ಬೆಂಗಳೂರು: ಇಂದು, ಜೂನ್ 5 ರಂದು ವಿಶ್ವ ಪರಿಸರ ದಿನ. ಈ ಹೊತ್ತಲ್ಲಿಕೆಲವು ಪ್ರಶ್ನೆಗಳನ್ನು ಮುಂದಿಡುವುದು ಸೂಕ್ತ ಅನಿಸುತ್ತಿದೆ. ಕೋವಿಡ್ ಲಾಕ್ಡೌನ್ ಬೆಂಗಳೂರಿನಲ್ಲಿ ನಮ್ಮ ಅಸ್ತಿತ್ವವನ್ನು ಗುರುತಿಸಿ ಪರಿಸರಕ್ಕಾಗಿ ನಮ್ಮ ಕಣ್ಣು ತೆರೆಯಲು ಸಹಾಯ ಮಾಡಿದೆ. ನಾವು ಏನು ಕಲಿತಿದ್ದೇವೆ? ನಾವು ಕಲಿತ ವಿಷಯಗಳ ಬಗ್ಗೆ ಏನಾದರೂ ಮಾಡಲು ನಾವು ಬಯಸುತ್ತೇವೆಯೇ?

ಕೋವಿಡ್ ಲಾಕ್ಡೌನ್ ನಮ್ಮ ಜೀವನಕ್ಕೆ ಒಂದು ಪಾಠವಾದಂತಾಗಿದೆ. ಇದು ನಮಗೆ ಅಪಾರ ಕಷ್ಟಗಳನ್ನು ಮತ್ತು ಸಂಕಟಗಳನ್ನುಂಟುಮಾಡಿದೆ. ಆದರೂ ಇದು ಬೆಂಗಳೂರಿನ ಪರಿಸರದ ಸ್ವಚ್ಛತೆಗೆ ಸಹಕಾರಿಯಾಗಿದೆ ಎಂಬುದುಸಾಬೀತಾಯಿತು. ಮಾಲಿನ್ಯ ಮೂಲಗಳನ್ನು ಮುಚ್ಚಿದ್ದರಿಂದ ಕೆರೆಗಳು ಮತ್ತು ಕಾಲುವೆಗಳು ಸ್ವಚ್ಛವಾದವು. ರಸ್ತೆಯ ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಗಾಳಿ ಶುದ್ಧವಾಯಿತು. ಬೆಂಗಳೂರು ಸ್ವಚ್ಛ ಮತ್ತು ಹಸಿರು ಬಣ್ಣದ್ದಾಗಿತ್ತು. ನಮ್ಮ ಪರಿಸರದ ಹಾಳಾಗಿ ದುಃಖಕರ ಸ್ಥಿತಿಗೆ ತಲುಪಲು ನಾವು, ನೀವು ಮತ್ತು ನಾನು ಎಲ್ಲರೂ ಜವಾಬ್ದಾರರು. ಆದರೆ ನಾವು, ನೀವು ಮತ್ತು ನಾನು ಅದನ್ನು ಒಟ್ಟಿಗೆ ಸರಿಪಡಿಸಬಹುದು ಎಂಬುದು ಇಲ್ಲಿ ಗೊತ್ತಾಯಿತು.

