ಹೈಮೆನೋಪ್ಟೆರ (Hymenoptera) ಎಂಬ ಗುಂಪಿಗೆ ಸೇರಿದ ಕೀಟಗಳೆಂದರೆ, ಭ್ರಮರ, ದುಂಬಿ, ಕಡಜಗಳು.

ಬಹುತೇಕ ಕಡಜಗಳು ಪರಭಕ್ಷಕ ಮತ್ತು ಪರತಂತ್ರ ಜೀವಿಗಳಾಗಿ ಗಮನ ಸೆಳೆಯುತ್ತವೆ. ನಿಸರ್ಗದಲ್ಲಿನ ಇತರೆ ಕೀಟಗಳನ್ನು ಭಕ್ಷಿಸುವುದು ಇವುಗಳ ಉಳಿವಿಗೆ ಅನಿವಾರ್ಯ. ಇದು ಅವುಗಳ ಜೀವನಕ್ರಮದ ಪ್ರಮುಖ ಭಾಗ.

ಈ ಪ್ರಕ್ರಿಯೆಯಿಂದ, ವಿವಿಧ ಬೆಳೆಗಳ ಮೇಲೆ ಹಾನಿ ಉಂಟು ಮಾಡುವ ಪೀಡೆ ಕೀಟಗಳನ್ನು ನಿಯಂತ್ರಿಸುವುದಕ್ಕೆ ಕಡಜಗಳು ರೈತರಿಗೆ ನೆರವಾಗುತ್ತಿವೆ. ಹಾಗಾಗಿ ಇವುಗಳನ್ನು ಉಪಕಾರಿ ಕೀಟಗಳು ಅಥವಾ ಸ್ವಾಭಾವಿಕ ಶತ್ರುಗಳು ಎಂದು ಕರೆಯುತ್ತಾರೆ.

ಇವು ಗಾತ್ರದಲ್ಲಿ, ಗುಂಡು ಸೂಜಿಯ ತಲೆಯ ಗಾತ್ರದಿಂದ ಹಿಡಿದು ಸುಮಾರು 2 ಇಂಚುಗಳಷ್ಟು ದೊಡ್ಡದಿರುತ್ತವೆ. ಟ್ರೈಕೋಗ್ರಾಮ ಎಂಬ ಜೇಡ ಕೀಟ, ಗುಂಡುಸೂಜಿಯ ತುದಿಮೂತಿಯಲ್ಲೂ ಕೂರಬಲ್ಲಷ್ಟು ಪುಟ್ಟ ಗಾತ್ರದಲ್ಲಿರುತ್ತದೆ.

ಪರಭಕ್ಷಕ ಕೀಟಗಳು ಇತರೆ ಕೀಟಗಳನ್ನು ಸಂಪೂರ್ಣವಾಗಿ ನಾಶಪಡಿಸಿ ತಿನ್ನುವುದಲ್ಲದೇ, ಒಮ್ಮೆಗೆ ಒಂದಕ್ಕಿಂತ ಹೆಚ್ಚು ಕೀಟಗಳನ್ನು ಭಕ್ಷಿಸುವ ಸಾಮರ್ಥ್ಯ ಹೊಂದಿವೆ. ದೊಡ್ಡ ಪ್ರಮಾಣದಲ್ಲಿ ಕೀಟಗಳನ್ನು ಬೇಟೆಯಾಡಿದರೂ ಅದಕ್ಕೆವ್ಯತಿರಿಕ್ತವಾಗಿ ಕೇವಲ ಒಂದು ಕೀಟ ಅಥವಾ ಅದರ ಲಾರ್ವ ಹಾಗೂ ಅವುಗಳ ಮೊಟ್ಟೆಯ ಒಳಗೆ ಅಥವಾ ಮೇಲೆ ತಮ್ಮ ಮೊಟ್ಟೆಗಳನ್ನಿಡುತ್ತವೆ.

ಮೊಟ್ಟೆಯಿಂದ ಹೊರಬರುವ ಮರಿಗಳಿಗೆ ಕೂಡಲೇ ಆಹಾರ ದೊರೆಯಬೇಕು ಎಂಬ ಉದ್ದೇಶದಿಂದ ಈ ರೀತಿ ಪೋಷಕ ಕಾಳಜಿ ತೋರುತ್ತವೆ.

ಇಂದಿನ ಕೀಟ ಪ್ರಪಂಚದಲ್ಲಿ ವಿಶೇಷ ಮತ್ತು ಅಪರೂಪವೆನಿಸುವ ಜೇಡ ಕಡಜದ (Spider wasp) ಬಗ್ಗೆ ತಿಳಿಯೋಣ.

ಹೆಸರೇ ಹೇಳುವಂತೆ ಈ ಕಡಜವು ವಿವಿಧ ಜೇಡಗಳ ಮೇಲೆ ದಾಳಿ ಮಾಡಿ ತನ್ನ ವಿಷಮುಳ್ಳಿನಿಂದ ಅವುಗಳ ಅಂಗಾಂಗಳು ಕಾರ್ಯನಿರ್ವಹಿಸದಂತೆ ಪಕ್ಷವಾತ ಅಥವಾ ಪಾರ್ಶ್ವವಾಯು (Paralyze) ಸ್ಥಿತಿಗೆ ದೂಡುತ್ತದೆ.

