ಬೊಗೋಟಾ: ಕೊಲಂಬಿಯಾವು ವಿಶ್ವದ ಅತಿದೊಡ್ಡ ವೈವಿಧ್ಯಮಯ ಚಿಟ್ಟೆಗಳ ನೆಲೆಯಾಗಿದೆ ಎಂದು ಲಂಡನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಮಂಗಳವಾರ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ.

ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು 3,642 ಚಿಟ್ಟೆ ಪ್ರಭೇದಗಳನ್ನು ಮತ್ತು ಅವುಗಳಲ್ಲಿ 2,085 ಉಪಜಾತಿಗಳನ್ನು ಪಟ್ಟಿಮಾಡಿದೆ.

200ಕ್ಕೂ ಹೆಚ್ಚು ಚಿಟ್ಟೆ ಪ್ರಭೇದಗಳು ಕೊಲಂಬಿಯಾದಲ್ಲಿ ಮಾತ್ರ ಕಂಡುಬರುತ್ತವೆ ಎಂದು ಸಂಶೋಧನಾ ತಂಡದ ಭಾಗವಾಗಿದ್ದ ಲಂಡನ್ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಹಿರಿಯ ಚಿಟ್ಟೆ ಸಂಗ್ರಹ ಕ್ಯೂರೇಟರ್ ಬ್ಲಾಂಕಾ ಹುಯೆರ್ಟಾಸ್ ಹೇಳಿದ್ದಾರೆ.

ಕೊಲಂಬಿಯಾದಲ್ಲಿ ವ್ಯಾಪಕವಾಗಿ ಪ್ರಯಾಣಿಸಿದ ವಿಜ್ಞಾನಿಗಳ ತಂಡ 3,50,000ಕ್ಕೂ ಹೆಚ್ಚು ಚಿಟ್ಟೆಗಳನ್ನು ಒಳಗೊಂಡ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ.

ಕೊಲಂಬಿಯಾದಲ್ಲಿ ಚಿಟ್ಟೆಗಳನ್ನು ರಕ್ಷಿಸುವುದರಿಂದ ಕಾಡುಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಜತೆಗೆ, ಕಡಿಮೆ ಪ್ರಮಾಣದಲ್ಲಿ ಇಷ್ಟ ಪಡುವ ಚಿಟ್ಟೆ ಜಾತಿಗಳನ್ನು ರಕ್ಷಿಸಲು ಸಹಕಾರಿಯಾಗುತ್ತದೆ ಎಂದು ಹುಯೆರ್ಟಾಸ್ ಹೇಳಿದರು.

2000 ಮತ್ತು 2019 ರ ನಡುವೆ ಕೊಲಂಬಿಯಾ ಸುಮಾರು 2.8 ಮಿಲಿಯನ್ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ. ಇದು ಬೆಲ್ಜಿಯಂನ ಪ್ರದೇಶಕ್ಕೆ ಸಮನಾಗಿದೆ ಎಂದು ರಾಷ್ಟ್ರೀಯ ಯೋಜನಾ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.