ಕಲಬುರಗಿ: ಕುಡಿಯುವ ನೀರು ಪೂರೈಸುವ ಘಟಕಗಳು ಐಎಸ್‌ಐ ಗುರುತು ಹೊಂದಿರುವುದು ಕಡ್ಡಾಯ ಎಂಬ ಆದೇಶ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಬೆಂಗಳೂರೂ ಸೇರಿ ರಾಜ್ಯದ ಎಲ್ಲಾ ನಗರ, ತಾಲ್ಲೂಕು ಕೇಂದ್ರಗಳಲ್ಲಿ ಕ್ಯಾನ್‌ಗಳ ಮೂಲಕ ವಿಷಯುಕ್ತ ನೀರು ಪೂರೈಕೆಯಾಗುತ್ತಿದೆ.

ಕಲಬುರಗಿ ನಗರದಲ್ಲಿ 44 ನೀರು ಶುದ್ಧೀಕರಣ ಘಟಕಗಳು ಅನುಮತಿ ಪಡೆದಿದ್ದು, ಅವುಗಳಲ್ಲಿ 22ಕ್ಕೆ ಮಾತ್ರ ಐಎಸ್‌ಐ ಮಾರ್ಕ್ ಇದೆ. ಜಿಲ್ಲೆಯಾದ್ಯಂತ 400ಕ್ಕೂ ಹೆಚ್ಚು ಅನಧಿಕೃತ ನೀರು ಸರಬರಾಜು ಘಟಕಗಳಿವೆ. 20 ಲೀಟರ್ ನೀರಿನ ಒಂದು ಕ್ಯಾನ್‌ಗೆ ₹ 10 ರಿಂದ ₹ 20 ಪಡೆಯುತ್ತಾರೆ. ಅಧಿಕೃತ ಘಟಕಗಳ ನೀರಿಗೆ ₹ 30ರಿಂದ ₹ 50ರವರೆಗೂ ದರವಿದೆ. ಒಂದು ವರ್ಷದ ಅವಧಿಯಲ್ಲಿ 18 ಅನಧಿಕೃತ ಘಟಕಗಳ ವಿರುದ್ಧ ಕ್ರಮ ಜರುಗಿಸಿ ಬೀಗ ಹಾಕಿಸಲಾಗಿದೆ.

ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ‘ಕ್ಯಾನ್ ಮಾಫಿಯಾ’ ವ್ಯಾಪಕವಾಗಿದೆ. ಇಲ್ಲಿನ ನೀರಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದೆ. ಈ ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಕಲ್ಲು, ಕರುಳುಬೇನೆ, ಚರ್ಮರೋಗ ಹಾಗೂ ಕೂದಲು ಉದುರುವಂಥ ಸಮಸ್ಯೆ ಕಾಡುತ್ತವೆ. ಸುಣ್ಣದಕಲ್ಲಿನ ಅಂಶವೂ ಹೆಚ್ಚಿರುವ ಕಾರಣ ಬೋರ್‌ವೆಲ್ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿದೆ. ನೀರು ಪೂರೈಸುವ ಘಟಕಗಳು ಇಂಥದ್ದೇ ಬೋರ್‌ವೆಲ್‌ಗಳ ಮೂಲಕ ಕ್ಯಾನ್‌ನಲ್ಲಿ ನೀರು ತುಂಬಿಸಿ, ಮನೆಗಳಿಗೆ ತಲುಪಿಸುತ್ತಾರೆ.

ಕಿತ್ತೂರು ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲೂ ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆಗಳಿಂದ ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳು ಕೆಟ್ಟಿರುವ ಕಾರಣ ಹಳ್ಳಿಗಳ ಜನರೂ ಕ್ಯಾನ್ ನೀರಿಗೆ ಮೊರೆ ಹೋಗಿದ್ದಾರೆ.

ಮೈಸೂರು, ಶಿವಮೊಗ್ಗ, ಬೆಳಗಾವಿ, ಗದಗ, ಹಾವೇರಿ, ಕೊಡಗು, ಮಂಡ್ಯದಲ್ಲಿ ಐಎಸ್ಐ ದೃಢೀಕೃತ ಘಟಕಗಳು ಬೆರಳೆಣಿಕೆಯಷ್ಟು ಇವೆ. ಈ ಜಿಲ್ಲಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹೆಚ್ಚಿವೆ. ವಿಜಯಪುರದಲ್ಲಿ ಐಎಸ್‌ಐ ದೃಢೀಕರಣ ಪ್ರಮಾಣ ಪತ್ರ ಪಡೆದ 24 ಆರ್‌ಒ ಘಟಕಗಳಿವೆ. ಈ ವರ್ಷ 27 ಘಟಕಗಳ ಮೇಲೆ ದಾಳಿ ಮಾಡಿ ದೂರು ದಾಖಲಿಸಿಕೊಂಡು, ₹ 7.27 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಇವುಗಳನ್ನೂ ಓದಿ

ಒಳನೋಟ| ಹೊನ್ನಕಿರಣಗಿಯಲ್ಲಿ ಫ್ಲೋರೈಡ್ ನೀರು: ಮಕ್ಕಳಲ್ಲಿ ಅಂಗ ಊನ, ಅಕಾಲ ಮುಪ್ಪು

ಒಳನೋಟ| ಮಳೆಯಿಂದ ಹೆಚ್ಚಳವಾದ ಅಂತರ್ಜಲ

ಒಳನೋಟ| ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಿಂದ ಜಾರಿಕೊಳ್ಳುವ ಏಜೆನ್ಸಿ

ಒಳನೋಟ| ಅತಿವೃಷ್ಟಿಯಾದರೂ ಬಾಗಲಕೋಟೆಯಲ್ಲಿ ಕುಸಿದ ಅಂತರ್ಜಲ ಮಟ್ಟ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.