ಬೆಂಗಳೂರನ್ನು ಪಿಂಚಣಿದಾರರ ಸ್ವರ್ಗ ಎಂದು ಕರೆಯಲಾಗುತ್ತಿತ್ತು - ಎಲ್ಲರೂ ಬರಲು, ಉಳಿಯಲು ಮತ್ತು ಅಭಿವೃದ್ಧಿ ಹೊಂದಲು ಬಯಸುವ ಪರಿಸರ. ನಾವು ನಗರ ಮತ್ತು ಅದರ ಸಂಪನ್ಮೂಲಗಳನ್ನು ಬಳಸಿಕೊಂಡಿದ್ದೇವೆ. ನಾವು ಮರಗಳನ್ನು ಕತ್ತರಿಸಿ, ಕೆರೆಗಳ ಮೇಲೆ ಅತಿಕ್ರಮಣ ಮಾಡಿದ್ದೇವೆ, ಒಳಚರಂಡಿಯನ್ನು ನೈಸರ್ಗಿಕ ಕಾಲುವೆಗಳ ವ್ಯವಸ್ಥೆಗೆ ಪಂಪ್ ಮಾಡಿದ್ದೇವೆ. ಒಂದು ಕಾಲದಲ್ಲಿ ಜಲಮೂಲಗಳಿದ್ಧ ಸ್ಥಳಗಳಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ್ದೇವೆ ಮತ್ತು ಹೀಗೇ ಈ ರೀತಿಯ ಪಟ್ಟಿ ಮುಂದುವರಿಯುತ್ತದೆ. ಇಂದಿನ ಬೆಂಗಳೂರು ನಮ್ಮ ಅಪಾರ ದುರಾಶೆಯ ಪರಿಣಾಮವಾಗಿದೆ. ನಮ್ಮ ಮಕ್ಕಳಲ್ಲಿ ನಾಲ್ವರಲ್ಲಿ ಒಬ್ಬರು ಆಸ್ತಮಾ ರೋಗಿಗಳು.

ಸುರಂಗದ ಕೊನೆಯಲ್ಲಿ ಬೆಳಕು ಇದೆ. ನಾವು ವೈಭವವನ್ನು ಮರಳಿ ತರಬಹುದು. ನಮ್ಮ ನಗರದ ಭವಿಷ್ಯವು ತಾಂತ್ರಿಕವಾಗಿ ಉತ್ತಮ ಮತ್ತು ಪರಿಸರ ಸಮರ್ಥನೀಯವಾದ ಅಭಿವೃದ್ಧಿ ಯೋಜನೆಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸರ್ಕಾರ, ನಾಗರಿಕರು ಮತ್ತು ಗುಂಪುಗಳು ಒಟ್ಟಾಗಿ ಬಂದು ಕೆಲಸ ಮಾಡುತ್ತಿದೆ. ಸಾಮೂಹಿಕ ಬುದ್ಧಿವಂತಿಕೆ ಒಂದು ಸದ್ಗುಣ. ಜನರ ವೇದಿಕೆಯಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಸಾಮಾನ್ಯವಾಗಿ ಪರಿಸರವನ್ನು ಉಳಿಸಲು ಮತ್ತು ಅದರಲ್ಲೂ ಬೆಂಗಳೂರಿನ ಕೆರೆಗಳನ್ನು ಉಳಿಸಲು ಜನರ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.

ವಿಶ್ವ ಪರಿಸರ ದಿನಾಚರಣೆಯ ಈ ದಿನದಂದು, ಬೆಂಗಳೂರಿಗರು ನಮ್ಮ ಬೆಂಗಳೂರು ಉಳಿಸಲು ನಮ್ಮ ಕೈಲಾದಷ್ಟು ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ನಾವು ತ್ಯಾಜ್ಯವನ್ನು ಬೇರ್ಪಡಿಸೋಣ, ಹೆಚ್ಚು ಸಸಿಗಳನ್ನು ನೆಡೋಣ, ಕೆರೆಗಳ ಅತಿಕ್ರಮಣವನ್ನು ನಿಲ್ಲಿಸೋಣ. ನಮ್ಮ ಮಕ್ಕಳಿಗೆ ಸ್ವಚ್ಛ ಮತ್ತು ಹಸಿರು ಬೆಂಗಳೂರು ನೀಡೋಣ.ನಾವು ‘ಜೀವವೈವಿಧ್ಯತೆಯನ್ನು ಆಚರಿಸೋಣ’

-ಹರೀಶ್ ಕುಮಾರ್, ಪ್ರಧಾನ ವ್ಯವಸ್ಥಾಪಕರು, ನಮ್ಮ ಬೆಂಗಳೂರು ಫೌಂಡೇಷನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.