‘ವೀಕೆಂಡ್ ವಿಥ್ ರಮೇಶ್’– ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ. ಈಗಾಗಲೇ, ಮೂರು ಸೀಸನ್ ಕಂಡಿರುವ ಈ ಕಾರ್ಯಕ್ರಮದ ನಾಲ್ಕನೇ ಸೀಸನ್ ಸದ್ಯದಲ್ಲೇ ಆರಂಭವಾಗಲಿದೆ. ಈ ಕುರಿತು ವಾಹಿನಿಯು ಅಧಿಕೃತವಾಗಿ ಪ್ರೊಮೊವನ್ನು ಪ್ರಸಾರ ಮಾಡುತ್ತಿದೆ.

ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಕಾರ್ಯಕ್ರಮ ಹಲವು ಸಾಧಕರ ಜೀವನವನ್ನು ಪರಿಚಯಿಸಿದೆ. ಹೊಸ ಸೀಸನ್‌ಗೆ ಸಿದ್ಧತೆ ಆರಂಭಗೊಂಡಿದ್ದು, ಕಿರುತೆರೆ ಪ್ರೇಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ. ಮೂರು ಸೀಸನ್‌ಗಳು ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟಿದ್ದವು. ಈ ಬಾರಿ ಸಾಧಕರ ಕುರ್ಚಿಯಲ್ಲಿ ಯಾರೆಲ್ಲಾ ಕೂರಲಿದ್ದಾರೆ ಎಂಬ ಕುತೂಹಲ ಇಮ್ಮಡಿಗೊಂಡಿದೆ.

ಈ ಹಿಂದಿನ ಸೀಸನ್‌ಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟರಾದ ಅಂಬರೀಷ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರವಿಚಂದ್ರನ್, ದರ್ಶನ್, ಸುದೀಪ್, ಯಶ್, ಪ್ರಕಾಶ್ ರೈ, ಗಣೇಶ್, ದುನಿಯಾ ವಿಜಯ್, ದೊಡ್ಡಣ್ಣ, ನಟಿ ಲಕ್ಷ್ಮಿ, ಗಾಯಕ ಎಸ್.ಪಿ. ಬಾಲಸುಬ್ರಮಣ್ಯ ಸೇರಿದಂತೆ ಹಲವು ಸಾಧಕರು ತಾವು ನಡೆದು ಬಂದ ಹಾದಿಯ ಬಗ್ಗೆ ಹೇಳಿದ್ದರು.

ತಮ್ಮ ಬದುಕಿನ ಎಡರುತೊಡರುಗಳ ಬಗ್ಗೆ ಸಾಧಕರು ಮನಬಿಚ್ಚಿ ಮಾತನಾಡಿದ್ದರು. ನಟರ ವೃತ್ತಿಬದುಕಿನ ಏರಿಳಿತ ಕೇಳಿ ನೋಡುಗರ ಕಣ್ಣಾಲಿಗಳು ತೇವಗೊಂಡಿದ್ದವು. ಈ ಬಾರಿಯ ಸೀಸನ್ ಕೂಡ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವುದು ದಿಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.