ರಿಟಿಗಳಾದ ಶ್ರೀಮುರಳಿ, ಶ್ರೀಲೀಲಾ, ವಸಿಷ್ಠ ಸಿಂಹ, ಸತೀಶ್ ನಿನಾಸಂ, ರಾಧಿಕಾ ನಾರಾಯಣ್, ಅದಿತಿ ಪ್ರಭುದೇವ, ಸೋನು ಗೌಡ, ಶುಭಾ ಪೂಂಜ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಷ್ಟೇ ಅಲ್ಲದೆ, ಇನ್ನೂ ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುಳಿವನ್ನು ವಾಹಿನಿ ನೀಡಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಇದು ಪ್ರಸಾರವಾಗಲಿದೆ. ನಿರೂಪಕ ಯೋಗಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳ ಕಾಲೆಳೆಯುವ, ಕೀಟಲೆ ಮಾಡುವ ಉದ್ದೇಶ ಹೊಂದಿದ್ದಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.