ನಂತರ ಆ ಜೇಡವನ್ನು ತನ್ನ ಬಾಯಿಯಲ್ಲಿ ಕಚ್ಚಿ ತಂದು ನೆಲದೊಳಗೆ ತಾನು ಮಾಡಿರುವ ಗೂಡು ತೂಬಿನಲ್ಲಿಡುತ್ತದೆ. ಆ ಜೇಡದ ಮೇಲೆ ತನ್ನ ಮೊಟ್ಟೆಯನ್ನಿಟ್ಟು ಗೂಡನ್ನು ಮುಚ್ಚುತ್ತದೆ. ಪುನಃ ಸತ್ತ ಇರುವೆಗಳನ್ನು ಹೊತ್ತು ತಂದು ತನ್ನ ಗೂಡಿನ ಸುತ್ತಲು ಹರಡುತ್ತದೆ. ಈ ಇರುವೆಗಳ ದೇಹದಲ್ಲಿರುವ ಕೆಲವು ಬಗೆಯ ರಾಸಾಯನಿಕಗಳು, ಇತರೆ ಪರಭಕ್ಷಕ ಕೀಟಗಳು ಗೂಡಿನ ಬಳಿ ಬಾರದಂತೆ ತಡೆಯೊಡ್ಡುತ್ತವೆ. ಜೇಡ ಕಡಜದ ಈ ತಂತ್ರ ಬೆರಗು ಮೂಡಿಸುವಂಥದ್ದು.

ಒಂದೆರೆಡು ದಿನಗಳ ನಂತರ ಜೇಡದ ಮೈಮೇಲಿಟ್ಟ ಮೊಟ್ಟೆ ಒಡೆದು ಹೊರ ಬಂದ ಮರಿಯು ಜೇಡ ಹುಳುವಿನ ಮೃದು ಅಂಗಾಂಗಗಳನ್ನು ತಿನ್ನುತ್ತಾ ಬೆಳೆಯುತ್ತದೆ.

ತನ್ನ ಮರಿಗಳ ಬೆಳವಣಿಗೆಗೆ ತಾಜಾ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಈ ಕಡಜ ಬೇಟೆಯಾಡಿದ ಜೇಡಗಳನ್ನು ಕೊಲ್ಲದೇ, ನಿತ್ರಾಣಗೊಳಿಸಿ ಮರಿಗಳಿಗಾಗಿ ಅಲ್ಲಿಡುತ್ತದೆ. ಮರಿಗಳು ಕೋಶಾವಸ್ಥೆ ತಲುಪುವವರೆಗೂ ಈ ಜೇಡವನ್ನೂ ತಿಂದು ಬೆಳೆಯುತ್ತವೆ.

ಅಂತಿಮ ಹಂತ ತಲುಪಿದ ಕಡಜದ ಮರಿಯು ಮುಂದುವರೆದು ರೇಷ್ಮೆಯಂತಹ ದಾರದ ಎಳೆಗಳನ್ನು ಹೆಣೆಯುತ್ತ ಕೋಶಾವಸ್ಥೆಗೆ ತಲುಪುತ್ತದೆ.

ಜೀವನಕ್ರಮ ಮತ್ತು ವರ್ತನೆ
ಪಾಂಪಿಲಿಡೆ (Pompilidae) ಕುಟುಂಬಕ್ಕೆ ಸೇರಿದೆ ಈ ಕಡಜ ಸದಾ ಒಂಟಿಯಾಗಿರಲು ಇಷ್ಟಪಡುತ್ತದೆ. ವೇಗವಾಗಿ ಹಾರುವುದಕ್ಕೂ ಹೆಸರುವಾಸಿ. ಇದರ ಮುಂಗಾಲುಗಳು ಬಲಿಷ್ಠವಾಗಿದ್ದು, ನೆಲದಲ್ಲಿ ಗೂಡು ಕಟ್ಟುವಾಗ ಮಣ್ಣು ಅಗೆಯಲು ನೆರವಾಗುತ್ತವೆ. ಇದಕ್ಕೆ ನೆರವಾಗುವವಂತೆ ಎದೆಯ ಮಾಂಸಖಂಡಗಳು ಬಲಿಷ್ಠವಾಗಿರುತ್ತವೆ.

ಮರಿ ಹಂತದಲ್ಲಿದ್ದಾಗ ಜೇಡ ಹುಳುಗಳನ್ನು ತಿಂದು ಬೆಳೆದರೂ ವಯಸ್ಕ ಹಂತ ತಲುಪಿದ ಮೇಲೆ ಹೂವುಗಳ ಮಕರಂದ ಹೀರಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ.ನೀಲಗಿರಿ ಹೂವುಗಳೆಂದರೇ ಇವಕ್ಕೆ ಬಹಳ ಇಷ್ಟ.

ಸಂತಾನೋತ್ಪತ್ತಿ
ಹೆಣ್ಣು ಕಡಜಗಳನ್ನು ಆಹ್ವಾನಿಸಲು ಗಂಡು ಕಡಜಗಳು ಸೂಕ್ತ ಸ್ಥಳಗಳನ್ನು (Perch territories) ನಿಗದಿಪಡಿಸಿಕೊಳ್ಳುತ್ತದೆ. ಆ ಸ್ಥಳಗಳಲ್ಲಿ ಒಂದೆಡೆ ಕೂತು ಅಲ್ಲಿ ಸುಳಿದಾಡುವ ಹೆಣ್ಣುಗಳಲ್ಲಿ ಸೂಕ್ತ ಹೆಣ್ಣು ಯಾವುದೆಂದು ಹೊಂಚು ಹಾಕುತ್ತ ಅದರೊಟ್ಟಿಗೆ ಸಮಾಗಮವಾಗುತ್ತದೆ.

ಕಾಂತಿಯುತವಾದ ವಿವಿಧ ಬಣ್ಣಗಳಲ್ಲಿ ಹೊಳೆಯುವ ಈ ಜೇಡ ಕಡಜಗಳಲ್ಲಿ 4500ಕ್ಕೂ ಹೆಚ್ಚು ಪ್ರಭೇದಗಳಿವೆ ಎಂಬುದು ಕೀಟ ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.