ದೇಶದಲ್ಲಿ ಹೆಬ್ಬಕಗಳ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಸಂಖ್ಯೆ 150ಕ್ಕಿಂತ ಕಡಿಮೆ ಮತ್ತು ಕರಿ ನವಿಲುಗಳ ಸಂಖ್ಯೆ 700ಕ್ಕಿಂತ ಕಡಿಮೆ ಇದೆ. ಸರ್ಕಾರವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಎರಡೂ ಪ್ರಭೇದದ ಪಕ್ಷಿಗಳು ನಾಮಾವಶೇಷವಾಗಲಿವೆ ಎಂದು ‘ದಿ ಕಾರ್ಬೆಟ್ ಫೌಂಡೇಷನ್’ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಈ ಪಕ್ಷಿಗಳ ಅವಸಾನಕ್ಕೆ ಕಾರಣವಾಗುತ್ತಿರುವ ಅಂಶಗಳು ಮತ್ತು ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರತಿಷ್ಠಾನವು ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ

ಕಾರಣಗಳು

ಗುಜರಾತಿನ ಕಛ್ ಮತ್ತು ರಾಜಸ್ಥಾನದ ಕೆಲವು ಪ್ರದೇಶಗಳನ್ನು ಹೆಬ್ಬಕ ಮತ್ತು ಕರಿ ನವಿಲುಗಳ ಆವಾಸ ಸ್ಥಾನ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪವನ ವಿದ್ಯುತ್ ಮತ್ತು ಸೌರವಿದ್ಯುತ್ ಘಟಕಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಇಂತಹ ಘಟಕಗಳಿಂದ ವಿದ್ಯುತ್ ಸಾಗಣೆಗೆ ಬಳಸುವ ಹೈಟೆನ್ಷನ್ ವಿದ್ಯುತ್ ಲೇನ್ಗಳು ಈ ಪಕ್ಷಿಗಳಿಗೆ ಮಾರಕವಾಗಿವೆ. ಇಂತಹ ಲೇನ್ಗಳನ್ನು ನೆಲದಡಿಯಲ್ಲಿ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜತೆಗೆ ಈ ಪಕ್ಷಿಗಳಿಗೆ ಮಾರಕವಾಗಿರುವ ಇತರ ಕಾರಣಗಳನ್ನೂ ವರದಿಯಲ್ಲಿ ಪಟ್ಟಿ ಮಾಡಲಾಗಿದೆ.

lಆವಾಸ ಸ್ಥಾನದ ಸ್ವರೂಪವನ್ನು ಬದಲಿಸುವಂತಹ ಅಭಿವೃದ್ಧಿ ಚಟುವಟಿಕೆಗಳು ಮತ್ತು ಹುಲ್ಲುಗಾವಲಿನಲ್ಲಿ ಜಾನುವಾರುಗಳನ್ನು ಅತಿಯಾಗಿ ಮೇಯಿಸುವುದು. ಇದರಿಂದ ಈ ಪಕ್ಷಿಗಳು ಗೂಡುಕಟ್ಟಲು, ಮೊಟ್ಟೆ ಇಡಲು ಮತ್ತು ಮರಿಗಳನ್ನು ಮಾಡಲು ಮರೆ ಇಲ್ಲದಂತಾಗುತ್ತಿದೆ

lಈ ಪ್ರದೇಶಗಳಲ್ಲಿ ನಾಯಿಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿದೆ. ಪಕ್ಷಿಗಳನ್ನು ಈ ನಾಯಿಗಳು ಬೇಟೆಯಾಡುತ್ತವೆ, ಮೊಟ್ಟೆಗಳನ್ನು ತಿನ್ನುತ್ತವೆ. ಜನರೂ ಈ ಪಕ್ಷಿಗಳನ್ನು ಬೇಟೆಯಾಡಿದ ನಿದರ್ಶನಗಳಿವೆ

lಆವಾಸ ಸ್ಥಾನದಲ್ಲಿ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳ ಬಳಕೆ ತೀವ್ರಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಹೆಬ್ಬಕ ಮತ್ತು ಕರಿನವಿಲುಗಳ ಆಹಾರಗಳಾದ ಕೀಟಗಳು, ಹುಳಗಳು, ಮಿಡತೆಗಳು, ಹಲ್ಲಿಗಳು, ಇಲಿಗಳ ಸಂಖ್ಯೆ ಕಡಿಮೆಯಾಗಿದೆ. ಆಹಾರದ ಕೊರತೆ ಎದುರಾಗಿರುವ ಕಾರಣ ಈ ಪಕ್ಷಿಗಳು ನಾಶವಾಗುತ್ತಿವೆ

ಪರಿಹಾರೋಪಾಯಗಳು

lಎಲ್ಲಾ ಹೈಟೆನ್ಷನ್ ಲೇನ್ಗಳನ್ನು ಕ್ಷಿಪ್ರವಾಗಿ ನೆಲದಡಿಗೆ ಹಾಕುವುದು ಸಾಧ್ಯವಿಲ್ಲ. ಹಾಗಾಗಿ ಈ ಲೇನ್ಗಳತ್ತ ಹಕ್ಕಿಗಳು ಬರದಂತೆ ‘ಬರ್ಡ್ ಫ್ಲೈಟ್ ಡೈವರ್ಟರ್’ಗಳನ್ನು ಹಾಕಬೇಕು. ಹೊಳೆಯುವ ಸಾಮರ್ಥ್ಯವಿರುವ ಈ ಸಾಧನಗಳು ಪಕ್ಷಿಗಳು ತಮ್ಮತ್ತ ಹಾರಿಬರುವುದನ್ನು ತಡೆಯುತ್ತವೆ

lಈ ಪಕ್ಷಿಗಳ ಆವಾಸ ಸ್ಥಾನದಲ್ಲಿರುವ ಸ್ಥಳೀಯರಲ್ಲಿ ಪಕ್ಷಿಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು. ಕೃಷಿ, ಹೈನುಗಾರಿಕೆಯಲ್ಲಿ ಈ ಪಕ್ಷಿಗಳಿಗೆ ಇರುವ ಅಪಾಯವನ್ನು ಹೋಗಲಾಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು

l→ಕೃತಕವಾಗಿ ಈ ಪಕ್ಷಿಗಳ ಸಂತಾನೋತ್ಪತಿ ನಡೆಸಲು ಕ್ರಮ ತೆಗೆದುಕೊಳ್ಳಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.