ನವದೆಹಲಿ: ನೆಟ್ಪ್ಲಿಕ್ಸ್ನ ‘ಲಸ್ಟ್ ಸ್ಟೋರಿಸ್‘ ನಟನೆಗೆ ರಾಧಿಕಾ ಆಪ್ಟೆ ಅವರು ಅಂತರರಾಷ್ಟ್ರೀಯ ಎಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದ್ದಾರೆ.ಆ ಮೂಲಕ ನ್ಯೂಯಾರ್ಕ್ನಲ್ಲಿ ನಡೆಯುವ ಅಂತರರಾಷ್ಟ್ರೀಯ ಎಮ್ಮಿ ಅವಾರ್ಡ್–2019ರ ಅತ್ಯುತ್ತಮ ನಟಿ ಪುರಸ್ಕಾರದ ರೇಸ್ನಲ್ಲಿದ್ದಾರೆ.

‘ನಾಮನಿರ್ದೇಶನಪದಕ‘ ಸ್ವೀಕರಿಸಿರುವ ರಾಧಿಕಾ ಆಪ್ಟೆ ಅವರು, ಅದರ ಭಾವಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ರಾಧಿಕಾ ಆಪ್ಟೆ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

‘ಇದು ನಾಮನಿರ್ದೇಶನ ಪದಕವಾಗಿದ್ದು, ಅಂತರರಾಷ್ಟ್ರೀಯ ಎಮ್ಮಿ ಪುರಸ್ಕಾರಕ್ಕೆ ಧನ್ಯವಾದಗಳು! ನಾಮನಿರ್ದೇಶನ ಆಗಿರುವಪ್ರತಿ ವ್ಯಕ್ತಿಗೂ ಈ ಪದಕ ನೀಡಲಾಗಿದೆ. ನನಗೆ ಬಹಳ ಹೆಮ್ಮೆಯಾಗುತ್ತಿದೆ. ಸೋಮವಾರ ನಡೆಯುವ ಪುರಸ್ಕಾರ ಸಮಾರಂಭವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ.’ ಎಂದಿದ್ದಾರೆ.

ಎಮ್ಮಿ ನಾಮಿನೇಶನ್ ಪದಕ ಧರಿಸಿರುವ ಭಾವ ಚಿತ್ರವನ್ನು ಸಹ ಅವರು ತಮ್ಮ ಇನ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟಂಬರ್ನಲ್ಲಿ ಅಂತರರಾಷ್ಟ್ರೀಯ ಎಮ್ಮಿ ಪುರಸ್ಕಾರಕ್ಕೆ ನಾಮನಿರ್ದೇಶನ ಮಾಡಲಾಗಿತ್ತು. ಸೋಮವಾರ ಸಂಜೆ (ಭಾರತದ ಕಾಲಮಾನದ ಪ್ರಕಾರ ಮಂಗಳವಾರ ಬೆಳಗ್ಗೆ) ಪುರಸ್ಕಾರ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.